ಜೂ.21ರಂದು ಎಲ್ಲಾ ಶಾಲೆಗಳಲ್ಲಿಯೋಗ ದಿನಾಚರಣೆ  ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಮೈಸೂರು

ಜೂ.21ರಂದು ಎಲ್ಲಾ ಶಾಲೆಗಳಲ್ಲಿಯೋಗ ದಿನಾಚರಣೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

June 19, 2022

ಬೆಂಗಳೂರು, ಜೂ. ೧೮(ಕೆಎಂಶಿ)- ಇದೇ ೨೧ರಂದು ರಾಜ್ಯದ ಎಲ್ಲ ಶಾಲೆ ಗಳಲ್ಲಿ ಅಂತಾರಾಷ್ಟಿçÃಯ ಯೋಗ ದಿನ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಯೋಗ ದಿನಾ ಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸೂಚಿಸಲಾಗಿದೆ.ಅಂತಾರಾಷ್ಟಿçÃಯ ಯೋಗ ದಿನದ ಪ್ರಯುಕ್ತ ರಾಜ್ಯದ ಎಲ್ಲ ಶಾಲೆಗಳಲ್ಲಿ ಅಂದು ಅರ್ಧ ದಿನ ಶಾಲೆಯನ್ನು ನಡೆ ಸಲು ಸೂಚಿಸಲಾಗಿದೆ. ಆ ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣ ವಾದ ಯೋಗಾಸನಗಳ ಅಭ್ಯಾಸ ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದೆ. ಆ ದಿನದ ಅರ್ಧ ದಿನ ಪಾಠ ಗಳನ್ನು ಸರಿದೂಗಿಸಲು ಜೂ.೨೫ ಶನಿ ವಾರದಂದು ಪೂರ್ಣ ದಿನದ ಶಾಲೆ ಯನ್ನು ನಡೆಸುವಂತೆ ಆದೇಶಿಸಲಾಗಿದೆ.

Leave a Reply

Your email address will not be published.

Translate »