ಗುಂಡ್ಲುಪೇಟೆ ಬಳಿ ಕಲ್ಲು ಗಣ ಗಾರಿಕೆ ಗುಡ್ಡ ಕುಸಿತ ಪ್ರಕರಣ ಓರ್ವ ಕಾರ್ಮಿಕನ ಮೃತದೇಹ ಹೊರತೆಗೆದ ರಕ್ಷಣಾಪಡೆ
ಮೈಸೂರು

ಗುಂಡ್ಲುಪೇಟೆ ಬಳಿ ಕಲ್ಲು ಗಣ ಗಾರಿಕೆ ಗುಡ್ಡ ಕುಸಿತ ಪ್ರಕರಣ ಓರ್ವ ಕಾರ್ಮಿಕನ ಮೃತದೇಹ ಹೊರತೆಗೆದ ರಕ್ಷಣಾಪಡೆ

March 6, 2022

ಮತ್ತಿಬ್ಬರ ಶವಕ್ಕಾಗಿ ಕಾರ್ಯಾಚರಣೆ ಮುಂದುವರಿಕೆ
ಸ್‌ಎಸ್)- ತಾಲೂಕಿನ ಮಡಹಳ್ಳಿ ಗ್ರಾಮದ ಬಳಿ ನಡೆಯುತ್ತಿದ್ದ ಬಿಳಿಕಲ್ಲು ಕ್ವಾರೆ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಮೃತ ಪಟ್ಟಿರುವುದು ಖಚಿತವಾಗಿದ್ದು, ಈ ಪೈಕಿ ಓರ್ವ ಕಾರ್ಮಿಕನ ಶವವನ್ನು ಹೊರತೆಗೆ ಯಲಾಗಿದ್ದು, ಮತ್ತಿಬ್ಬರ ಶವ ಹೊರತೆಗೆಯುವ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಉತ್ತರಪ್ರದೇಶ ಮೂಲದ ಅಜೀಮುಲ್ಲಾ (೨೪) ಎಂಬಾತನ ಶವ ಹೊರ ತೆಗೆಯಲಾ ಗಿದೆ. ಮಿರಾಜ್(೧೮) ಹಾಗೂ ಸರ್ಫರಾಜ್ (೨೪) ಸಹ ಮೃತಪಟ್ಟಿರುವುದು ಖಚಿತವಾ ಗಿದ್ದು, ಭಾರೀ ಗಾತ್ರದ ಬಂಡೆಗಳ ಕೆಳಗೆ ಮೃತದೇಹಗಳಿರುವುದರಿಂದ ಅವುಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ. ಮಡಹಳ್ಳಿ ಗ್ರಾಮದ ಸನಿಹದ ಸರ್ಕಾರಿ ಗೋಮಾಳದಲ್ಲಿ ಬಿಳಿಕಲ್ಲು ಕ್ವಾರೆ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆ ಸ್ಥಳದಲ್ಲಿ ೨೪ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಗುಡ್ಡ ಕುಸಿಯುವ ಮುನ್ನ ಮೇಲಿಂದ ಮಣ್ಣು ಉದುರುವುದು ಆರಂಭವಾದ್ದರಿAದ ೨೧ ಮಂದಿ ಕಾರ್ಮಿಕರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡರು ಎನ್ನಲಾಗಿದೆ. ಉಳಿದ ಮೂರು ಮಂದಿ ಕಾರ್ಮಿಕರು ಭಾರೀ ಗಾತ್ರದ ಬಂಡೆ ಹಾಗೂ ಮಣ ್ಣನ ಕೆಳಗೆ ಸಿಲುಕಿ ಧಾರುಣ ವಾಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಾಚರಣೆ: ರಾಷ್ಟಿçÃಯ ವಿಪತ್ತು ಸ್ಪಂದನಾ ಪಡೆ(ಎನ್‌ಡಿಆರ್‌ಎಫ್)ಯ ೨೦ ಸಿಬ್ಬಂದಿ, ರಾಜ್ ವಿಪತ್ತು ಸ್ಪಂದನಾ ಪಡೆಯ(ಎಸ್‌ಡಿಆರ್‌ಎಫ್) ೨೦ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದ ಸುಮಾರು ೫೦ ಸಿಬ್ಬಂದಿ ಶನಿವಾರ ಬೆಳಗ್ಗೆ ೫.೩೦ರಲ್ಲಿ ಕಾರ್ಯಾಚರಣೆ ಆರಂಭಿಸಿದರು. ಭಾರೀ ಗಾತ್ರದ ಕಲ್ಲು ಬಂಡೆಗಳ ಅಡಿಯಲ್ಲಿ ಸಿಲುಕಿದ್ದ ಹಿಟಾಚಿಯಲ್ಲಿ ಓರ್ವನ ಶವ ಇರುವುದನ್ನು ಸಿಬ್ಬಂದಿ ಪತ್ತೆ ಹಚ್ಚಿದರು. ಉರಿ ಬಿಸಿಲನ್ನೂ ಲೆಕ್ಕಿಸದೆ ಸತತವಾಗಿ ೧೧ ಗಂಟೆಗಳ ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದು ನಗರದ ಜಿಲ್ಲಾ ಸ್ಪತ್ರೆಗೆ ಸಾಗಿಸಲಾಯಿತು. ಓರ್ವ ಕಾರ್ಮಿಕನ ಮೃತದೇಹ ದೊರೆತ ಸನಿಹದಲ್ಲಿಯೇ ಮತ್ತೊಂದು ಹಿಟಾಚಿ ಬಂಡೆಗಳ ಕೆಳಗೆ ಸಿಲುಕಿದೆ. ಈ ಸ್ಥಳದಲ್ಲಿ ವಾಸನೆ ಬರುತ್ತಿರುವುದನ್ನು ಪೊಲೀಸ್ ಶ್ವಾನ ಖಚಿತಪಡಿಸಿದೆ. ಹೀಗಾಗಿ ಇನ್ನೊಬ್ಬ ಕಾರ್ಮಿಕ ಮೃತದೇಹ ಇರುಬಹುದು ಎಂದು ಶಂಕಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮತ್ತೊಬ್ಬ ಕಾರ್ಮಿಕನ ಶವ ಇರುವ ಜಾಗ ಪತ್ತೆ ಆಗಿಲ್ಲ. ಆದರೆ ಸ್ಥಳೀಯರು ಮತ್ತು ಮೃತರ ಸ್ನೇಹಿತರ ಮಾಹಿತಿಯ ಹಿನ್ನೆಲೆಯಲ್ಲಿ ಶವಕ್ಕಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಭಾರೀ ಗಾತ್ರದ ಬಂಡೆ ಹಾಗೂ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುವುದು ಸಿಬ್ಬಂದಿಗೆ ಸವಾಲಾಗಿದೆ.

ಉಸ್ತುವಾರಿ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಅವರು ಶನಿವಾರ ಬೆಳಗ್ಗೆ ಸ್ಥಳಕೆ ಭೇಟಿ ನೀಡಿ ಪರಿಶೀಲಿಸಿದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಕೈಗೊಂಡಿರುವ ಜಂಟಿ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಓರ್ವ ಬಂಧನ: ಕ್ವಾರೆಯಲ್ಲಿ ಗುತ್ತಿಗೆ ಪಡೆದಿದ್ದ ಬೊಮ್ಮಲಾಪುರದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕ್ಕೀಂ ಹಾಗೂ ವ್ಯವಸ್ಥಾಪಕ ನವೀದ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಇವರಲ್ಲಿ ವ್ಯವಸ್ಥಾಪಕ ನವೀದ್ ಅವರನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಇಲ್ಲಿ ನೀತಿ-ನಿಯಮಗಳನ್ನು ಉಲ್ಲಂಘಿಸಿ ಗಣ ಗಾರಿಕೆ ನಡೆಸುತ್ತಿರುವುದರಿಂದ ದುರಂತ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಸ್‌ಪಿ ಶಿವಕುಮಾರ್, ಎಎಸ್‌ಪಿ ಸುಂದರ್‌ರಾಜ್, ಜಿಪಂ ಸಿಇಓ ಕೆ.ಎಂ.ಗಾಯಿತ್ರಿ, ಉಪವಿಭಾಗಾಧಿಕಾರಿ ಗಿರೀಶ್, ಗಣ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕ ಮಾಲತೇಶ್, ಬೆಂಗಳೂರು ಕೇಂದ್ರ ಕಚೇರಿ ಉಪ ನಿರ್ದೇಶಕಿ ಡಾ.ಲಕ್ಷö್ಮಮ್ಮ, ಜಿಲ್ಲಾ ಉಪನಿರ್ದೇಶಕ ನಾಗಭೂಷಣ ಇತರರು ಹಾಜರಿದ್ದರು.

Translate »