ಮೇಕೆದಾಟು ಯೋಜನೆ: ರಾಜ್ಯ, ತಮಿಳುನಾಡು ಮಾತುಕತೆಗೆ ಸಿದ್ಧವಿದ್ದರೆ, ಕೇಂದ್ರ ಮಧ್ಯ ಪ್ರವೇಶ
ಮೈಸೂರು

ಮೇಕೆದಾಟು ಯೋಜನೆ: ರಾಜ್ಯ, ತಮಿಳುನಾಡು ಮಾತುಕತೆಗೆ ಸಿದ್ಧವಿದ್ದರೆ, ಕೇಂದ್ರ ಮಧ್ಯ ಪ್ರವೇಶ

March 6, 2022

Áðಟಕ ಮತ್ತು ತಮಿಳುನಾಡು ರಾಜ್ಯಗಳು ಮಾತುಕತೆಗೆ ಆಸಕ್ತಿ ತೋರಿಸಿದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿವಾದ ಸಿಡಬ್ಲು÷್ಯಸಿ ಹಾಗೂ ಸುಪ್ರೀಂಕೋರ್ಟ್ನಲ್ಲಿದೆ. ಈ ಕಾರಣದಿಂದ ಈಗ ಮಾತನಾಡುವುದು ಸೂಕ್ತವಲ್ಲ ಎಂದರು. ಕೋರ್ಟ್ ಹೊರಗಡೆ ನದಿ ಪಾತ್ರದ ಎರಡೂ ರಾಜ್ಯಗಳು ಕುಳಿತು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಸೌಹಾರ್ದಯತವಾಗಿ ಬಗೆಹರಿಸಲು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಕೆನ್-ಬೆತ್ವಾ ನದಿಗಳ ಜೋಡಣೆ ವಿಚಾರವಾಗಿ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ನಡುವೆ ಸಮಸ್ಯೆ ಇತ್ತು. ಈ ಸಮಸ್ಯೆಯಿಂದ ದೀರ್ಘಾವಧಿ ನೆನೆಗುದಿಗೆ ಬಿದ್ದಿತ್ತು. ಉಭಯ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡವು. ಇದರಿಂದ ಬರ ಪೀಡಿತ ಬುಂದೇಲ್ ಖಂಡ ಪ್ರದೇಶದ ನೀರಿನ ದಾಹ ತಣ ಸಲು ನದಿ ಜೋಡಣೆ ನೆರವಾಯಿತು. ಇದೇ ಮಾದರಿಯನ್ನು ಕರ್ನಾಟಕ ಹಾಗೂ ತಮಿಳುನಾಡು ಅನುಸರಿಸಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು.

Translate »