18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19  ಲಸಿಕೆ ನೋಂದಣಿ ಆರಂಭ
News

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೋಂದಣಿ ಆರಂಭ

April 29, 2021

ನವದೆಹಲಿ, ಏ. 28- 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಮೇ 1ರಿಂದ ಆರಂಭವಾಗಲಿದ್ದು, ಅದಕ್ಕೆ ಅರ್ಹರು ಹೆಸರು ನೋಂದಾ ಯಿಸುವ ಪ್ರಕ್ರಿ0iÉುಗೆ ಬುಧವಾರ ಸಂಜೆ 4 ಗಂಟೆಗೆ ಚಾಲನೆ ದೊರೆಯಲಿದೆ. 18-45 ವರ್ಷ ವಯೋ ಮಿತಿಯ ಎಲ್ಲಾ ಅರ್ಹ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿನ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಹೆಸರು ನೋಂದಾಯಿಸಿ, ಲಸಿಕೆ ಪಡೆಯುವ ಸಮಯವನ್ನು ನಿಗದಿ ಮಾಡ ಬಹುದು. ಈ ವಯೋಮಿತಿಯವರು ನೇರವಾಗಿ ಆಸ್ಪತ್ರೆಗೆ ಬಂದು ಅಲ್ಲಿ0iÉುೀ ಹೆಸರು ನೋಂದಾಯಿಸುವ ಅವಕಾಶ ವನ್ನು ಸರ್ಕಾರ ನೀಡಿಲ್ಲ. ಲಸಿಕಾ ಕೇಂದ್ರಗಳ ಬಳಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದ್ದು, ಆನ್’ಲೈನ್ ಮೂಲಕ ಹೆಸರು ನೋಂದಾ ಯಿಸಿದವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ: ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ನಾಗರಿಕ ರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸು ತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು 2 ಡೋಸ್ ಲಸಿಕೆಗೆ ತಲಾ ರೂ. 250 ನಂತೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ, 18-45 ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ನೀಡಲು ನಿರಾಕರಿಸಿದೆ.

ಲಸಿಕಾ ಕಂಪನಿಗಳಿಂದ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆ, ಸಂಸ್ಥೆಗಳು ನೇರವಾಗಿ ಖರೀದಿಸಿ ಲಸಿಕೆ ವಿತರಣೆಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಈ ವಯೋಮಿತಿಯವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡರೆ ದುಬಾರಿ ಶುಲ್ಕ ನೀಡಬೇಕಾಗುತ್ತದೆ. ಆದರೆ, ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಸುಮಾರು 23 ರಾಜ್ಯಗಳು 18-45 ವಯೋಮಿತಿಯವರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುವ ಅವಕಾಶ ಕಲ್ಪಿಸಿವೆ.

ಕೋವಿನ್‍ನಲ್ಲಿ ನೋಂದಣಿ: ಇದರಂತೆ ಮೇ 1ರಿಂದ ಕೋವಿಡ್ ಲಸಿಕೆ ಪಡೆಯುವ ಫಲಾನುಭವಿಗಳು ಇಂದಿನಿಂದಲೇ ಕೋವಿನ್ (ಅo-Wiಟಿ) ಆ್ಯಪ್‍ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ನೋಂದಾವಣಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಮಾಹಿತಿ ನೀಡಿದೆ. 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆ ಪಡೆಯಲು ಇಂದು ಸಂಜೆ 4 ರಿಂದ ಛಿoತಿiಟಿ. gov.iಟಿ ಹಾಗೂ ಆರೋಗ್ಯ ಸೇತು ಆ್ಯಪ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ನೀಡ ಲಾಗಿದೆ ಎಂದು ಹೇಳಿದೆ.

ಲಸಿಕೆ ಆರಂಭವಾಗುತ್ತಿದ್ದಂತೆ0iÉುೀ ಲಸಿಕಾ ಕೇಂದ್ರ ಗಳಲ್ಲಿ ಉಂಟಾಗುವ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ0iÉುೀ ಕೋವಿನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಂಡು ನಿಗದಿಪಡಿಸಿದ ಸ್ಥಳ ಹಾಗೂ ದಿನಾಂಕದಂದು ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಲು ಸರ್ಕಾರ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೋಂದಣಿ ಮಾಡಿಸಿಕೊಳ್ಳುವುದು ಹೇಗೆ…?:

ಮೊದಲು hಣಣಠಿs://ತಿತಿತಿ.ಛಿoತಿiಟಿ.gov.iಟಿ/home ವೆಬ್‍ಸೈಟ್‍ಗೆ ಹೋಗಬೇಕು.
ವೆಬ್‍ಸೈಟ್ ಬಲಭಾಗದಲ್ಲಿ ಮೇಲೆ ಸೈನ್ ಇನ್ ಯುವರ್ಸೆಲ್ಫ್ ಎಂದು ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿ ಮೊಬೈಲ್ ನಂಬರ್ ನಮೂದಿಸಿ
ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ಹಾಕಿದ ಕೂಡಲೇ ಪೇಜ್‍ವೊಂದು ತೆರೆಯಲ್ಪಡುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ನೀವಿರುವ ಪ್ರದೇಶ, ಸಂಪೂರ್ಣ ವಿಳಾಸ, ಪಿನ್‍ಕೋಡ್‍ಗಳನ್ನು ನಮೂದಿಸಿ.
ಇಷ್ಟಾದ ಬಳಿಕ ಅಲ್ಲಿ ನಿಮ್ಮ ಪ್ರದೇಶದ ಸುತ್ತಮುತ್ತ ಇರುವ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಆಸ್ಪತ್ರೆಯನ್ನು ಆ0iÉ್ಕು ಮಾಡಿಕೊಳ್ಳಿ. ಇಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳ ಹೆಸರೂ ಬರಲಿದ್ದು, ಯಾವುದೇ ಆಸ್ಪತ್ರೆಯನ್ನೂ ನೀವು ಆ0iÉ್ಕು ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್‍ಗೆ ಮೆಸೇಜ್ ಬರಲಿದ್ದು, ಅದರಂತೆ ಹೋಗಿ ಲಸಿಕೆ ಪಡೆಯಬಹುದು.

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಲಸಿಕೆ ವಿತರಣೆ ಯನ್ನು ತೀವ್ರಗೊಳಿಸಲು ಮುಂದಾಗಿದೆ. 3 ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿ ಕೊಂಡಿದೆ. ಇಲ್ಲಿಯವರೆಗೆ ದೇಶದಲ್ಲಿ 24 ಕೋಟಿ ಡೋಸ್ ಲಸಿಕೆ ನೀಡಿದ್ದಾರೆ ಆರೋಗ್ಯ ಸಚಿವಾಲಯ ತಿಳಿಸಿದೆ.

Translate »