ಗುಂಡ್ಲುಪೇಟೆ, ಮಾ.1 (ಸೋಮ್.ಜಿ)- ಸಾಮೂಹಿಕ ವಿವಾಹಗಳಿಂದ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಅಂತ ರ್ಜಾತಿ ವಿವಾಹಗಳ ಮೂಲಕ ಜಾತಿ ವ್ಯವಸ್ಥೆ ಅಳಿಸಬೇಕಾಗಿದೆ ಎಂದು ಮಾಜಿ ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ತಾಲೂಕಿನ ಬೆಂಡರವಾಡಿಯಲ್ಲಿ ಆಯೋಜಿಸಿದ್ದ 101 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ತಂದೆ ಗಂಗಾಧರಯ್ಯ ಅವರು ಬುದ್ಧ ಹಾಗೂ ಅಂಬೇಡ್ಕರ್ ಸಿದ್ಧಾಂತಗಳಿಂದ ಪ್ರಭಾವಿತ ರಾಗಿ ಶಿಕ್ಷಣದಿಂದ ಮಾತ್ರ ದೀನ ದಲಿತರ ಅಭಿವೃದ್ಧಿ ಸಾಧ್ಯ ಎಂದು ಭಾವಿಸಿ ರಾಜ್ಯದ 82 ಕಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಕ್ರಾಂತಿ ಮಾಡಿದರು. ಇದರಲ್ಲಿ ಅರ್ಧಕ್ಕೂ ಹೆಚ್ಚಿನ ಸಂಸ್ಥೆಗಳಲ್ಲಿ ದಲಿತರೇ ಶಿಕ್ಷಣ ಪಡೆಯುತ್ತಿದ್ದಾರೆ.
ಸಮಾಜದಲ್ಲಿ ಸಮಾನತೆ ತರಲು ಹಾಗೂ ಜಾತಿ ಪದ್ಧತಿ ನಿವಾರಿಸಲು ಅಂತರ್ಜಾತಿ ವಿವಾಹಗಳಿಂದ ಮಾತ್ರ ಸಾಧ್ಯ ಎಂದ ಅವರು ಹೆಚ್ಚು ಮಕ್ಕಳನ್ನು ಪಡೆಯುವ ಬದಲು ಬುದ್ದಿವಂತರಾಗಿ ಎರಡೇ ಮಕ್ಕಳನ್ನು ಪಡೆದು ಉತ್ತಮ ಶಿಕ್ಷಣ ನೀಡಬೇಕು ಎಂದರು.
ನಿವೃತ್ತ ಪೆÇಲೀಸ್ ಅಧಿಕಾರಿ ಸುಭಾಷ್ ಭರಣಿ ಮಾತನಾಡಿ, ನಾವು ಸಮಾಜಕ್ಕೆ ಕೊಡುವ ಉತ್ತಮ ಕೊಡುಗೆಗಳು ನಮ್ಮ ಖಾತೆಗೆ ಜಮೆಯಾಗುತ್ತವೆ. ಬುದ್ಧ ತತ್ವ ಅನುಸರಿ ಸುವ ಚೀನಾ ಹಾಗೂ ಜಪಾನ್ ತಮ್ಮ ಜಿಡಿಪಿ ಹೆಚ್ಚಿಸಿಕೊಳ್ಳುತ್ತಿದ್ದರೆ ಜಾತೀಯತೆ ಯಿಂದ ಕೂಡಿದ ನಮ್ಮ ದೇಶದಲ್ಲಿ ಇಳಿಕೆ ಯಾಗುತ್ತಿದೆ. ಆದ್ದರಿಂದ ಯುವಜನಾಂಗ ದುಶ್ಚಟಗಳನ್ನು ಬಿಟ್ಟು ಜಾತೀಯತೆ ತೊಲಗಿಸಲು ಮುಂದಾಗಬೇಕು ಎಂದರು.
ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಇತ್ತೀಚೆಗೆ ಆಡಂಬರದ ಮದುವೆಗಳಿಂದ ಜನರು ಸಾಲದ ಸುಳಿ ಯಲ್ಲಿ ಸಿಲುಕುವಂತಾಗಿದೆ. ಆದ್ದರಿಂದ ಸರಳ ಸಾಮೂಹಿಕ ವಿವಾಹಗಳನ್ನು ಆಯೋ ಜಿಸುವ ಮೂಲಕ ಪರಮೇಶ್ವರ್ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಹರ್ಷ ವರ್ಧನ್, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಚಿತ್ರನಟ ಮಂಡ್ಯ ರಮೇಶ್, ಚಿಂತಕ ಚೇತನ್, ರಂಗಕರ್ಮಿ ಜನ್ನಿ, ಸಂಶೋಧಕ ಲಕ್ಷ್ಮಿಪತಿ, ಮಹದೇವ ಭರಣಿ ಸೇರಿದಂತೆ ಪರಮೇಶ್ವರ್ ಅಭಿಮಾನಿ ಬಳಗದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.