ಮಡಿಕೇರಿ,ಮಾ.1-ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿ ಸಲು ಒತ್ತಾಯಿಸಿ ಸಿಐಟಿಯು ಸಂಘಟನೆಯ ವತಿಯಿಂದ ಹಂಡ್ಲಿ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ಎರಡು ವರ್ಷದಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳ ವೇತನ ಬಾಕಿ ಉಳಿದಿದೆ. ಮೂರು ತಿಂಗಳಿಗೊಮ್ಮೆ ಬಿಡು ಗಡೆಯಾದ ಕಂತಿನ ಹಣದಲ್ಲಿ ಎರಡು ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾ ಗುತ್ತದೆ. ಎರಡು ವರ್ಷಗಳಿಂದ ಎಂಟು ತಿಂಗಳು ವೇತನ ಬಾಕಿಯಾಗಿದೆ. ಸಮ ಯಕ್ಕೆ ಸರಿಯಾಗಿ ವೇತನ ಸಿಗದೆ ಬಾದಾಮಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ತಲಾ ಒಬ್ಬರಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ವೇತನ ಪಾವತಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರಾಮ ಪಂಚಾಯತಿ ಪಿಡಿಓ ಸ್ಮಿತಾ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಪಿ.ಆರ್ ಭರತ್, ಮಹೇಶ್, ಎಲ್. ರವಿ, ಶ್ರೀಧರ್, ಚೆನ್ನಬಸವ, ಶಿವರುದ್ರ, ದಯಾನಂದ್ ಮತ್ತಿತರರು ಇದ್ದರು.