ಮಾ.೯ರಿಂದ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಮೈಸೂರು

ಮಾ.೯ರಿಂದ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ

March 6, 2022

ಈ ಬಾರಿ ಭಕ್ತರಿಗೆ ಮುಕ್ತ ಅವಕಾಶ

ಆಕರ್ಷಕ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು

ಇಂದು ರಾತ್ರಿ ಕಲ್ಯಾಣ ಯಲ್ಲಿ ಪ್ರಥಮ ತೆಪ್ಪೋತ್ಸವ

ಮೇಲುಕೋಟೆ, ಮಾ.೫- ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲ್ಪಟ್ಟ ವೈರಮುಡಿ ಜಾತ್ರಾ ಮಹೋತ್ಸವವು ಈ ಬಾರಿ ಮಾ.೯ರಿಂದ ೨೧ರವರೆಗೆ ವೈಭವ ಮತ್ತು ವಿಜೃಂಭಣೆಯಿAದ ನಡೆಯಲಿದೆ.ಈ ಸಂಬAಧ ಪೂರ್ವಭಾವಿ ಕಾರ್ಯ ಕ್ರಮಗಳು ಮಾ.೯ರ ಅಂಕುರಾರ್ಪಣೆಯಿAದ ಆರಂಭವಾಗಿ ಮಾ.೨೧ರವರೆಗೆ ನೆರವೇರಲಿದೆ.
ಈ ವರ್ಷ ವೈರಮುಡಿ ಜಾತ್ರಾ ಮಹೋ ತ್ಸವಗಳಿಗೆ ಭಕ್ತರಿಗೆ ಮುಕ್ತ ಪ್ರವೇಶವಿದ್ದು, ಆಕರ್ಷಕ ದೀಪಾಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ದೀಪಾಲಂಕಾರ ಕಾರ್ಯ ಪ್ರಗತಿಯಲ್ಲಿದ್ದು ವೈರಮುಡಿ ಜಾತ್ರಾ ಮಹೋ ತ್ಸವಕ್ಕೂ ಮುನ್ನ ಮಾ.೬ರ ರಾತ್ರಿ ಕಲ್ಯಾಣ ಯಲ್ಲಿ ಪ್ರಥಮ ತೆಪ್ಪೋತ್ಸವ ನಡೆಯಲಿದೆ
ವೈರಮುಡಿ ಜಾತ್ರಾ ಮಹೋತ್ಸವಗಳ ವಿವರ: ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೧೦ ರಂದು ಸಂಜೆ ೬ ಗಂಟೆಗೆ ಕಲ್ಯಾಣ ಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ, ಮಾ.೧೧ ರಂದು ಬೆಳಗ್ಗೆ ೧೦ಕ್ಕೆ ಗರುಡ ಧ್ವಜಾರೋಹಣ, ರಾತ್ರಿ ೭ಕ್ಕೆ ತಿರುಪ್ಪೋರೈ, ಹಂಸವಾಹನ ಮಾ ೧೨ ರಂದು ರಾಮಾನುಜಾಚಾರ್ಯರಿಗೆ ಬೆಳಗ್ಗೆ ೧೦ಕ್ಕೆ ಅಭಿಷೇಕ, ರಾತ್ರಿ ೮ಕ್ಕೆ ಶೇಷ ವಾಹನೋತ್ಸವ, ಮಾ.೧೩ ರಂದು ನಾಗವಲ್ಲೀ ಮಹೋತ್ಸವದ ಅಂಗವಾಗಿ ಮಧ್ಯಾಹ್ನ ೨ ಗಂಟೆಗೆ ಬಂಗಾರದ ಪಲ್ಲಕ್ಕಿ ಉತ್ಸವ, ಸಂಜೆ ಧಾರಾಮಂಟಪದಲ್ಲಿ ನಾಗವಲ್ಲೀ ಮಹೋತ್ಸವ ನಂತರ ನಗರಪ್ರದಕ್ಷಿಣೆಯ ಉತ್ಸವ, ರಾತ್ರಿ ೮ ಕ್ಕೆ ಚಂದ್ರಮAಡಲ ವಾಹ ನೋತ್ಸವ, ಮಾ.೧೫ ರಂದು ೫ ನೇತಿರು ನಾಳ್ ಅಂಗವಾಗಿ ಸಂಜೆ ಪ್ರಹ್ಲಾದಪರಿ ಪಾಲನ ಉತ್ಸವ, ರಾತ್ರಿ ೮ಕ್ಕೆ ಗರುಡವಾಹ ನೋತ್ಸವ, ಮಾ.೧೬ ರಂದು ಸಂಜೆ ೬ ಕ್ಕೆ ಗಜೇಂದ್ರ ಮೋಕ್ಷ ಉತ್ಸವ ಹಾಗೂ ರಾತ್ರಿ ೮ಕ್ಕೆ ಗಜ ಹಾಗೂ ಅಶ್ವವಾಹನೋ ತ್ಸವ ನಡೆಯುತ್ತದೆ.

ಮಹಾರಥೋತ್ಸವ: ವೈರಮುಡಿ ಜಾತ್ರಾ ಮಹೋತ್ಸವದ ಮತ್ತೊಂದು ಪ್ರಮುಖ ಕಾರ್ಯಕ್ರಮ ಮಹಾ ರಥೋತ್ಸವ ಮಾರ್ಚ್ ೧೭ ರಂದು ನಡೆಯಲಿದೆ. ಅಂದು ಬೆಳಗ್ಗೆ ೭ಕ್ಕೆ ಯಾತ್ರಾದಾನವಾದ ನಂತರ ಶ್ರೀದೇವಿ ಭೂದೇವಿ ಭಗವದ್ರಾಮಾನುಜಾಚಾರ್ಯ ರೊಂದಿಗೆ ಚೆಲುವನಾರಾಯಣಸ್ವಾಮಿಗೆ ಮಹಾರಥೋತ್ಸವ ನೆರವೇರಲಿದೆ. ಬೆಳಗ್ಗೆ ೧೦ ರಿಂದ ರಥೋತ್ಸವ ಆರಂಭ ವಾಗಲಿದ್ದು, ಸ್ವಾಮಿಯ ಬೃಹತ್ ರಥ ಚತುರ್ವೀದಿಗಳಲ್ಲಿ ಚಲಿಸಲಿದೆ.

ಮಾರ್ಚ್ ೧೮ ರಂದು ರಾತ್ರಿ ೭ಕ್ಕೆ ಕಲ್ಯಾಣ ಯಲ್ಲಿ ರಾಜಮುಡಿ ಉತ್ಸವದೊಂದಿಗೆ ತೆಪ್ಪೋತ್ಸವ ನಡೆಯಲಿದ್ದು, ಕಲ್ಯಾಣ ಗೆ ನಯನ ಮನೋಹರ ದೀಪಾಲಂಕಾರ ದೊಂದಿಗೆ ಲೇಸರ್ ಷೋ ಆಯೋಜಿಸಲಾ ಗಿದೆ ಮಾ.೧೯ ರಂದು ಬೆಳಗ್ಗೆ ೧೦ ಗಂಟೆಗೆ ಕಲ್ಯಾಣ ಯಲ್ಲಿ ತೀರ್ಥಸ್ನಾನ ಸಂಜೆ ೪ಕ್ಕೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಹೋಮ, ನಂತರ ಪಟ್ಟಾಭಿ ಷೇಕ ಮಹೋತ್ಸವ ನಂತರ ಸಮರಭೂ ಪಾಲ ವಾಹನ ನಡೆಯಲಿದೆ. ಮಾ.೨೦ ರಂದು ಮೂಲಮೂರ್ತಿ ಚಲುವನಾರಾಯಣ ಸ್ವಾಮಿಗೆ ಮಹಾಭಿಷೇಕ ನಡೆಯಲಿದೆ ೨೧ ರಂದು ಯದುಗಿರಿನಾಯಕಿ ಮತ್ತು ಯೋಗಾ ನರಸಿಂಹಸ್ವಾಮಿಗೆ ಮಹಾಭಿಷೇಕ ಮತ್ತು ಅನ್ನಕೋಟಿ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಈ ಸಂಬAಧ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಅಧಿಕಾರಿ ಗಳು ಭಾಗವಹಿಸಿದರು.

 

Translate »