ವಿಜ್ಞಾನದ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ
ಚಾಮರಾಜನಗರ

ವಿಜ್ಞಾನದ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ

February 29, 2020

ಚಾಮರಾಜನಗರ,ಫೆ.28-ವಿಜ್ಞಾನದ ಬೆಳವಣಿಗೆಯಿಂದ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಗೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆÉ ಎಂದು ವಿಶ್ರಾಂತ ಕುಲಪತಿ, ಕೃಷಿ ವಿಜ್ಞಾನಿ ಪ್ರೊ.ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವ ಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1960ರಲ್ಲಿ 50 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದ ದೇಶವು ಹೆಚ್ಚಿನ ಆಹಾರ ಉತ್ಪನ್ನಗಳಿಗಾಗಿ ಹೊರದೇಶ ಗಳನ್ನು ಅವಲಂಬಿಸಿತ್ತು. ವಿಜ್ಞಾನದ ಬೆಳ ವಣಿಗೆಯಿಂದಾಗಿ ಉಂಟಾದ ಹಸಿರು ಕ್ರಾಂತಿ ಪರಿಣಾಮ ಹೆಚ್ಚಿನ ಆಹಾರ ಉತ್ಪನ್ನ ಗಳನ್ನು ಉತ್ಪಾದಿಸಿ ಸ್ವಾವಲಂಬಿ ಯಾಯಿತು. ರೈತರ ಶ್ರಮ ಅನೇಕ ಮಹ ನೀಯರ ಕಾಳಜಿಯಿಂದ ಆಹಾರೋತ್ಪಾದನೆ ಯಲ್ಲಿ ಪ್ರಗತಿ ಸಾಧಿಸುವಂತಾಯಿತು ಎಂದರು.

ಬಹಳಷ್ಟು ವಿಜ್ಞಾನಿಗಳು ದೇಶದ ಅಭಿ ವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿ ಬಂದವರಷ್ಟೇ ವಿಜ್ಞಾನಿಗಳಲ್ಲ, ವಿಜ್ಞಾನಿಗಳು ಪ್ರಶಸ್ತಿಯನ್ನು ಬಯಸುವುದಿಲ್ಲ. ದೇಶ ದಿಂದ ವಿದೇಶಗಳಿಗೆ ಹೋಗಿ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಕೊಡುಗೆ ನೀಡಿರುವ ವಿಜ್ಞಾನಿಗಳು ಇದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತ ನಾಡಿ, ವಿದ್ಯಾರ್ಥಿಯು ಎಲ್ಲವನ್ನು ಒಪ್ಪಿಕೊಳ್ಳದೇ ಯಾವುದು ಸರಿ, ಅಥವಾ ತಪ್ಪು ಎಂದು ಪರಾಮರ್ಶಿಸುವ ಗುಣ ಹೊಂದಬೇಕು. ಪ್ರಶ್ನೆ ಮಾಡದೇ ಹೋದರೆ ಜೀವನ ಮತ್ತು ಆಯ್ಕೆ ಮಾಡಿಕೊಳ್ಳುವ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ವಿಷಯದ ಬಗ್ಗೆ ಕುತೂಹಲ ಬೆಳೆಸಿಕೊಂಡು ಆತ್ಮಸ್ಥೈ ರ್ಯದಿಂದ ಜ್ಞಾನ ಸಂಪಾದಿಸ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಭಯ ಹೊಂದಬಾರದು. ಮಂದಹಾಸದಿಂದ ಸೃಜನ ಶೀಲತೆ ಉಳಿಸಿಕೊಂಡು ಸತ್ಯ ಶೋಧನೆಗೆ ಮುಂದಾಬೇಕು. ಶ್ರದ್ಧೆಯಿಂದ ಕೆಲಸ ಮಾಡಬೇಕು. ಆಲೋಚನೆ, ಚಿಂತನೆಗಳು ನಾವಿನ್ಯತೆಯಿಂದ ಹೊಸ ಅನ್ವೇಷಣೆಗೆ ಸಹಕಾರಿಯಾಗಲಿದೆ ಎಂದರು.

ವಿಜ್ಞಾನದಿಂದ ಮಾನವ ಕುಲಕ್ಕೆ ಕಲ್ಯಾಣ ವಾಗಬೇಕು. ಮೌಢ್ಯತೆ ಆಚರಿಸುವುದು ಸಲ್ಲದು. ವಿಜ್ಞಾನ ದಿನ ಆಚರಣೆ ಸಂದರ್ಭ ದಲ್ಲಿ ಹಿರಿಯ ವಿಜ್ಞಾನಿಗಳ ವಿಚಾರ ಸಂಪತ್ತು ಮಾಹಿತಿ ಪಡೆಯುವ ಸುವರ್ಣ ಅವಕಾಶ ಜಿಲ್ಲೆಯ ವಿದ್ಯಾರ್ಥಿಗಳಿಗೆ ಲಭಿ ಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮುಕ್ತ ವಾಗಿ ಸಂವಾದ ಮಾಡುವ ಮೂಲಕ ವಿಜ್ಞಾನ ದಿನ ಆಚರಣೆಗೆ ಸಾರ್ಥಕತೆ ತಂದುಕೊಡಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ. ಜವರೇಗೌಡ, ಗ್ರಾವಿಟಿ ಸೈನ್ಸ್ ಫೌಂಡೇ ಶನ್ ಅಧ್ಯಕ್ಷ ಎಸ್.ಪ್ರಕಾಶ್, ಹಿರಿಯ ಪ್ರಾಧ್ಯಾಪಕ ಡಾ.ಎನ್.ಎಂ. ಶ್ಯಾಮಸುಂದರ್, ಸಹಾಯಕ ಪ್ರಾಧ್ಯಾಪಕ ಎ.ಎಸ್.ಅಭಿಷೇಕ್ ಉಪಸ್ಥಿತರಿದ್ದರು.

Translate »