ಮಡಿಕೇರಿಯಲ್ಲಿ ಗಿರೀಶ್ ಕಾರ್ನಾಡ್ ವಿರುದ್ಧ ಕೇಸ್ ದಾಖಲು
ಕೊಡಗು

ಮಡಿಕೇರಿಯಲ್ಲಿ ಗಿರೀಶ್ ಕಾರ್ನಾಡ್ ವಿರುದ್ಧ ಕೇಸ್ ದಾಖಲು

September 9, 2018

ಮಡಿಕೇರಿ: ಬೆಂಗಳೂರಿನಲ್ಲಿ ಇತ್ತೀಚಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ‘ನಾನೂ ನಗರ ನಕ್ಸಲ್’ ಎಂದು ಬೋರ್ಡ್ ತಗುಲಿಸಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವ ಹಿಂದೂ ಪರಿಷದ್‍ನ ಕೊಡಗು ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಎನ್.ಕೆ.ಅಜಿತ್ ಕುಮಾರ್ ಮಡಿ ಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ವಿರುದ್ದ ದೂರು ದಾಖಲಿಸಿದ್ದಾರೆ.
ನಕ್ಸಲ್ ಎಂದರೆ ಮಾವೋವಾದಿ ಸಂಘಟನೆಯಾಗಿದ್ದು, ಈ ಸಂಘಟನೆಯನ್ನು ದೇಶದಾದ್ಯಂತ 2009 ರಿಂದಲೇ ನಿಷೇಧಿಸಲಾಗಿದೆ. ಈ ಸಂಘಟನೆ ಸದಸ್ಯ ರಾಗುವುದು ಕೂಡ ಕಾನೂನು ವಿರೋಧಿಯಾಗಿದೆ. ಹೀಗಾಗಿ ನಾನೂ ನಗರ ನಕ್ಸಲ್ ಎಂದು ಬೋರ್ಡ್ ತಗುಲಿಸಿಕೊಂಡು ಬಹಿರಂಗವಾಗಿ ನಕ್ಸಲ್ ಸಂಘ ಟನೆಯಲ್ಲಿ ಗುರುತಿಸಿಕೊಂಡಿರುವ ಗಿರೀಶ್ ಕಾರ್ನಾಡ್ ಅವರನ್ನು ಸರ್ಕಾರ ಕೂಡಲೇ ಬಂಧಿಸಬೇಕೆಂದು ಅಜಿತ್ ಕುಮಾರ್ ಒತ್ತಾಯಿಸಿದ್ದಾರೆ.

ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಅವರನ್ನು ತಕ್ಷಣವೆ ಬಂಧಿಸದೇ ಹೋದಲ್ಲಿ ತೀವ್ರ ಪ್ರತಿ ಭಟನೆ ನಡೆಸುವುದಾಗಿ ಅಜಿತ್ ಕುಮಾರ್ ಎಚ್ಚರಿಸಿದ್ದಾರೆ.

Translate »