ಮನೆ ಮಹಜರ್ ವೇಳೆ ಮೂರು ಡೆತ್‌ನೋಟ್‌ಗಳು ಪತ್ತೆ
ಶಂಕರ್‌ನ ವಿರುದ್ಧ ಪುತ್ರ-ಪುತ್ರಿಯರಿಂದಲೇ ಆರೋಪ
ಬೆಂಗಳೂರು, ಸೆ.೧೯-ಬೆಂಗಳೂರಿನ ಬ್ಯಾಡರಹಳ್ಳಿ ಯಲ್ಲಿ ೯ ತಿಂಗಳ ಹಸುಗೂಸುವನ್ನು ಕೊಂದು ಪತ್ರ ಕರ್ತನ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿ ಕೊಂಡ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಮನೆ ಯಜ ಮಾನ, ಪತ್ರಕರ್ತ ಹಲ್ಲೆಗೆರೆ ಶಂಕರ್ ಮತ್ತು ಅವರ ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ಶಂಕರ್ ಹಾಗೂ ಅವರ ಸಂಬAಧಿಕರ ಸಮ್ಮುಖದಲ್ಲಿ ಆತ್ಮಹತ್ಯೆ ನಡೆದ ಮನೆಯ ಮಹಜರ್ ನಡೆಸಿದ ಪೊಲೀಸರಿಗೆ ಶಂಕರ್ ಪುತ್ರ ಮಧು ಸಾಗರ್ ಹಾಗೂ ಪುತ್ರಿಯರಾದ ಸಿಂಚನ ಮತ್ತು ಸಿಂಧು ರಾಣ ಬರೆದಿರುವ ಡೆತ್‌ನೋಟ್‌ಗಳು ಪತ್ತೆಯಾಗಿವೆ. ಈ ಡೆತ್‌ನೋಟ್‌ಗಳನ್ನಾಧರಿಸಿ ಶಂಕರ್ ಮತ್ತು ಅಳಿಯಂದಿರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿ ರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು, ಸೋಮ ವಾರ ಬೆಳಗ್ಗೆ ೯.೩೦ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ನೋಟಿಸ್ ಜಾರಿ ಮಾಡಿದ್ದಾರೆ.
ಶಂಕರ್ ಮತ್ತು ಅಳಿಯಂದಿರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೂವರೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಪ್ಪನಿಗೆ ಅನೈತಿಕ ಸಂಬAಧ ಇತ್ತು. ಇದರಿಂದ ಸಂಸಾರದಲ್ಲಿ ಗಲಾಟೆ ಗಳು ನಡೆಯುತ್ತಿದ್ದವು. ಅಪ್ಪ ಸರಿಯಾಗಿದ್ದಿದ್ದರೆ ನಾವ್ಯಾಕೆ ಸಾಯುವ ಯೋಚನೆ ಮಾಡಬೇಕಿತ್ತು ಎಂದು ಮಧುಸಾಗರ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಅಪ್ಪ ಮತ್ತು ಪತಿಯಂದಿರು ಕಿರುಕುಳ ಕೊಡು ತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿ ಕೊಳ್ಳಲು ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲಿ ಸುಖ ಸಿಗಲಿಲ್ಲ. ತವರು ಮನೆಯಲ್ಲೂ ನೆಮ್ಮದಿ ಇಲ್ಲ. ಇನ್ನು ಯಾವ ಖುಷಿಗೆ ಬದುಕಬೇಕು? ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನಾದರೂ ಕೊನೆಯಾಗಲಿ ಎಂದು ಸಿಂಚನಾ ಮತ್ತು ಸಿಂಧುರಾಣ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ
ಎಂದು ಮೂಲಗಳು ತಿಳಿಸಿವೆ. ಸಾವಿನ ಸಂಬAಧ ಕೆಲ ಸಾಕ್ಷö್ಯ ಗಳು ಲ್ಯಾಪ್‌ಟಾಪ್‌ನಲ್ಲಿ ಇರುವ ಶಂಕೆಯ ಮೇರೆಗೆ ಪೊಲೀ ಸರು, ಅದನ್ನು ವಶಕ್ಕೆ ಪಡೆದಿದ್ದಾರೆ. ತನ್ನ ೯ ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊನೆ ಮಾಡಿದ ನಂತರ ಸಿಂಧುರಾಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾಕ್ಷö್ಯ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಮನೆಯ ರೂಂಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿದ್ದವು. ಅಲ್ಲದೇ ಮಹಜರ್ ವೇಳೆ ೧೫ ಲಕ್ಷ ರೂ. ನಗದು ಹಾಗೂ ಸುಮಾರು ೨ ಕೆ.ಜಿ.ಯಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು ದೊರೆತಿವೆ. ಪೊಲೀಸರು ಕೀ ಮೇಕರ್‌ನನ್ನು ಕರೆಸಿ ಲಾಕರ್ ತೆಗೆಸಿ ದ್ದರು. ಮನೆಯಲ್ಲಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾ ಭರಣ ಇರುವುದರಿಂದ ತಮ್ಮ ಸಮ್ಮುಖದಲ್ಲೇ ಮಹಜರ್ ನಡೆಸ ಬೇಕು ಎಂದು ಶಂಕರ್ ಪೊಲೀಸರಿಗೆ ಲಿಖಿತವಾಗಿ ಮನವಿ ಸಲ್ಲಿ ಸಿದ್ದರು. ಈ ಹಿನ್ನೆಲೆಯಲ್ಲಿ ಶಂಕರ್, ಅವರ ಇಬ್ಬರು ಅಳಿಯಂ ದಿರು ಹಾಗೂ ಓರ್ವ ಸಂಬAಧಿಕರ ಸಮ್ಮುಖದಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ. ಇದಕ್ಕೂ ಮುನ್ನ ಶಂಕರ್, ಈ ಸಾಮೂ ಹಿಕ ಆತ್ಮಹತ್ಯೆಗೆ ತನ್ನ ಪತ್ನಿ ಭಾರತಿ ಅವರ ಹಠಮಾರಿತನವೇ ಕಾರಣ ಎಂದು ಪೊಲೀಸರಿಗೆ ನೀಡಿದ್ದ ೭ ಪುಟಗಳ ದೂರಿನಲ್ಲಿ ತಿಳಿಸಿದ್ದರು. ಮೊದಲ ಪುತ್ರಿ ಸಿಂಚನಾ ಪತಿಯನ್ನು ತೊರೆದು ತವರಿಗೆ ಬಂದು ಒಂದೂವರೆ ವರ್ಷ ಆಗಿತ್ತು. ಎರಡನೇ ಮಗಳು ಸಿಂಧುರಾಣ ಯೂ ಕೂಡ ಪತಿಯ ಜೊತೆ ಜಗಳವಾಡಿಕೊಂಡು ಬಂದಿದ್ದು, ತಾನು ಬುದ್ಧಿವಾದ ಹೇಳಿದರೂ ಪುತ್ರಿಯರು ತಾಯಿಯ ಮಾತನ್ನು ಕೇಳಿ ಹಠಮಾರಿತನದಿಂದ ನಡೆದುಕೊಳ್ಳು ತ್ತಿದ್ದರು. ತಾನು ಈವರೆಗೆ ಗಳಿಸಿದ್ದ ಹೆಸರು ಮತ್ತು ಆಸ್ತಿಯನ್ನು ನಿರ್ನಾಮ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.