ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಕೆಎಂಪಿಕೆ ಟ್ರಸ್ಟ್ ಕಾರ್ಯಕ್ಕೆ ಮಾಜಿ ಶಾಸಕ ಎಂಕೆಎಸ್ ಶ್ಲಾಘನೆ
ಮೈಸೂರು

ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಕೆಎಂಪಿಕೆ ಟ್ರಸ್ಟ್ ಕಾರ್ಯಕ್ಕೆ ಮಾಜಿ ಶಾಸಕ ಎಂಕೆಎಸ್ ಶ್ಲಾಘನೆ

December 11, 2020

ಮೈಸೂರು, ಡಿ.10(ಆರ್‍ಕೆಬಿ)- ಚಳಿಗಾಲದಲ್ಲಿ ಬೀದಿ ಬದಿ ಯಲ್ಲಿ ನಡುಗುತ್ತಾ ದಿನದೂಡುವ ನಿರಾಶ್ರಿತರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೊದಿಕೆಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘ ವೇಂದ್ರಸ್ವಾಮಿ ದೇವಸ್ಥಾನದ ಬಳಿ ನಿರಾಶ್ರಿತರಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊದಿಕೆ ವಿತರಣಾ ಕಾರ್ಯ ಕ್ರಮವಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಟ್ರಸ್ಟ್‍ನ ಹೊದಿಕೆ ನೀಡುವ ಅಭಿಯಾನಕ್ಕೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಕೆ.ಸೋಮಶೇಖರ್, ಚಳಿಗಾಲದಲ್ಲಿ ನಿರಾಶ್ರಿತರಿಗೆ ಹೊದಿಕೆಗಳನ್ನು ವಿತರಿಸುತ್ತಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ಕಾರ್ಯವನ್ನು ಶ್ಲಾಘಿಸಿದರು. ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಫುಟ್‍ಪಾತ್‍ನಲ್ಲಿ ಮಲಗಿರುವ ನಿರಾಶ್ರಿತರಿಗೆ ಹೊದಿಕೆ ಕೊಡುವ ಮೂಲಕ ನಿರಾಶ್ರಿತರು ನೆಮ್ಮದಿಯಾಗಿ ನಿದ್ದೆ ಮಾಡುವ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಮಹಾನಗರಪಾಲಿಕೆ ವತಿಯಿಂದ ಮೂರು ಕಡೆ ಮಾಡಿದ್ದ ನೈಟ್ ಶೆಲ್ಟರ್‍ಗಳು ಉದ್ಘಾಟನೆ ಯಾಗಿದ್ದರೂ ದುರಸ್ತಿಯಾಗದೆ ಉಳಿದಿದೆ. ಪಾಲಿಕೆಯಿಂದ ಲಕ್ಷಾಂ ತರ ರೂ. ಖರ್ಚು ಮಾಡಿ ನಿರ್ಮಿಸಿರುವ ಈ ನೈಟ್ ಶೆಲ್ಟರ್‍ಗಳಿಗೆ ನಿರ್ಗತಿಕರನ್ನು ಸೇರಿಸಲು ಮುಂದಾಗಬೇಕು ಎಂದು ಟ್ರಸ್ಟ್‍ನ ಪದಾಧಿಕಾರಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್, ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂ ಗಾರ್, ಮಹೇಂದ್ರಸಿಂಗ್ ಕಾಳಪ್ಪ, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಎಸ್.ಎನ್.ರಾಜೇಶ್, ಸುಚೀಂದ್ರ, ಹರೀಶ್‍ನಾಯ್ಡು, ರಾಕೇಶ್ ಕುಂಚಿಟಿಗ ಇನ್ನಿತರರು ಉಪಸ್ಥಿತರಿದ್ದರು.

Translate »