ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿಯಿಂದ ನೌಕರರಿಗೆ ಕರೆ
ಮೈಸೂರು

ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿಯಿಂದ ನೌಕರರಿಗೆ ಕರೆ

December 14, 2020

ಬೆಂಗಳೂರು, ಡಿ.13-ಸರ್ಕಾರದ ಜೊತೆ ಸಂಧಾನ ವಿಫಲವಾಗಿದ್ದು, ಮುಷ್ಕರ ಮುಂದುವರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಾರಿಗೆ ನೌಕರರ ಒಕ್ಕೂಟ ಘೋಷಿಸಿದ ಬೆನ್ನಲ್ಲೇ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗು ವಂತೆ ಅನಂತ ಸುಬ್ಬರಾವ್ ನೇತೃತ್ವದ ಎಐಟಿ ಯುಸಿ ಸಂಘಟನೆ ಕಾರ್ಯದರ್ಶಿ ವಿಜಯ ಭಾಸ್ಕರ್ ನೋಟಿಸ್ ರವಾನಿಸಿದ್ದಾರೆ.

ಸರ್ಕಾರದ ಜೊತೆಗಿನ ಸಂಧಾನ ಮಾತುಕತೆ ಯಶಸ್ವಿ ಯಾಗಿದ್ದು, ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿ ಸುವ ಭರವಸೆ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಬೇಡಿಕೆಯೂ ಈಡೇರಬಹುದು ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ. ಇಂದು ಸರ್ಕಾರ
ನಮಗೆ ಸ್ಪಂದಿಸಿರುವುದರಿಂದ ಬಸ್‍ಗಳನ್ನು ಓಡಿಸಲು ಕರೆ ನೀಡಲಾಗಿದೆ. ಕೋಡಿಹಳ್ಳಿ ಯೂನಿಯನ್‍ನಲ್ಲಿ ಮಾತ್ರ ಸದಸ್ಯರಿಲ್ಲ. ನಮ್ಮ ಯೂನಿಯನ್‍ನಲ್ಲೂ ಕೂಡ ಸದಸ್ಯರಿದ್ದಾರೆ. ನಮಗೂ ಕೂಡ ಸಾರ್ವಜನಿಕರು ಹಾಗೂ ನೌಕರರ ಪರ ಕಾಳಜಿ ಇದೆ. ಸರ್ಕಾರ ಸಾರಿಗೆ ನೌಕರರಿಗೆ ಅನುಕೂಲವಾಗುವಂತಹ ಭರವಸೆ ನೀಡಿದೆ. ಆದ್ದರಿಂದ ಬಸ್‍ಗಳನ್ನು ಓಡಿಸಲು ಕರೆ ನೀಡಲಾಗಿದೆ ಎಂದರು. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ನೋಟಿಸ್ ಕೊಡದೆ ಹೇಗೆ ಪ್ರತಿಭಟನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಪ್ರತಿಭಟನೆ ಮಾಡುತ್ತಿರುವುದು ನಮ್ಮ ಯೂನಿಯನ್‍ನವರಲ್ಲ. ಯಾರೋ ಮೂರನೆಯವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಅವರು ಅದೆಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ನೋಡೋಣ ಎಂದು ಸವಾಲೆಸೆದರು.

 

Translate »