1 ತಿಂಗಳಿನಲ್ಲಿ 2.51 ಕೋಟಿ ರೂ. ಆದಾಯ
50 ಗ್ರಾಂ ಚಿನ್ನ
2ಕೆ.ಜಿ. 440 ಗ್ರಾಂ ಬೆಳ್ಳಿ
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ
ಚಾಮರಾಜನಗರ,ಮಾ.1(ಎಸ್‍ಎಸ್)- ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಹುಂಡಿಗಳಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.
ಶನಿವಾರ ಹುಂಡಿಗಳಲ್ಲಿ ಸಂಗ್ರಹವಾ ಗಿದ್ದ ಹಣ ಎಣಿಕಾ ಕಾರ್ಯ ಬರೋಬ್ಬರಿ 19 ತಾಸುಗಳ ಕಾಲ ನಡೆಯಿತು. ಜನವರಿ 28 ರಿಂದ ಫೆಬ್ರವರಿ 28ರವರೆಗೆ ( 1 ತಿಂಗಳು) ಸಂಗ್ರಹವಾಗಿರುವ ಮೊತ್ತ 2,51,61,247 ರೂ. ಇದಲ್ಲದೇ 50 ಗ್ರಾಂ ಚಿನ್ನ, 2 ಕೆ.ಜಿ. 440 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಇದು ಮಹದೇಶ್ವರ ದೇವಸ್ಥಾನದ ಇತಿಹಾಸದಲ್ಲಿಯೇ ಸಂಗ್ರಹವಾಗಿರುವ ಸಾರ್ವಕಾಲಿಕ ದಾಖಲೆ ಆಗಿದೆ. ಕಳೆದ ವರ್ಷದ ಇದೇ ಶಿವರಾತ್ರಿ ಮಾಹೆಯಲ್ಲಿ 2,13,93,334 ರೂ. ಸಂಗ್ರಹವಾಗಿತ್ತು. ಈ ಬಾರಿ 2,51,61,247 ರೂ. ಸಂಗ್ರಹ ವಾಗುವ ಮೂಲಕ 37,67,913 ರೂ. ಹೆಚ್ಚು ಹಣ ಸಂಗ್ರಹವಾಗಿದೆ. ಇದಲ್ಲದೇ 6 ದಿನಗಳ ಕಾಲ ನಡೆದ ಶಿವರಾತ್ರಿ ಜಾತ್ರೆ ಯಲ್ಲಿ 3.54 ಕೋಟಿ ರೂ. ಆದಾಯ ಬಂದಿತ್ತು. (ಹುಂಡಿಯಲ್ಲಿ ಸಂಗ್ರಹ ವಾಗಿದ್ದ ಹಣವನ್ನು ಹೊರತುಪಡಿಸಿ).
ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಮಹದೇಶ್ವರನ ಸನ್ನಿಧಿ ಅಭಿವೃದ್ಧಿ ಗೊಳ್ಳುತ್ತಿರುವುದು ಕಾರಣ ಎನ್ನಲಾಗುತ್ತಿದೆ. 6 ದಿನಗಳ ಕಾಲ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ ವರ ಭಕ್ತರ ಸಂಖ್ಯೆ ಒಂದು ಅಂದಾಜಿನ ಪ್ರಕಾರ 10 ಲಕ್ಷ ಮೀರಿದೆ. ಇದು ಮಾದ ಪ್ಪನ ಭಕ್ತರು ಎಷ್ಟಿದ್ದಾರೆ ಎಂಬುದನ್ನು ತೋರ್ಪಡಿಸುತ್ತದೆ.
77 ಮಲೆಯ ಒಡೆಯನ ಸನ್ನಿಧಿಗೆ ಭೇಟಿ ನೀಡುವವರ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುವ ಜೊತೆಗೆ ದೇವಸ್ಥಾನಕ್ಕೆ ಬರುವ ಆದಾಯವೂ ಸಹ ವೃದ್ಧಿಗೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿರುವ ಮಾಯ ಕಾರ ಮಾದಪ್ಪ ಕೋಟಿ ಮಾದಪ್ಪನಾಗಿದ್ದಾನೆ.
ಬೆಟ್ಟದಲ್ಲಿ ಭಕ್ತರಿಗೆ ಮತ್ತಷ್ಟು ಮೂಲ ಭೂತ ಸೌಕರ್ಯಗಳು ಲಭಿಸಲಿ. ಭಕ್ತರ ಭೇಟಿ ಸಂಖ್ಯೆ ಮತ್ತಷ್ಟು ಹೆಚ್ಚಲಿ. ದೇವ ಸ್ಥಾನದ ಆದಾಯವೂ ಮತ್ತಷ್ಟು ಹೆಚ್ಚಲಿ ಎಂಬುದು 77 ಮಲೆಯ ಒಡೆಯನ ಭಕ್ತರ ಆಶಯವಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕೆಲವು ಕಾಮಗಾರಿಗಳು ಮುಕ್ತಾಯ ಆಗಿವೆ. ಮತ್ತಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೇವಸ್ಥಾನಕ್ಕೆ ಬರುವ ಆದಾಯವೂ ಸಹ ಹೆಚ್ಚುತ್ತಿದೆ. ದೇವಸ್ಥಾನಕ್ಕೆ ಬರುವ ಆದಾಯ ಸದ್ಬಳಕೆ ಆಗುತ್ತಿದೆ ಎಂಬುದು ಭಕ್ತರಿಗೆ ತಿಳಿದಿರುವುದರಿಂದ ಈ ಬಾರಿ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ.
-ಜಯವಿಭವಸ್ವಾಮಿ ಕಾರ್ಯದರ್ಶಿ,