ದ್ವಿತೀಯ ಪಿಯು ಫಲಿತಾಂಶ ಪ್ರಕಟ ಶೇ.61.88ರಷ್ಟು ತೇರ್ಗಡೆ  ಗ್ರಾಮೀಣರೇ ಮೇಲು
ಮೈಸೂರು

ದ್ವಿತೀಯ ಪಿಯು ಫಲಿತಾಂಶ ಪ್ರಕಟ ಶೇ.61.88ರಷ್ಟು ತೇರ್ಗಡೆ  ಗ್ರಾಮೀಣರೇ ಮೇಲು

June 19, 2022

ಕಳೆದ ಬಾರಿಗಿಂತ ಶೇ.೦.೮ರಷ್ಟು ಹೆಚ್ಚು ಉತ್ತೀರ್ಣ: ವಿದ್ಯಾರ್ಥಿನಿಯರ ಪಾರುಪತ್ಯ

ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ವಿಜಯಪುರ ತೃತೀಯ; ಚಿತ್ರದುರ್ಗಕ್ಕೆಕಡೇ ಸ್ಥಾನ

ಗಣ ತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ೧೪ ಸಾವಿರ ವಿದ್ಯಾರ್ಥಿಗಳು

ಬೆಂಗಳೂರು,ಜೂ.೧೮(ಕೆಎAಶಿ)-ಕಳೆದ ಏಪ್ರಿಲ್- ಮೇ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂದಿನAತೆ ಬಾಲಕಿಯರು ಮೇಲುಗೈ ಸಾಧಿಸಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದವರಿಗಿಂತ ಮುಂದಿದ್ದಾರೆ. ವಿಜ್ಞಾನ, ವಾಣ ಜ್ಯ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆಯಲು ಪ್ರತಿಭಾವಂತ ವಿದ್ಯಾರ್ಥಿಗಳು ಪೈಪೋಟಿ ನಡೆಸಿದ್ದರೆ, ಗಣ ತ ವಿಭಾಗದಲ್ಲಿ ೧೪ ಸಾವಿರ ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಬಳ್ಳಾರಿ ಜಿಲ್ಲೆಯ ಕೊಟ್ರೇಶ್ ಕಾಲೇಜಿನ ಕಲಾ ವಿಭಾ ಗದ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ಶೇ. ೬೧.೮೮ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ೨೦೨೦ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.೬೧.೮೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ದ್ದರು. ಕಳೆದ ಬಾರಿಗಿಂತ ಈ ಬಾರಿ ಶೇ.೦.೮ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್ ಭೀತಿಯ ನಡುವೆಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಯಿತು. ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ೬,೮೩,೫೬೩ ವಿದ್ಯಾರ್ಥಿಗಳ ಪೈಕಿ ೪,೨೨,೯೬೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. ೪೮.೭೧ರಷ್ಟು, ವಾಣ ಜ್ಯ ಶೇ.೬೪.೯೭ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.೭೨.೫೩ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು. ೯೧,೧೦೬ ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ ೨,೧೪,೧೧೫, ದ್ವಿತೀಯ ದರ್ಜೆ ೬೮,೪೪೪ ಹಾಗೂ ೪೯,೩೦೧ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

ಶೇ.೮೫ಕ್ಕಿAತ ಹೆಚ್ಚಿನ ಅಂಕಗಳನ್ನು ೯೧,೧೦೬ ವಿದ್ಯಾರ್ಥಿಗಳು, ಶೇ.೮೫ಕ್ಕಿಂತ ಕಡಿಮೆ, ಶೇ.೬೦ಕ್ಕಿಂತ ಹೆಚ್ಚು ಅಂಕವನ್ನು ೨,೧೪,೧೧೫ ವಿದ್ಯಾರ್ಥಿಗಳು, ಶೇ.೬೦ಕ್ಕಿಂತ ಕಡಿಮೆ ಹಾಗೂ ಶೇ.೫೦ಕ್ಕಿಂತ ಹೆಚ್ಚು ೬೮,೪೪೪ ವಿದ್ಯಾರ್ಥಿಗಳು ಹಾಗೂ ಶೇ.೫೦ಕ್ಕಿಂತ ಕಡಿಮೆ ಅಂಕವನ್ನು ೪೯,೩೦೧ ವಿದ್ಯಾರ್ಥಿಗಳು ಪಡೆದಿದ್ದಾರೆ. ೫,೯೯,೭೯೪ ಹೊಸ ವಿದ್ಯಾರ್ಥಿಗಳ ಪೈಕಿ ೪,೦೨,೬೯೭ ( ಶೇ.೬೭.೧೪ರಷ್ಟು) ಮಂದಿ ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ ೬೧,೮೩೮ ವಿದ್ಯಾರ್ಥಿಗಳ ಪೈಕಿ ೧೪,೪೦೩ ವಿದ್ಯಾರ್ಥಿಗಳು (ಶೇ.೨೩.೨೯) ಹಾಗೂ ೨೧,೯೩೧ ಖಾಸಗಿ ಅಭ್ಯರ್ಥಿಗಳ ಪೈಕಿ ೫,೮೬೬ ಮಂದಿ(ಶೇ.೨೬.೭೫) ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆ: ಪರೀಕ್ಷೆಗೆ ಒಟ್ಟು ೬,೮೩,೫೬೩ ವಿದ್ಯಾರ್ಥಿಗಳು ಹಾಜರಾಗಿದ್ದು, ೪,೨೨,೯೬೬ ಮಂದಿ ಉತ್ತೀರ್ಣರಾಗಿದ್ದಾರೆ. ೩,೪೬,೫೭೭ ಬಾಲಕರಲ್ಲಿ ೧,೯೧,೩೮೦(ಶೇ.೫೫.೨೨) ಮಂದಿ ತೇರ್ಗಡೆಯಾಗಿದ್ದಾರೆ ಹಾಗೂ ೩,೩೭, ೦೦೬ ಬಾಲಕಿಯರಲ್ಲಿ ೨,೩೧,೫೮೬( ಶೇ.೬೮.೭೨) ಮಂದಿ ಉತ್ತೀರ್ಣರಾಗಿದ್ದಾರೆ.

ಗ್ರಾಮೀಣರೇ ಮೇಲುಗೈ: ನಗರ ಪ್ರದೇಶಗಳಿಗೆ ಹೋಲಿಸಿದರೆ ಎಂದಿನAತೆ ಈ ಬಾರಿಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಿಂದ ೫,೨೦,೫೨೦ ವಿದ್ಯಾರ್ಥಿಗಳ ಪೈಕಿ ೩,೨೧,೫೯೦(ಶೇ.೬೧.೭೮) ಮಂದಿ, ಗ್ರಾಮಾಂತರ ಪ್ರದೇಶದಿಂದ ೧,೬೩,೦೪೩ ವಿದ್ಯಾರ್ಥಿಗಳ ಪೈಕಿ ೧,೦೧,೩೭೬(ಶೇ.೬೨.೧೮) ಮಂದಿ ಪಾಸಾಗಿದ್ದಾರೆ. ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯು ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ೩ನೇ ಸ್ಥಾನದಲ್ಲಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ೩ ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸ್ಕಾö್ಯನಿಂಗ್ ಪ್ರತಿಗೆ ಅವಕಾಶ: ಉತ್ತರ ಪತ್ರಿಕೆ ಸ್ಕಾ÷್ಯನಿಂಗ್ ಪ್ರತಿಯನ್ನು ಪಡೆಯಲು ಇಂದಿನಿAದಲೇ ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಮರುಮೌಲ್ಯ ಮಾಪನ ಫಲಿತಾಂಶಕ್ಕೆ ಕಾಯದೇ, ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವುದು ಉತ್ತಮ ಎಂದು ಸಲಹೆ ನೀಡಿದರು. ಜೂನ್ ತಿಂಗಳಾAತ್ಯಕ್ಕೆ ಪೂರಕ ಪರೀಕ್ಷೆ ದಿನಾಂP ಪ್ರಕಟಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ. ಫಲಿತಾಂಶದಲ್ಲಿ ಹಿನ್ನೆಡೆಯಾ ದವರು ನಿರಾಶರಾಗಬಾರದು. ಈ ಪರೀಕ್ಷೆಯೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು. ಪರೀಕ್ಷೆ ಹಾಗೂ ಫಲಿತಾಂಶ ನಮ್ಮ ಶೈಕ್ಷಣ ಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣ ಕ ಜೀವನ ಮುಂದುವರೆಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಸಿಮ್ರಾನ್ ರಾಜ್ಯಕ್ಕೆ ಪ್ರಥಮ

ಬೆಂಗಳೂರಿನ ಸಿಮ್ರಾನ್ ಶೇಷರಾವ್ ೬೦೦ಕ್ಕೆ ೫೯೮ ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಈಕೆ ಜಯನಗರದ ಆರ್‌ವಿ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಾಗೂ ಶೇಷರಾವ್-ರೂಪರಾವ್ ದಂಪತಿ ಪುತ್ರಿ. ವಿಜ್ಞಾನ ವಿಭಾಗದಲ್ಲಿ ರಾಜ್ಯದ ನಾಲ್ವರು ೫೯೭ ಹಾಗೂ ೭ ವಿದ್ಯಾರ್ಥಿ ಗಳು ೫೯೬ ಅಂಕ ಪಡೆದಿದ್ದಾರೆ. ಬಿ.ಆರ್.ನೇಹಾ, ಮನ್ವಾ ವಿನಯಕ್ ಕೇಜ್ರಿವಾಲ್, ನೀಲು ಸಿಂಗ್, ಆಕಾಶ್‌ದಾಸ್ ತಲಾ ೫೯೬ ಅಂಕಗಳೊAದಿಗೆ ವಾಣ ಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ೬ ಮಂದಿ ೫೯೫ ಅಂಕ ಪಡೆದಿದ್ದಾರೆ. ಇನ್ನು ಬಿ.ಬಿ.ಶ್ವೇತಾ ಹಾಗೂ ಮಡಿವಾಳರ ಸಹನಾ ೫೯೪ ಅಂಕಗಳೊAದಿಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ನಾಲ್ವರು ೫೯೩, ಓರ್ವ ೫೯೨, ನಾಲ್ವರು ೫೯೧ ಅಂಕ ಪಡೆದಿದ್ದಾರೆ.

ಮೈಸೂರು ಜಿಲ್ಲೆಗೆ 17ನೇ ಸ್ಥಾನ

ಈ ಬಾರಿ ಶೇ.೩ರಷ್ಟು ಫಲಿತಾಂಶ ಇಳಿಕೆ
ಜಿಲ್ಲೆಯಲ್ಲಿ ಶೇ.೫೯.೮೬ರಷ್ಟು ಫಲಿತಾಂಶ

ಮೈಸೂರು, ಜೂ.೧೮ (ಎಂಟಿವೈ)- ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ಶೇ.೬೪.೪೫ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲೇ ೧೭ನೇ ಸ್ಥಾನ ಪಡೆದಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ಫಲಿತಾಂಶ ಶೇ.೩ರಷ್ಟು ಇಳಿಕೆಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಈ ವರ್ಷ ೩೫,೧೮೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೨೧,೦೬೩ ವಿದ್ಯಾರ್ಥಿಗಳು ಉತ್ತೀರ್ಣ ರಾಗುವ ಮೂಲಕ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.೫೯.೮೬ರಷ್ಟು ದಾಖಲಾಗಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಫಲಿತಾಂಶವನ್ನು ಪರಿಗಣ ಸುವುದಿಲ್ಲ. ಬದಲಿಗೆ ಹೊಸದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶವನ್ನು ಶೇಕಡವಾರು ಅಂಕಿ-ಅAಶಕ್ಕೆ ಪರಿಗಣ ಸಿದೆ. ಈ ವರ್ಷ ಹೊಸದಾಗಿ ೩೧,೧೧೯೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ೨೦,೧೦೬ ವಿದ್ಯಾರ್ಥಿ ಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದಿದ್ದ ೧೦೬೫ರಲ್ಲಿ ೨೮೧ ಮಂದಿ ಪಾಸ್ ಆಗಿದ್ದು, ಆ ವರ್ಗದ ಫಲಿತಾಂಶ ಶೇ.೨೬.೩೮ರಷ್ಟು ದಾಖಲಾಗಿದೆ. ಪುನರಾವರ್ತಿತ ೨,೯೨೮ ವಿದ್ಯಾರ್ಥಿ ಗಳಲ್ಲಿ ೬೭೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಫಲಿತಾಂಶ ಶೇ.೨೩.೦೯ರಷ್ಟಾಗಿದೆ. ಒಟ್ಟಾರೆ ಫಲಿತಾಂಶ ಅವಲೋಕಿಸಿದರೆ ಈ ಬಾರಿ ಶೇ.೬೪.೪೫ರಷ್ಟು ಫಲಿತಾಂಶ ಪಡೆದು
೧೭ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಶೇ.೬೭.೯೮ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ೧೪ ಸ್ಥಾನ ಪಡೆದಿದ್ದನ್ನು ಸ್ಮರಿಸಬಹುದಾಗಿದೆ.

ಬಾಲಕಿಯರೇ ಮೇಲುಗೈ: ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ೧೭,೪೪೮ ವಿದ್ಯಾರ್ಥಿನಿಯರಲ್ಲಿ ೧೨,೧೩೦ ಮಂದಿ ಉತ್ತೀರ್ಣರಾಗಿದ್ದಾರೆ. ಇವರ ಫಲಿತಾಂಶ ಶೇ.೬೯.೫೨ರಷ್ಟು ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ೧೭೭೩೯ ಬಾಲಕರಲ್ಲಿ ೮೯೩೩ ಬಾಲಕರು ತೇರ್ಗಡೆಯಾ ಗಿದ್ದಾರೆ. ಬಾಲಕರ ಫಲಿತಾಂಶ ಶೇ.೫೦.೩೬ರಷ್ಟಾಗಿದೆ.

ಹಿಂದುಳಿದ ಕಲಾ ವಿಭಾಗ: ಈ ಬಾರಿ ಕಲಾ ವಿಭಾಗದ ಫಲಿತಾಂಶ ಕ್ಷೀಣ ಸಿದೆ. ಈ ವಿಭಾಗದಲ್ಲಿ ಶೇ.೪೫.೭೬ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಧಿಕ ಅಂದರೆ ವಿಜ್ಞಾನ ವಿಭಾಗದ ಫಲಿತಾಂಶ ಶೇ.೭೪.೭೫ರಷ್ಟು ಬಂದಿದೆ. ವಾಣ ಜ್ಯ ವಿಭಾಗದ ಫಲಿತಾಂಶವು ಶೇ.೬೯.೬೧ರಷ್ಟಾಗಿದೆ. ಕಲಾ ವಿಭಾಗದ ಫಲಿತಾಂಶ ಇಳಿಕೆಯೂ ಜಿಲ್ಲೆಯ ಸಮಗ್ರ ಫಲಿತಾಂಶ ಕುಸಿಯಲು ಮತ್ತೊಂದು ಕಾರಣವಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳ ಹಿನ್ನಡೆ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಫಲಿ ತಾಂಶವೂ ಕುಗ್ಗಿದೆ. ಶೇ.೫೫.೬೪ರಷ್ಟು ಹಳ್ಳಿ ಮಕ್ಕಳು ಪಾಸಾಗಿದ್ದಾರೆ. ಆದರೆ, ಶೇ.೬೬. ೧೬ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳ ಪಾಸಾಗಿ ಗಮನ ಸೆಳೆದಿದ್ದಾರೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ಮುಂದಿದ್ದು, ಇವರ ಫಲಿತಾಂಶ ಶೇ.೬೯.೯೪ರಷ್ಟಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಶೇ.೪೭.೨೬ರಷ್ಟಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಫಲಿತಾಂಶದ ಶೇ.೪೮ರಷ್ಟು, ಶೇ.೫೪ರಷ್ಟು ಎಸ್‌ಟಿ, ೫೮.೧೩ರಷ್ಟು ಹಿಂದು ಳಿದ ಪ್ರವರ್ಗ ೧ಎ, ಶೇ.೬೦.೮೭ರಷ್ಟು ೨ಎ, ೫೯.೯೪ರಷ್ಟು ೨ಬಿ, ಶೇ.೬೬.೭೫ರಷ್ಟು ೩ಎ, ಶೇ.೬೭. ೦೮ರಷ್ಟು ೩ಬಿ ಮತ್ತು ಶೇ.೬೮.೦೧ರಷ್ಟು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Translate »