ಡಿ.13ರಂದು ಕನಕದಾಸರ ಚಿಂತನೆ ಕುರಿತು ಸಾಗರೋತ್ತರ ಕನ್ನಡಿಗರೊಂದಿಗೆ ಕಾಗಿನೆಲೆ ಶ್ರೀಗಳಿಂದ ಸಂವಾದ
ಮೈಸೂರು

ಡಿ.13ರಂದು ಕನಕದಾಸರ ಚಿಂತನೆ ಕುರಿತು ಸಾಗರೋತ್ತರ ಕನ್ನಡಿಗರೊಂದಿಗೆ ಕಾಗಿನೆಲೆ ಶ್ರೀಗಳಿಂದ ಸಂವಾದ

December 11, 2020

ಮೈಸೂರು,ಡಿ.10(ಎಂಟಿವೈ)- ಸಂತ ಶ್ರೇಷ್ಠ ಭಕ್ತ ಕನಕ ದಾಸರ ಚಿಂತನೆ ಹಾಗೂ ಕೀರ್ತನೆ ಕುರಿತಂತೆ ಡಿ.13 ರಂದು ಸಂಜೆ 6ಕ್ಕೆ ಸಾಗರೋತ್ತರ ಕನ್ನ ಡಿಗರೊಂದಿಗೆ ಕಾಗಿ ನೆಲೆ ಶಾಖಾ ಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ ಸಂವಾದ ನಡೆಸಲಿದ್ದಾರೆ ಎಂದು ಸಾಗರೋತ್ತರ ಕನ್ನಡಿಗರು ಸಂಘಟನೆಯ (ಸೌದಿ ಅರೇ ಬಿಯಾ) ಜಂಟಿ ಕಾರ್ಯದರ್ಶಿ ರವಿ ಮಹಾದೇವ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸಾಗರೋತ್ತರ ಕನ್ನಡಿ ಗರು ಸಂಸ್ಥೆ ಈ ವರ್ಚುಯಲ್ ಸಂವಾದ ಆಯೋಜಿಸಿದೆ. ವಿಶ್ವದ 55ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನೆಲೆಸಿರುವ ನೂರಾರು ಮಂದಿ ಹೆಮ್ಮೆಯ ಕನ್ನಡಿಗರು ಈ ಸಂವಾದದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿ ದ್ದಾರೆ. `ಕನಕದಾಸರ ಚಿಂತನೆ ಮತ್ತು ಕೀರ್ತನೆ’ ಕುರಿತಂತೆ ನಡೆಯಲಿರುವ ಸಂವಾದ ದಲ್ಲಿ ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಮಠದ ಪೀಠಾಧ್ಯಕ್ಷ ರಾದ ಶ್ರೀ ಶಿವಾನಂದಪುರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿಕಟಪೂರ್ವ ಸಮನ್ವಯಾಧಿಕಾರಿ, ಸಂಸ್ಕøತಿ ಚಿಂತಕ ಕಾ.ತ.ಶಿವಣ್ಣ ವಿಷಯ ಮಂಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಗ ರೋತ್ತರ ಕನ್ನಡಿಗರು ಸಂಘಟನೆ(ಯುಎಇ) ಅಧ್ಯಕ್ಷ ಚಂದ್ರಶೇಖರ್ ಲಿಂಗದಳ್ಳಿ, ಉಪಾಧ್ಯಕ್ಷ (ಇಂಗ್ಲೆಂಡ್) ಗೋಪಾಲ್ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಹೇಮೇಗೌಡ ಮಧು(ಇಟಲಿ), ಜಂಟಿ ಕಾರ್ಯದರ್ಶಿ (ಸೌದಿ ಅರೇಬಿಯಾ) ರವಿ ಮಹಾದೇವ, ಖಜಾಂಚಿ(ಯುಕೆ) ಬಸವ ಪಾಟೀಲ್ ಆನ್‍ಲೈನ್‍ನಲ್ಲಿ ಉಪಸ್ಥಿತರಿರುತ್ತಾರೆ. ಫೇಸ್ ಬುಕ್ ಪೇಜ್ sಚಿgಚಿಡಿoಣಣಚಿಡಿಚಿ ಞಚಿಟಿಟಿಜigಚಿಡಿu ಹಾಗೂ ವಿವಿಧ ಆನ್ ಲೈನ್ ಮೀಡಿಯಾಗಳಲ್ಲಿ ನೇರ ಸಂವಾದ ಬಿತ್ತರಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 8867642218 ಸಂಪರ್ಕಿ ಸುವಂತೆ ಅವರು ಕೋರಿದ್ದಾರೆ.

ಇದಕ್ಕೂ ಮುನ್ನ ಕಾಗಿನೆಲೆ ಕನಕ ಗುರು ಪೀಠದ ಮೈಸೂರು ಶಾಖಾ ಮಠದ ಪೀಠಾ ಧ್ಯಕ್ಷ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸಂತಶ್ರೇಷ್ಠರಲ್ಲಿ ಮುಂಚೂಣಿ ಯಲ್ಲಿರುವ ಭಕ್ತ ಕನಕದಾಸರ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿ ದರು. ಆ ಕಾಲದಲ್ಲಿಯೇ ಜಾತಿ ವ್ಯವಸ್ಥೆ, ದೌರ್ಜನ್ಯದ ವಿರುದ್ಧ ಕೀರ್ತನೆ ರಚಿಸಿ ಹಾಡುವ ಮೂಲಕ ಬದಲಾವಣೆ ತರಲು ಮುಂದಾದರು. ಇಂತಹ ಮಹನೀಯರ ಆಚಾರ, ವಿಚಾರಧಾರೆಗಳ ಬಗ್ಗೆ ಯುವ ಜನರಿಗೆ ತಿಳಿಸುವ ಅಗತ್ಯವಿದೆ. ಇದನ್ನು ಮನಗಂಡು ಸಾಗರೋತ್ತರ ಕನ್ನಡಿಗರು ಸಂಘಟನೆ ವಿಶ್ವದ 55 ರಾಷ್ಟ್ರಗಳಲ್ಲಿರುವ ಕನ್ನಡಿಗರೊಂದಿಗೆ ಸಂವಾದ ಆಯೋ ಜಿಸಿದೆ. ಭಾನುವಾರ(ಡಿ.13) ಭಾರತೀಯ ಕಾಲಮಾನದಂತೆ ಸಂಜೆÉ 6ಕ್ಕೆ, ಇಂಗ್ಲೆಂಡ್ ನಲ್ಲಿ ಮಧ್ಯಾಹ್ನ 12.30ಕ್ಕೆ, ಯುರೋಪ್ ಕಾಲಮಾನದಂತೆ ಮಧ್ಯಾಹ್ನ 1.30ಕ್ಕೆ, ಅರಬ್ ದೇಶದಲ್ಲಿ ಸಂಜೆ 4.30ಕ್ಕೆ ಈ ಸಂವಾದ ಆರಂಭವಾಗಲಿದೆ. ಆನ್‍ಲೈನ್ ನಲ್ಲಿ 500ಕ್ಕೂ ಹೆಚ್ಚು ಮಂದಿ ಪಾಲ್ಗೊ ಳ್ಳಲು ಸಾಧ್ಯವಾಗದ ಕಾರಣ, ಫೇಸ್‍ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲ ತಾಣಗಳಲ್ಲಿ ಲೈವ್ ಪ್ರಸಾರವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪೀಠದ ಕಾರ್ಯದರ್ಶಿ ಪುಟ್ಟಬಸವೇಗೌಡ, ಕನ್ನಡಪರ ಹೋರಾಟಗಾರ ಧನಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »