ಹಾಲಿನ ಟ್ಯಾಂಕರ್‌ಗೆ ಕಾರು ಡಿಕ್ಕಿ: ಇಬ್ಬರು ಯುವತಿಯರು ಸಾವು
ಮೈಸೂರು

ಹಾಲಿನ ಟ್ಯಾಂಕರ್‌ಗೆ ಕಾರು ಡಿಕ್ಕಿ: ಇಬ್ಬರು ಯುವತಿಯರು ಸಾವು

June 19, 2022

ಹುಣಸೂರು, ಜೂ.೧೮-ಟಯರ್ ಪಂಕ್ಚರ್ ಆದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ಹುಣ ಸೂರು ತಾಲೂಕು ರಂಗಯ್ಯನಕೊಪ್ಪಲು ಗೇಟ್ ಬಳಿ ಶನಿವಾರ ಸಂಜೆ ಸಂಭವಿಸಿದೆ.

ಕಾರಿನಲ್ಲಿ ದೊರೆತ ದಾಖಲೆಗಳನ್ನಾಧರಿಸಿ ಮೃತ ಯುವತಿಯರನ್ನು ಮೈಸೂರಿನ ಆಲನಹಳ್ಳಿಯ ಚಂದ್ರಶೇಖರ್ ಮೂರ್ತಿ ಎಂಬುವರ ಪುತ್ರಿ ಸಾಫ್ಟ್ ವೇರ್ ಇಂಜಿನಿಯರ್ ಜೀವಿತಾ (೨೪) ಮತ್ತು ಆಕೆ ಸ್ನೇಹಿತೆ ಬೆಂಗಳೂರಿನ
ಕೆ.ಪಿ.ಅಗ್ರಹಾರದ ಪ್ರಸನ್ನ ಎಂಬುವರ ಪುತ್ರಿ ಪ್ರತೀಕ್ಷಾ (೨೪) ಎಂದು ಗುರುತಿಸಿರುವುದಾಗಿ ತಿಳಿಸಿರುವ ಪೊಲೀಸರು, ಆದರೆ ಮೃತರ ಸಂಬAಧಿಕರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ವಾರಾAತ್ಯದ ಹಿನ್ನೆಲೆಯಲ್ಲಿ ಇಬ್ಬರೂ ಯುವತಿಯರು ಕಾರಿನಲ್ಲಿ ಮೈಸೂರಿನಿಂದ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ಮುಂದಿನ ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿದ ಕಾರು ಎದುರುಗಡೆ ಬರುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ಅರಿತ ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಿಂದ ಮೃತದೇಹಗಳನ್ನು ಹೊರ ತೆಗೆದು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬAಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »