ವಿದ್ಯಾರ್ಥಿಗಳ ಬೌದ್ಧಿಕ, ದೈಹಿಕ ಆರೋಗ್ಯಕ್ಕಾಗಿ ಶಿಕ್ಷಣ, ಕ್ರೀಡೆ ಪರಸ್ಪರ ಪೂರಕವಾಗಿ ಸಾಗಬೇಕು
ಮೈಸೂರು

ವಿದ್ಯಾರ್ಥಿಗಳ ಬೌದ್ಧಿಕ, ದೈಹಿಕ ಆರೋಗ್ಯಕ್ಕಾಗಿ ಶಿಕ್ಷಣ, ಕ್ರೀಡೆ ಪರಸ್ಪರ ಪೂರಕವಾಗಿ ಸಾಗಬೇಕು

December 11, 2020

ಮೈಸೂರು, ಡಿ.10(ಆರ್‍ಕೆಬಿ)- ಪಠ್ಯದ ಜೊತೆಗೆ ಕ್ರೀಡೆಯೂ ಒಂದು ಭಾಗವಾಗ ಬೇಕು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುವುದು ಖಚಿತ. ಏಕೆಂದರೆ ಶಿಕ್ಷಣ ಹಾಗೂ ಕ್ರೀಡೆ ಪರಸ್ಪರ ಪೂರಕ ವಾಗಿ ಸಾಗಿದರೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಜೊತೆಗೆ ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು.

ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ (ಕೆಎಸ್‍ಪಿಡಬ್ಲ್ಯೂ&ಇ ಟ್ರಸ್ಟ್)ನ ನೂತನ ಸಲಹಾ ಸಮಿತಿಯ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಕ್ರೀಡೆಯು ಸೋಲು ಮತ್ತು ತಿರಸ್ಕಾರ ವನ್ನು ಧೈರ್ಯವಾಗಿ ಎದುರಿಸಿ ನಿಲ್ಲುವಂತಹ ಸಾಮಥ್ರ್ಯವನ್ನು ತುಂಬುವುದರ ಜೊತೆಗೆ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದ ಅವರು, ಬಡತನದಿಂದ ಹೆಚ್ಚು ಕಲಿಯಬಹುದೇ ಹೊರತು ಶ್ರೀಮಂತಿಕೆಯಿಂದ ಅಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದರು.

ಮಾಜಿ ಭಾರತೀಯ ಅಥ್ಲೀಟ್ ಮತ್ತು ಗೋಣಿಕೊಪ್ಪದ ಕರುಂಬಯ್ಯ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋಟ್ರ್ಸ್‍ನ ನಿರ್ದೇಶಕಿ ಅಶ್ವಿನಿ ನಾಚಪ್ಪ ಮಾತನಾಡಿ, ಕಲಿಕೆಯಲ್ಲಿ ಕ್ರೀಡೆಗೆ ಹೆಚ್ಚು ಅವಕಾಶವಿದೆ. ಶಿಕ್ಷಣ ಹಾಗೂ ಕ್ರೀಡೆ ಜೊತೆಯಾಗಿಯೇ ಸಾಗಬೇಕು. ಯಾವುದೇ ಒಂದು ಸಂಸ್ಥೆಯ ಗುಣಮಟ್ಟ ಅದರ ಆಡಳಿತ ಮಂಡಳಿಯ ಕಾರ್ಯವೈಖರಿ ಮೇಲೆ ಅವಲಂಬಿತ ವಾಗಿರುತ್ತದೆ. ಮಕ್ಕಳಿಗೆ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆ ಯುತ್ತಿದೆ ಎಂದು ಹೇಳಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಅಕಾ ಡೆಮಿಯ ಕುಲಪತಿ ಡಾ.ಬಿ.ಸುರೇಶ್ ಮಾತ ನಾಡಿ, ಒಂದು ಶಿಕ್ಷಣ ಸಂಸ್ಥೆ ಎಂದರೆ ಅದರಲ್ಲಿ ವಿದ್ಯಾರ್ಥಿಗಳೇ ಬಹುಮುಖ್ಯ. ವಿದ್ಯಾರ್ಥಿಗಳೇ ಇಲ್ಲದಿದ್ದರೆ ಸಂಸ್ಥೆ, ಮೂಲ ಸೌಕರ್ಯ, ಶಿಕ್ಷಕರು ಎಲ್ಲರೂ ವ್ಯರ್ಥ. ಹೀಗಾಗಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳೇ ಮುಖ್ಯ ವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‍ನ ಗೌರವ ಅಧ್ಯಕ್ಷರೂ ಆದ ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್ ಮಾತ ನಾಡಿ ಪೊಲೀಸ್ ಇಲಾಖೆಯಲ್ಲಿರುವ ಶೇ.82 ರಷ್ಟು ಕಾನ್‍ಸ್ಟೆಬಲ್‍ಗಳೇ ಇಲಾಖೆಯ ಜೀವಾಳ. ಹಾಗಾಗಿ ಅವರು ಮತ್ತು ಅವರ ಕುಟುಂಬದ ಕಲ್ಯಾಣ ನಮ್ಮ ಹೊಣೆ ಯಾಗಿದೆ. ಆ ನಿಟ್ಟಿನಲ್ಲಿ ಪೊಲೀಸರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಶ್ರಮಿಸಲಿದೆ ಎಂದರು.

ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್‍ನ ಮೊದಲ ಸಲಹಾ ಸಮಿತಿ ಸಭೆಯ ಸದ ಸ್ಯರು ಇಂದಿನ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದು, ಶಾಲೆಯನ್ನು ಬದಲಾವಣೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಲಹೆ, ಮಾರ್ಗ ದರ್ಶನ ನೀಡಲಿದ್ದಾರೆ. ಇನ್ನಿತರೆ ಪ್ರಮುಖ ಪಬ್ಲಿಕ್ ಶಾಲೆಗಳೊಂದಿಗೆ ಈ ಶಾಲೆ ಸ್ಪರ್ಧಿಸಿ ಮುಂಚೂಣಿಯಲ್ಲಿ ನಿಲ್ಲಬೇಕಿದೆ ಎಂದರು.
ಊಟಿಯ ಲಾರೆನ್ಸ್ ಶಾಲೆಯ ಮುಖ್ಯೋ ಪಾಧ್ಯಾಯ ಕೆ.ಪ್ರಭಾಕರನ್, ಟ್ರಸ್ಟ್‍ನ ಗೌರವ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ಪೆÇಲೀಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ರಾದ ರೆನ್ನಿ ಜೋಸೆಫ್ ಮೆಂಡೋನ್ಸ್, ಕಮಾಂ ಡೆಂಟ್ ಜನಾರ್ಧನ್ ಉಪಸ್ಥಿತರಿದ್ದರು.

Translate »