ನಾಳೆ ಮೈವಿವಿ ಹಿರಿಯ ವಿದ್ಯಾರ್ಥಿಗಳ ಮೂರನೇ ಜಾಗತಿಕ ಸಮಾವೇಶ
ಮೈಸೂರು

ನಾಳೆ ಮೈವಿವಿ ಹಿರಿಯ ವಿದ್ಯಾರ್ಥಿಗಳ ಮೂರನೇ ಜಾಗತಿಕ ಸಮಾವೇಶ

December 11, 2020

ಮೈಸೂರು,ಡಿ.10(ಎಂಟಿವೈ)-ಮೈಸೂರು ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ 3ನೇ ಜಾಗತಿಕ ಸಮಾವೇಶ ಹಾಗೂ `ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನ ಸಮಾರಂಭ ಡಿ.12ರ ಬೆಳಿಗ್ಗೆ 11ಕ್ಕೆ ಮಾನಸಗಂಗೋ ತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯP್ಷÀ ವಸಂತಕುಮಾರ್ ತಿಮಕಾಪುರ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

3 ವರ್ಷದಿಂದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸ ಲಾಗುತ್ತಿದೆ. ಈ ಬಾರಿ ಕೊರೊನಾ ಭೀತಿ ಇದ್ದರೂ ಅಗತ್ಯ ಮುನ್ನೆಚ್ಚ ರಿಕಾ ಕ್ರಮಗಳೊಂದಿಗೆ 3ನೇ ಜಾಗತಿಕ ಸಮಾವೇಶ ಹಮ್ಮಿಕೊಳ್ಳ ಲಾಗಿದೆ. ಡಿ.12ರ ಬೆಳಗ್ಗೆ 11ಕ್ಕೆ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಾಶ್ಮೀರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಶ್ರೀ ಜೆ.ಎ.ಕೆ.ತರೀನ್, ಮೈವಿವಿ ವಿಶ್ರಾಂತ ಕುಲಪತಿ ಪೆÇ್ರ.ಕೆ. ಎಸ್.ರಂಗಪ್ಪ, ಕುಲಸಚಿವ ಪೆÇ್ರ.ಆರ್.ಶಿವಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಪೆÇ್ರ.ಸಿ.ಪಿ.ಕೃಷ್ಣಕುಮಾರ್(ಸಾಹಿತ್ಯ), ಏರ್‍ಮಾರ್ಷಲ್ ಕೆ.ರಾಮಸುಂದರ(ಇಂಜಿನಿಯರಿಂಗ್), ಟಿ.ಎಂ.ಮಂಜುನಾಥ್ (ಕೃಷಿ), ಪದ್ಮಶ್ರೀ ಡಾ.ಬಿ. ರಮಣರಾವ್ (ವೈದ್ಯಕೀಯ), ಪೆÇ್ರ.ಎಂ.ಕೆ.ಸೂರಪ್ಪ (ವಿe್ಞÁನ), ಪುಷ್ಪಾ ಕುಟ್ಟಣ್ಣ (ಕ್ರೀಡೆ), ಶಿವಮೂರ್ತಿ ಕೀಲಾರ (ಅನಿವಾಸಿ ಭಾರತೀಯ- ಸಮಾಜಸೇವೆ), ಎಂ.ಧರ್ಮಪ್ರಸಾದ್ (ಅನಿವಾಸಿ ಭಾರತೀಯ-ಕೈಗಾರಿಕೋದ್ಯಮ) ಅವರಿಗೆ `ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು. ಸಂಘದ ಪದಾಧಿಕಾರಿಗಳಾದ ನಿರಂಜನ್ ನಿಕ್ಕÀಂ, ಪೆÇ್ರ.ವಸಂತಮ್ಮ, ನಂದಿನಿಮೂರ್ತಿ, ಪ್ರೊ.ಆರ್.ಎನ್.ಪದ್ಮನಾಭ ಗೋಷ್ಠಿಯಲ್ಲಿದ್ದರು.

Translate »