ಮಳವಳ್ಳಿ, ರಾಘವಾಪುರ ಕೆರೆಗೆ ಶೀಘ್ರದಲ್ಲೇ ನೀರು: ಭರವಸೆ
ಚಾಮರಾಜನಗರ

ಮಳವಳ್ಳಿ, ರಾಘವಾಪುರ ಕೆರೆಗೆ ಶೀಘ್ರದಲ್ಲೇ ನೀರು: ಭರವಸೆ

February 29, 2020

ಗುಂಡ್ಲುಪೇಟೆ, ಫೆ.28 (ಸೋಮ್.ಜಿ)- ಶೀಘ್ರದಲ್ಲೇ ಕಬಿನಿ ನದಿ ಮೂಲದಿಂದ ಮಳವಳ್ಳಿ ಮತ್ತು ರಾಘವಾಪುರ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಭರವಸೆ ನೀಡಿದರು.

ತಾಲೂಕಿನ ಮಳವಳ್ಳಿ ಮತ್ತು ರಾಘವಾಪುರ ಗ್ರಾಮದ ಬಳಿ ನಡೆಯುತ್ತಿರುವ ನದಿ ಮೂಲದಿಂದ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪ್ರಗತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ತಾಲೂಕಿನ ಮಳವಳ್ಳಿ ಮತ್ತು ರಾಘವಾಪುರ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಮೂಲಕ ಈ ಭಾಗದ ರೈತರ ಕನಸು ನನಸಾಗಲಿದೆ ಎಂದರು.

ಈಗಾಗಲೇ ಮಳವಳ್ಳಿ-ರಾಘವಾಪುರ-ಹಳ್ಳದಮಾದಹಳ್ಳಿ ಗೇಟ್ ಸಮೀಪ ಪೈಪ್‍ಲೈನ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಉದ್ದೇಶಿತ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಈ ವೇಳೆ ತಾಪಂ ಸದಸ್ಯ ಕೆ.ಪ್ರಭಾಕರ್, ಗ್ರಾಪಂ ಸದಸ್ಯ ದೇವಯ್ಯ ಇತರರಿದ್ದರು.

Translate »