ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ   ವಿಜ್ಞಾನಗಳ ಸಂಸ್ಥೆಯಲ್ಲಿ ಹೊಸ ಕೋರ್ಸ್
ಮೈಸೂರು

ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ  ವಿಜ್ಞಾನಗಳ ಸಂಸ್ಥೆಯಲ್ಲಿ ಹೊಸ ಕೋರ್ಸ್

December 11, 2020

ಮೈಸೂರು, ಡಿ.10- ಮೈಸೂರಿನ ನಜರಬಾದ್‍ನಲ್ಲಿ ತಿ.ನರಸೀಪುರ ರಸ್ತೆಯಲ್ಲಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯು ಬಿಎಸ್‍ಸಿ-ಅನಸ್ತೇ ಸಿಯಾ ಅಂಡ್ ಅಪರೇಷನ್ ಥಿಯೇಟರ್ ಟೆಕ್ನಾ ಲಜಿ, ಬಿಎಸ್‍ಸಿ-ಇಮೇಜಿಂಗ್ ಟೆಕ್ನಾಲಜಿ, ಬಿಎಸ್‍ಸಿ-ರೆಸ್ಪಿರೇಟರಿ ಕೇರ್ ಟೆಕ್ನಾಲಜಿ ಮತ್ತು ಬಿಎಸ್‍ಸಿ- ರೇನಲ್ ಡಯಾಲಿಸಿಸ್ ಕೋರ್ಸ್ ಗಳನ್ನು ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ಸಂಸ್ಥೆ ಯಿಂದ ಅನುಮತಿ ಪಡೆದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಹೊಸ ಕೋರ್ಸ್‍ಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದೆ. ಅಲ್ಲದೇ, ಎಂಡಿ ಡಾಕ್ಟರ್ಸ್, ಜಿಎನ್‍ಎಂ ನರ್ಸಿಂಗ್, ಬಿಎಸ್‍ಸಿ ನರ್ಸಿಂಗ್, ಎಂಎಸ್‍ಸಿ ನರ್ಸಿಂಗ್, ಎಂಎಸ್‍ಸಿ ಇನ್ ಎಂಬ್ರಿಯಾಲಜಿಗೆ ಸಂಬಂಧಿಸಿ ಕ್ರಿಟಿಕಲ್ ಮೆಡಿಸಿನ್ ಮತ್ತು ಫರ್ಟಿಲಿಟಿ ಮೆಡಿಸಿನ್ ಫೆಲೋಷಿಪ್ ಕೋರ್ಸ್‍ಗಳ ಅಧ್ಯಯನಕ್ಕೂ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

 

 

Translate »