ಗುಂಡ್ಲುಪೇಟೆ,ಮಾ.1 (ಸೋಮ್.ಜಿ)- ಹೆಚ್ಚುವರಿ ಗಸ್ತು ನಡೆಸುವ ಮೂಲಕ ಕಾಡಂಚಿನ ರೈತರ ಹಿತ ಕಾಪಾಡುವಂತೆ ಅರಣ್ಯಾಧಿಕಾರಿಗಳಿಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಸೂಚಿಸಿದರು. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ್ ಅರಣ್ಯ ಪ್ರದೇಶದ ಅಂಚಿನಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 15 ಕಿಲೋಮೀಟರ್ ಉದ್ದದ ಆನೆ ಕಂದಕ ಕಾಮಗಾರಿ ವೀಕ್ಷಿಸಿದ ಶಾಸಕರು, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಇತ್ತೀಚೆಗೆ ಓಂಕಾರ್ ವಲಯದ ಕಾಡಂ ಚಿನ ಜಮೀನಿನಲ್ಲಿ ಆನೆ ದಾಳಿ ಪ್ರಕರಣ ಗಳು ಹೆಚ್ಚಾಗಿದೆ. ಹೀಗಾಗಿ ಈ ಭಾಗ ಗಳಲ್ಲಿ ಹೆಚ್ಚಿನ…
ಸೋಲಿಗ ಸಮುದಾಯಕ್ಕೆ ದೊರೆಯದ ಸರ್ಕಾರದ ಸೌಲಭ್ಯ
March 2, 2020ಹನೂರು,ಮಾ.1(ಸೋಮ)- ಕೇಂದ್ರ ಸರ್ಕಾರ ಮೂಲ ನಿವಾಸಿಗಳ ಪಟ್ಟಿಯಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯವನ್ನು ಮಾತ್ರ ಸೇರ್ಪಡೆ ಮಾಡಿರುವುದರಿಂದ ಸೋಲಿಗ ಸಮುದಾಯಕ್ಕೆ ದೊರೆಯಬೇಕಾದ ಹಲವು ಸೌಲಭ್ಯಗಳು ದೊರಕುತ್ತಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ವಿಷಾದಿಸಿದರು. ತಾಲೂಕಿನ ಪೊನ್ನಾಚಿಯಲ್ಲಿ ನಡೆದ ಸೋಲಿಗ ಅಭಿ ವೃದ್ಧಿ ಸಂಘದ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 56 ಬುಡಕಟ್ಟು ಜನಾಂಗಗಳಿವೆ. ಸೋಲಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಮೂಲ ನಿವಾಸಿಗಳ ಪಟ್ಟಿಗೆ ಸೇರ್ಪಡೆಗೊಳಿ ಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ…
ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ
March 1, 2020ಚಾಮರಾಜನಗರ, ಫೆ.29(ಎಸ್‍ಎಸ್) – ತಮ್ಮನ್ನು ಸರ್ಕಾರಿ ನೌಕರರೆಂದು ಪರಿ ಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಿಂದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆರ್.ರಾಮಣ್ಣ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಹೊರಟ ನೌಕರರು, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಆಹಾರ ಇಲಾಖೆ ಉಪ ನಿರ್ದೇಶಕ ರಾಚಪ್ಪ ಅವರ ಮೂಲಕ…
ವಿಜ್ಞಾನದ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ
February 29, 2020ಚಾಮರಾಜನಗರ,ಫೆ.28-ವಿಜ್ಞಾನದ ಬೆಳವಣಿಗೆಯಿಂದ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಗೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆÉ ಎಂದು ವಿಶ್ರಾಂತ ಕುಲಪತಿ, ಕೃಷಿ ವಿಜ್ಞಾನಿ ಪ್ರೊ.ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವ ಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 1960ರಲ್ಲಿ 50 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದ ದೇಶವು ಹೆಚ್ಚಿನ ಆಹಾರ ಉತ್ಪನ್ನಗಳಿಗಾಗಿ ಹೊರದೇಶ ಗಳನ್ನು ಅವಲಂಬಿಸಿತ್ತು. ವಿಜ್ಞಾನದ ಬೆಳ…
ಯಳಂದೂರು ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ
February 29, 2020ಯಳಂದೂರು,ಫೆ.28-ಇಲ್ಲಿನ ತಾಲೂಕು ಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ನಂತರ ಪಡಸಾಲೆಗೆ ಭೇಟಿ ಕೊಟ್ಟು ನಾಗರಿಕರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿ ಪಡಸಾಲೆಯಲ್ಲಿ ಕೈಗೊಳ್ಳಬೇಕಿರುವ ಆಧುನೀಕರಣ ವ್ಯವಸ್ಥೆಗೆ ಅಗತ್ಯವಿರುವ ಅಂದಾಜು ವೆಚ್ಚವನ್ನು ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸೌಲಭ್ಯ ಬಯಸಿ ಬರುವ ಸಾರ್ವಜನಿಕರಿಗೆ ಮೂಲಭೂತವಾಗಿ ಕುಡಿಯುವ ನೀರು, ಆಸನಗಳು, ಶೌಚಾಲಯ ಇನ್ನಿತರ ಅವಶ್ಯಕ ವ್ಯವಸ್ಥೆಗಳನ್ನು ಒದಗಿಸಲು…
ಕೃಷ್ಣಯ್ಯನ ಕಟ್ಟೆ ಬಳಿ ಕಡವೆ ಮಾಂಸ ವಶ
February 29, 2020ಯಳಂದೂರು, ಫೆ.28- ತಾಲೂಕಿನ ಕೃಷ್ಣಯ್ಯನ ಕಟ್ಟೆ ಬಳಿ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಕಡವೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ನೋಡಿದ ಬೇಟೆಗಾರರು ಸ್ಥಳದಲ್ಲೇ ಬಂದೂಕು, 3 ಚೀಲ ಕಡವೆ ಮಾಂಸ ಬಿಟ್ಟು ಪರಾರಿಯಾಗಿ ದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಆರ್‍ಎಫ್‍ಓ ಮಹದೇವಯ್ಯ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ರಘುರಾಮ್, ಅರಣ್ಯ ರಕ್ಷಕ ವಿಠಲ, ಮಂಜುನಾಥ್, ರಮೇಶ್, ಚಾಲಕ ಮರಿಸ್ವಾಮಿ ಇತರರಿದ್ದರು.
ಮಳವಳ್ಳಿ, ರಾಘವಾಪುರ ಕೆರೆಗೆ ಶೀಘ್ರದಲ್ಲೇ ನೀರು: ಭರವಸೆ
February 29, 2020ಗುಂಡ್ಲುಪೇಟೆ, ಫೆ.28 (ಸೋಮ್.ಜಿ)- ಶೀಘ್ರದಲ್ಲೇ ಕಬಿನಿ ನದಿ ಮೂಲದಿಂದ ಮಳವಳ್ಳಿ ಮತ್ತು ರಾಘವಾಪುರ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಭರವಸೆ ನೀಡಿದರು. ತಾಲೂಕಿನ ಮಳವಳ್ಳಿ ಮತ್ತು ರಾಘವಾಪುರ ಗ್ರಾಮದ ಬಳಿ ನಡೆಯುತ್ತಿರುವ ನದಿ ಮೂಲದಿಂದ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪ್ರಗತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ತಾಲೂಕಿನ ಮಳವಳ್ಳಿ ಮತ್ತು ರಾಘವಾಪುರ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಮೂಲಕ ಈ ಭಾಗದ ರೈತರ ಕನಸು ನನಸಾಗಲಿದೆ ಎಂದರು. ಈಗಾಗಲೇ ಮಳವಳ್ಳಿ-ರಾಘವಾಪುರ-ಹಳ್ಳದಮಾದಹಳ್ಳಿ ಗೇಟ್…
ದೆಹಲಿ ಗಲಭೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ
February 28, 2020ಚಾಮರಾಜನಗರ, ಫೆ.27- ದೆಹಲಿ ಗಲಭೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಲಾರಿ ನಿಲ್ದಾಣದಲ್ಲಿ ಜಮಾಯಿ ಸಿದ ಎಸ್‍ಡಿಪಿಐ ಕಾರ್ಯಕರ್ತರು, ಜಿಲ್ಲಾ ಧ್ಯಕ್ಷ ಎನ್. ಖಲೀಲ್ ಉಲ್ಲಾ ನೇತೃತ್ವದಲ್ಲಿ ಮೆರವಣಿಗೆ ಹೊರಟು ಡಿವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ದೆಹಲಿ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ…
ಗುಂಡ್ಲುಪೇಟೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
February 28, 2020ಗುಂಡ್ಲುಪೇಟೆ, ಫೆ.27 (ಸೋಮ್.ಜಿ)- ಇಲ್ಲಿನ ಪಿಕಾರ್ಡ್ ಬ್ಯಾಂಕ್ ನೂತನ ಅಧ್ಯಕ್ಷ ರಾಗಿ ಎನ್.ಮಲ್ಲೇಶ್ ಮತ್ತು ಉಪಾಧ್ಯಕ್ಷ ರಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಇಲ್ಲಿನ ಪಿಕಾರ್ಡ್ ಆಡಳಿತ ಮಂಡಳಿಯಲ್ಲಿ ಒಟ್ಟು 14 ಮಂದಿ ನಿರ್ದೇ ಶಕರಿದ್ದು, ಬಿಜೆಪಿ 10 ಮತ್ತು ಕಾಂಗ್ರೆಸ್ 4 ನಿರ್ದೇಶಕರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಎನ್.ಮಲ್ಲೇಶ್ ಮತ್ತು ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ರೈತರ ಹಿತ ಕಾಪಾಡಿ…
ಟೆಂಡರ್ ವೇಳೆ ಎಸ್‍ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸಿರುವ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ವಿರುದ್ಧ ಜಿಲ್ಲಾಧಿಕಾರಿಗೆ ದೂರು
February 28, 2020ಚಾಮರಾಜನಗರ, ಫೆ.27(ಎಸ್‍ಎಸ್)- ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಎಸ್‍ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸಿರುವ ಚಾ.ನಗರ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ನಗÀರಸಭಾ ಸದಸ್ಯೆ ಎಂ.ಕಲಾವತಿ ದೂರು ನೀಡಿದ್ದಾರೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಚಾ.ನಗರ ನಗರಸಭೆಗೆ ರಾಜ್ಯ ಸರ್ಕಾರ ವಿವಿಧ ಅನುದಾನದಡಿ 2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರವು ಮಾರ್ಗಸೂಚಿ ನಿಗದಿಗೊಳಿಸಿದೆ….