ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆ ಶೇ.30ರಷ್ಟು ಹೆಚ್ಚಳ ಮುನ್ನೆಚ್ಚರಿಕೆ ವಹಿಸಲು ಹೃದ್ರೋಗ ತಜ್ಞ ಡಾ.ರಂಜನ್ ಶೆಟ್ಟಿ ಸಲಹೆ
ಮೈಸೂರು

ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆ ಶೇ.30ರಷ್ಟು ಹೆಚ್ಚಳ ಮುನ್ನೆಚ್ಚರಿಕೆ ವಹಿಸಲು ಹೃದ್ರೋಗ ತಜ್ಞ ಡಾ.ರಂಜನ್ ಶೆಟ್ಟಿ ಸಲಹೆ

December 11, 2020

ಮೈಸೂರು, ಡಿ.10(ಪಿಎಂ)-ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಶೇ.20 ರಿಂದ 30ರವರೆಗೆ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆಯಾಗಿ ಉತ್ತಮ ಆಹಾರ ಸೇವನೆ ಹಾಗೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಬೆಂಗಳೂರಿನ ಓಲ್ಡ್ ಏರ್‍ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆನ್ ಲೈನ್ ಮೂಲಕ ಮಾತನಾಡಿದ ಅವರು, ಭಾರತ ಸೇರಿದಂತೆ ಜಗತ್ತಿ ನಾದ್ಯಂತ ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ ಹೃದ್ರೋಗ. ಕೋವಿಡ್-19 ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಭೇಟಿ ನೀಡಲಾಗದೇ ಮನೆಯಲ್ಲಿಯೇ ಉಳಿದ ಪರಿಣಾಮ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಚಳಿಗಾಲ ಆರಂಭವಾಗಿರುವ ಕಾರಣ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚು ಎಂದರು.

ಚಳಿಗಾಲದಲ್ಲಿ ವಾತಾವರಣ ತಣ್ಣಗಿರುವುದರಿಂದ ನೇರವಾಗಿ ಅದು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ದೇಹವನ್ನು ಬೆಚ್ಚಗೆ ಇಡಲು ನಮ್ಮಲ್ಲಾಗುವ ಹಲವು ಮಾನಸಿಕ ಬದಲಾವಣೆಗಳು ಚಳಿಗಾಲದಲ್ಲಿ ಹೃದಯ ಸಂಬಂಧಿ ತೊಂದರೆ ಉಂಟು ಮಾಡಲಿವೆ. ಆರೋಗ್ಯವಂತರು ಈ ಬದಲಾವಣೆಗೆ ಒಗ್ಗಿಕೊಳ್ಳಬಹುದು. ಆದರೆ ಹೃದ್ರೋಗಿಗಳ ಹೃದಯಕ್ಕೆ ಒತ್ತಡ ಹೆಚ್ಚಿದಾಗ ಒಗ್ಗಿಕೊಳ್ಳುವುದು ಸುಲಭವಲ್ಲ ಎಂದು ತಿಳಿಸಿದರು.

ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿ, ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ, ಹೃದ್ರೋಗದಿಂದ ದೂರ ಉಳಿಯಬಹುದು. ಹೃದ್ರೋಗಿಗಳು ವೈದ್ಯರ ಸಲಹೆ ಮೇರೆಗೆ ಔಷಧಿಯನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಹಾಗೆಯೇ ಕೊರೊನಾ ಹರಡುವುದನ್ನು ತಡೆಗಟ್ಟಲು ತಪಾಸಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇP

Translate »