20 ಅಂಗಡಿ ಮಾಲೀಕರ ಮೇಲೆ ಕೇಸ್, 35 ಬೈಕ್ ವಶ
ಮೈಸೂರು

20 ಅಂಗಡಿ ಮಾಲೀಕರ ಮೇಲೆ ಕೇಸ್, 35 ಬೈಕ್ ವಶ

May 4, 2021

ತಿ.ನರಸೀಪುರ, ಮೇ 3(ಎಸ್‍ಕೆ)- ಪಟ್ಟಣದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರದಲ್ಲಿ ನಿರತರಾಗಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೆÇಲೀಸರು ಅವರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ.

ಪಟ್ಟಣ ಠಾಣೆಯ ಪಿಎಸ್‍ಐ ಹೆಚ್.ಡಿ. ಮಂಜು ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಪೆÇಲೀಸರು ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿ ಅಗತ್ಯ ವಸ್ತುಗಳಲ್ಲದ ಅಂಗಡಿಗಳನ್ನು ತೆರೆದು ಮಾರಾಟದಲ್ಲಿ ನಿರತರಾಗಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ದಿನನಿತ್ಯದ ಅವಶ್ಯಕ ವಲ್ಲದ ಜವಳಿ, ಫ್ಯಾನ್ಸಿ ಸ್ಟೋರ್, ಸ್ಟೇಷನರಿ, ಟೈಲರ್, ಜವಳಿ ಹಾಗೂ ಮೊಬೈಲ್ ಅಂಗಡಿ ಗಳನ್ನು ತೆರೆದು ವ್ಯಾಪಾರ ವಹಿವಾಟು ಮಾಡಲಾಗುತ್ತಿತ್ತು.

ಪೆÇಲೀಸರು ದಿನನಿತ್ಯ ಎಚ್ಚರಿಕೆ ನೀಡು ತ್ತಿದ್ದರೂ ಅಂಗಡಿ ಮಾಲೀಕರು ತಮ್ಮ ಚಾಳಿ ಬಿಡದೇ ಉದ್ದಟತನ ತೋರಿದ್ದ ಹಿನ್ನೆಲೆ ಯಲ್ಲಿ ಇಂದು ಬೆಳಗ್ಗೆ ಕಾರ್ಯಾಚರಣೆ ಗಿಳಿದ ಪೆÇಲೀಸರು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಬೈಕ್ ಸವಾರರಿಂದ 35 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡರು. ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿದ 20 ವಿವಿಧ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದರು.

ಪುರಸಭಾ ಮುಖ್ಯಾಧಿಕಾರಿ ಆರ್. ಅಶೋಕ್, ಆರೋಗ್ಯಾಧಿಕಾರಿ ಚೇತನ್ ಕುಮಾರ್, ಸಹಾಯಕ ಮಹೇಂದ್ರ, ಕಂದಾಯಾಧಿಕಾರಿ ಪುಟ್ಟಸ್ವಾಮಿ, ಸಮಾಜ ಸೇವಕ ಡಾ. ಮಾದೇಶ್, ಗೋಪಾಲ್, ಮುರುಗ ಸೀಲ್‍ಡೌನ್ ಮಾಡುವ ವೇಳೆ ಹಾಜರಿದ್ದರು.

Translate »