ಹೆಚ್ಚುವರಿ ಗಸ್ತಿನ ಮೂಲಕ ಕಾಡಂಚಿನ ರೈತರ ಹಿತ ಕಾಪಾಡಿ
ಚಾಮರಾಜನಗರ

ಹೆಚ್ಚುವರಿ ಗಸ್ತಿನ ಮೂಲಕ ಕಾಡಂಚಿನ ರೈತರ ಹಿತ ಕಾಪಾಡಿ

March 2, 2020

ಗುಂಡ್ಲುಪೇಟೆ,ಮಾ.1 (ಸೋಮ್.ಜಿ)- ಹೆಚ್ಚುವರಿ ಗಸ್ತು ನಡೆಸುವ ಮೂಲಕ ಕಾಡಂಚಿನ ರೈತರ ಹಿತ ಕಾಪಾಡುವಂತೆ ಅರಣ್ಯಾಧಿಕಾರಿಗಳಿಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಸೂಚಿಸಿದರು.

ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ್ ಅರಣ್ಯ ಪ್ರದೇಶದ ಅಂಚಿನಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 15 ಕಿಲೋಮೀಟರ್ ಉದ್ದದ ಆನೆ ಕಂದಕ ಕಾಮಗಾರಿ ವೀಕ್ಷಿಸಿದ ಶಾಸಕರು, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತೀಚೆಗೆ ಓಂಕಾರ್ ವಲಯದ ಕಾಡಂ ಚಿನ ಜಮೀನಿನಲ್ಲಿ ಆನೆ ದಾಳಿ ಪ್ರಕರಣ ಗಳು ಹೆಚ್ಚಾಗಿದೆ. ಹೀಗಾಗಿ ಈ ಭಾಗ ಗಳಲ್ಲಿ ಹೆಚ್ಚಿನ ನಿಗಾ ವಹಿಸುವುದ ರೊಂದಿಗೆ ಗಸ್ತಿನ ಪ್ರಮಾಣ ಹೆಚ್ಚಿಸಿ ರೈತರ ಬೆಳೆ ಮತ್ತು ಜೀವವನ್ನು ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಈ ವೇಳೆ ಮಾತನಾಡಿದ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ಗಸ್ತು ನಡೆಸು ತ್ತಿಲ್ಲ. ಇತ್ತೀಚೆಗೆ ಆನೆ ದಾಳಿ ಬಗ್ಗೆ ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿ ಯಾಗಿ ಸ್ಪಂದಿಸುತ್ತಿಲ್ಲ. ಕಾಡಂಚಿನ ರೈತರಿಗೆ ಆನೆ ದಾಳಿ ತಡೆಗಟ್ಟಲು ಪಟಾಕಿ ವಿತರಿಸು ತ್ತಿಲ್ಲ. ಬೆಳೆನಷ್ಟ ಪರಿಹಾರವನ್ನೂ ಸರಿಯಾಗಿ ವಿತರಿಸಿಲ್ಲ. ಇದರಿಂದ ಬದುಕುವುದೇ ಕಷ್ಟ ವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ದೂರಿನಿಂದ ಆಕ್ರೋಶ ಗೊಂಡ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅಲ್ಲಿಯೇ ಇದ್ದ ಆರ್‍ಎಫ್‍ಒ ನಾಗೇಂದ್ರನಾಯ್ಕ ಅವರಿಗೆ ರೈತರ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಾಪಕ ವಾಗಿದೆ. ಇನ್ನಾದರೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ, ಬಾಕಿ ಇರುವ ಬೆಳೆನಷ್ಟ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಿ ಎಂದರು.

ಸಭೆ: ಇದಕ್ಕೂ ಮೊದಲು ಓಂಕಾರೇಶ್ವರ ಅರಣ್ಯ ವಲಯದಲ್ಲಿರುವ ಕಳ್ಳಬೇಟೆ ತಡೆ ಶಿಬಿರದಲ್ಲಿ ರೈತರು ಹಾಗೂ ಅರಣ್ಯಾಧಿ ಕಾರಿಗಳ ಸಭೆ ನಡೆಸಿದರು.

ಸಭೆಯಲ್ಲಿ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಈವರೆಗೆ ರೈತರಿಗೆ ಬೆಳೆನಷ್ಟದ ಬಾಬ್ತು 1 ಕೋಟಿ 23 ಲಕ್ಷ ರೂ. ಪರಿಹಾರ ನೀಡ ಲಾಗಿದೆ. ಓಂಕಾರ್ ವಲಯದಲ್ಲಿ ಇನ್ನೂ 23 ಲಕ್ಷ ಬೆಳೆನಷ್ಟ ಪರಿಹಾರ ನೀಡಬೇಕಾ ಗಿದ್ದು ಇನ್ನೂ ಸರ್ಕಾರದಿಂದ ಅನುದಾನ ಬರಬೇಕಾಗಿದೆ ಎಂದರು. ಈ ಸಂದರ್ಭ ಬಿಜೆಪಿ ಮಂಡಲಾಧ್ಯಕ್ಷ ಜಗದೀಶ, ಪ್ರಧಾನ ಕಾರ್ಯದರ್ಶಿ ಬೆಂಡಗಳ್ಳಿ ನಂದೀಶ್ ಮತ್ತು ರಾಘವಾಪುರ ದೇವಯ್ಯ, ಕೃಷ್ಣ ಸೇರಿದಂತೆ ಹಲವರಿದ್ದರು.

Translate »