ಟೆಂಡರ್ ವೇಳೆ ಎಸ್‍ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸಿರುವ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಚಾಮರಾಜನಗರ

ಟೆಂಡರ್ ವೇಳೆ ಎಸ್‍ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸಿರುವ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ವಿರುದ್ಧ ಜಿಲ್ಲಾಧಿಕಾರಿಗೆ ದೂರು

February 28, 2020

ಚಾಮರಾಜನಗರ, ಫೆ.27(ಎಸ್‍ಎಸ್)- ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಎಸ್‍ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸಿರುವ ಚಾ.ನಗರ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ನಗÀರಸಭಾ ಸದಸ್ಯೆ ಎಂ.ಕಲಾವತಿ ದೂರು ನೀಡಿದ್ದಾರೆ.

ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಚಾ.ನಗರ ನಗರಸಭೆಗೆ ರಾಜ್ಯ ಸರ್ಕಾರ ವಿವಿಧ ಅನುದಾನದಡಿ 2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರವು ಮಾರ್ಗಸೂಚಿ ನಿಗದಿಗೊಳಿಸಿದೆ. ಗುತ್ತಿಗೆ ಕಾಮಗಾರಿ ಗಳಿಗೆ ಟೆಂಡರ್ ಕರೆಯುವಾಗ ಪರಿಶಿಷ್ಟ ಜಾತಿ ಹಾಗೂ ಪ. ವರ್ಗಗಳ ಗುತ್ತಿಗೆದಾರರಿಗೆ ಮೀಸ ಲಾತಿ ಕಲ್ಪಿಸುವಂತೆ ಆದೇಶಿಸಲಾಗಿದೆ. ಅಲ್ಲದೇ ಈ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಎಸ್‍ಸಿ, ಎಸ್‍ಟಿ ಕಾಯ್ದೆಯಡಿ ದೂರು ದಾಖಲಿಸುವಂತೆ ಆದೇಶ ಹೊರಡಿಸಲಾಗಿದೆ.

ಆದರೆ ಚಾ.ನಗರ ನಗರಸಭೆ ಪೌರಾ ಯುಕ್ತ ಎಂ.ರಾಜಣ್ಣ ಉದ್ದೇಶಪೂರ್ವಕ ವಾಗಿ ಎಸ್‍ಸಿ, ಎಸ್‍ಟಿ ನೋಂದಾಯಿತ ಗುತ್ತಿಗೆದಾರರು ಯಾವುದೇ ಟೆಂಡರ್‍ನಲ್ಲಿ ಭಾಗವಹಿಸಬಾರದೆಂಬ ಉದ್ದೇಶದಿಂದ ಸುಮಾರು 12ರಿಂದ 13 ಕೋಟಿ ಅನುದಾನದ ಟೆಂಡರ್ ಕರೆಯುವಾಗ ಎಸ್‍ಸಿ, ಎಸ್‍ಟಿ ಗುತ್ತಿಗೆದಾರ ರಿಗೆ ಕಾಮಗಾರಿ ಮೀಸಲಿಟ್ಟಿಲ್ಲ. ಹಾಗೂ ಎಸ್‍ಸಿ, ಎಸ್‍ಟಿ ಪ್ರತಿನಿಧಿಸುವ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಸರ್ಕಾರ ಆದೇಶವನ್ನು ಉಲ್ಲಂಘಿಸಿರುವುದನ್ನು ಕೂಲಂಕುಶವಾಗಿ ಪರಿಶೀಲಿಸಿ ಎಸ್‍ಸಿ, ಎಸ್‍ಟಿ ಕಾಯ್ದೆಯಡಿ ದೂರು ದಾಖಲಿಸಿ ನ್ಯಾಯ ದೊರಕಿಸಿಕೊಡುವಂತೆ ಅವರು ಒತ್ತಾಯಿಸಿದ್ದಾರೆ. ದೂರಿನ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿಗಳಿಗೂ ಕಲಾವತಿ ಸಲ್ಲಿಸಿದ್ದಾರೆ.

Translate »