ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ
ಮೈಸೂರು

ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ

May 4, 2021

ಹುಣಸೂರು, ಮೇ 3(ಕೆಕೆ)- ತಾಲೂಕಿ ನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಜೊತೆಗೆ ತಾಲೂಕು ಆಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಬಸವರಾಜ್ ಮನವಿ ಮಾಡಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ಪತ್ರ ಕರ್ತರ ಸಂಘದಿಂದ ಆಯೋಜಿಸಿದ್ದ ತಾಲೂಕಿ ನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಸಂಬಂಧ ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದ ಅವರು, ಸಾರ್ವ ಜನಿಕರ ನಿರ್ಲಕ್ಷ್ಯದಿಂದ ಕೊರೊನಾ 2ನೇ ಅಲೆ ಅತೀ ವೇಗವಾಗಿ ಹರಡುತ್ತಿದ್ದು, ತಾಲೂಕಿನ 6 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದರು.

ಪಟ್ಟಣದ ದೇವರಾಜ ಅರಸು ಸಾರ್ವ ಜನಿಕ ಆಸ್ಪತ್ರೆಯಲ್ಲಿ ಸೋಂಕಿತರಿಗಾಗಿ 348 ಬೆಡ್ ಇರುವ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, 20 ಮಂದಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಈ ಪೈಕಿ 3 ಐಸಿಯು, 2 ವೆಂಟಿಲೇಟರ್ ವ್ಯವಸ್ಥೆ ಇದ್ದು, ಮೈಸೂರಿನ ಆಸ್ಪತ್ರೆಗಳಲ್ಲಿ ದೊರೆ ಯುವ ಎಲ್ಲಾ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಹೀಗಾಗಿ ಜನರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳುವ ಬದಲು ಹುಣಸೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದರು.
ಆದರ್ಶ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಪೋರ್ಟಬಲ್ ಆಕ್ಸಿಜನ್ ಸಿಲಿಂಡರ್ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಬಿಳಿಕೆರೆಯ ಸಬ್ಬನಹಳ್ಳಿ ವಸತಿ ಶಾಲೆಯಲ್ಲಿ ಮತ್ತೊಂದು ಕೇರ್ ಸೆಂಟರ್ ಸಹ ತೆರೆಯಲಾಗುವುದು ಎಂದರು.

ತಾಲೂಕಿನಲ್ಲಿ 300ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ನಿಯಂತ್ರಣಕ್ಕಾಗಿ ಅನೇಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಸಾರ್ವಜನಿಕರು ಅತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬೆಂಗಳೂರು ಮತ್ತಿತರ ಕಡೆ ಗಳಿಂದ ಬರುವವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಕ್ರಮ ವಹಿಸಲಾ ಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಗ್ರಾಪಂಗಳು ಸನ್ನದ್ಧ: ಕೊರೊನಾ ತಡೆಗಟ್ಟಲು ತಾಲೂಕಿನಲ್ಲಿ 41 ಗ್ರಾಪಂಗಳು ಹಾಗೂ ಪ್ರತಿ ಗ್ರಾಮಕ್ಕೂ ಪ್ರತ್ಯೇಕವಾಗಿ ಗ್ರಾಪಂ ಸದಸ್ಯರು, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೆÇಲೀಸ್ ಸಿಬ್ಬಂದಿ ಒಳಗೊಂಡ ಟಾಸ್ಕ್‍ಪೆÇೀರ್ಸ್ ಸಮಿತಿ ರಚಿಸಲಾಗಿದೆ ಎಂದು ತಾಪಂ ಇಓ ಗಿರೀಶ್ ತಿಳಿಸಿದರು.

ಕಠಿಣ ಕ್ರಮ: ಕೊರೊನಾ ಸೋಂಕು ತಡೆ ಗಟ್ಟಲು ಸರ್ಕಾರ ಕಫ್ರ್ಯೂ ಜಾರಿಗೊಳಿಸಿದ್ದರೂ, ವಾಹನ ಸವಾರರೂ ಕುಂಟುನೆಪ ನೀಡಿ ಬೆಳಗ್ಗೆ 10 ಗಂಟೆ ನಂತರವೂ ಬೇಕಾಬಿಟ್ಟಿ ಯಾಗಿ ಓಡಾಡುವುದು ಗಮನಿಸಿದ್ದೇವೆ. ಇಂತಹವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಲಾಗುವುದು ಎಂದ ಅವರು, ಕೃಷಿ ಚಟುವಟಿಕೆ, ಆಸ್ಪತ್ರೆ, ಬ್ಯಾಂಕು ಮತ್ತಿತರೆ ಅಗತ್ಯ ಕೆಲಸಗಳಿಗೆ ಮಾತ್ರ ದಾಖಲೆ ನೀಡಿ ತೆರಳಲು ಅವಕಾಶ ನೀಡಿದ್ದೇವೆ ಎಂದು ಡಿವೈಎಸ್‍ಪಿ ರವಿಪ್ರಸಾದ್ ತಿಳಿಸಿದರು.

5 ಕಡೆ ಚೆಕ್‍ಪೆÇೀಸ್ಟ್ ನಿರ್ಮಾಣ: ತಾಲೂಕಿನ 5 ಕಡೆ ಚೆಕ್‍ಪೆÇೀಸ್ಟ್ ನಿರ್ಮಿಸ ಲಾಗಿದ್ದು, ಈಗಾಗಲೇ ತಾಲೂಕಿನಲ್ಲಿ 200 ಹಾಗೂ ಉಪ ವಿಭಾಗದಲ್ಲಿ 400ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದರು.

7 ಗ್ರಾಮ ಸೀಲ್‍ಡೌನ್: ತಾಲೂಕಿನ ಅರಸು ಕಲ್ಲಹಳ್ಳಿಯಲ್ಲಿ ಇದುವರೆಗೂ 75 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 44 ಮಂದಿಯನ್ನು ನಗರದ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲಾಗಿದೆ. 20ಕ್ಕೂ ಹೆಚ್ಚು ಮಂದಿಯನ್ನು ಹೋಂ ಐಸೋಲೇಷನ್‍ನಲ್ಲಿರಿಸಲಾಗಿದೆ. ಕೊರೊನಾ ಹೆಚ್ಚಳದಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಕಲ್ಲಹಳ್ಳಿ ಆಸ್ಪತ್ರೆ ವತಿಯಿಂದ ಗ್ರಾಮದ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೇ ತಾಲೂಕಿನ ಹಳೇಪುರದಲ್ಲಿ 28, ಬಿಳಿಕೆರೆಯಲ್ಲಿ 9, ತಮ್ಮಡಹಳ್ಳಿಯಲ್ಲಿ 9, ತಟ್ಟೆಕೆರೆಯಲ್ಲಿ 6, ಹೊಸರಾಮೇನಹಳ್ಳಿಯಲ್ಲಿ 6, ಉಂಡವಾಡಿಯಲ್ಲಿ 5, ಮಾರುತಿ ಬಡಾವಣೆಯಲ್ಲಿ 4, ಯಾಮಗುಂಬದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಕಲ್ಲಹಳ್ಳಿ, ತಮ್ಮಡಹಳ್ಳಿ, ಹಳೇಪುರ, ಬಿಳಿಕೆರೆ ಸೇರಿದಂತೆ ತಾಲೂಕಿನ 7 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜ್ ತಿಳಿಸಿದರು.

Translate »