ವೀರಾಜಪೇಟೆ,ಮಾ.1-ವೀರಾಜಪೇಟೆ ಪಟ್ಟಣ ಪಂಚಾಯಿತಿಯ 2020-21 ನೇ ಸಾಲಿನ ಬಜೆಟ್‍ನ ಪ್ರಯುಕ್ತ ಪಂಚಾ ಯಿತಿಯ ಸಭಾಂಗಣದಲ್ಲಿ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆ ಯಲ್ಲಿ ಪಟ್ಟಣದ ಸ್ವಚ್ಚತೆ, ಕುಡಿಯುವ ನೀರಿನ ಪೊರೈಕೆ, 18 ವಾರ್ಡ್‍ಗಳಲ್ಲಿ ಅಗತ್ಯ ಜನಪರ ಕಾಮಗಾರಿ, ರಸ್ತೆ, ಚರಂಡಿ ದುರಸ್ತಿ, ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಲು ಸದಸ್ಯರುಗಳು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿಯ ಆಡಳಿತಾ ಧಿಕಾರಿ ಎಲ್.ಎಂ.ನಂದೀಶ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಪೂರ್ಣ ಬಜೆಟ್ ಸಿದ್ಧತೆಗೆ ಮೊದಲು ಸದಸ್ಯರುಗಳು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಪರಿ ಶೀಲಿಸಿ ಅಗತ್ಯ ಪರಿವರ್ತನೆಯೊಂದಿಗೆ ಅಂತಿಮ ಸಿದ್ಧಪಡಿಸಿ ಮುಂದಿನ ಬಜೆಟ್ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದರು.
ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶೌಚಾ ಲಯಗಳ ನಿರ್ವಹಣೆಗಾಗಿ ಬಜೆಟ್‍ನಲ್ಲಿ ತೋರಿಸಿರುವಂತೆ ರೂ 50,000 ಏನೇನು ಸಾಲದು. ಕನಿಷ್ಟ ರೂ ಐದು ಲಕ್ಷಕ್ಕೂ ಅಧಿಕ ಹಣವನ್ನು ಬಜೆಟ್‍ನಲ್ಲಿ ಮೀಸಲಿರಿ ಸಬೇಕು. ಜೊತೆಗೆ ಪ್ರಕೃತಿ ವಿಕೋಪ ಹಾಗೂ ಇತರ ದುರಂತಕ್ಕೀಡಾದವರಿಗೆ ತುರ್ತು ಪರಿಹಾರವಾಗಿ ನೀಡಲು ಬಜೆಟ್ ನಲ್ಲಿ ಅಧಿಕ ಹಣವನ್ನು ಮೀಸಲಿಡುವಂತೆ ಸಲಹೆ ನೀಡಿದಾಗ ಸಭೆ ಅಂಗೀಕರಿಸಿತು.
ಸದಸ್ಯರುಗಳಾದ ಡಿ.ಪಿ.ರಾಜೇಶ್ ಮಾತನಾಡಿ, ಪಟ್ಟಣದ ಮಲಬಾರ್ ರಸ್ತೆ ಯಲ್ಲಿರುವ ಹಿಂದೂ ರುದ್ರಭೂಮಿಯನ್ನು ರಕ್ಷಿಸಿ ಅಭಿವೃದ್ಧಿ ಪಡಿಸಬೇಕು. ಹಾಗೂ ರುದ್ರಭೂಮಿಯ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಖಾಯಂ ನಿರ್ವಹಣೆ ಮಾಡಲು ಯೋಜನೆಯೊಂದನ್ನು ರೂಪಿಸಿ ಬಜೆಟ್ ನಲ್ಲಿ ಪ್ರತ್ಯೇಕ ಹಣ ಇಡುವಂತೆ ತಿಳಿಸಿ ದರು. ಸದಸ್ಯ ಎಸ್.ಎಚ್.ಮತೀನ್ ಮಾತ ನಾಡಿ, ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲ ಅಂಗಡಿ ಮಳಿಗೆಗಳನ್ನು ಕಾನೂನು ಬದ್ಧವಾಗಿ ಬಿಡ್‍ದಾರರಿಗೆ ನೀಡಬೇಕು. ಉಳಿದ ಮಳಿಗೆಗಳನ್ನು ಹರಾಜು ಮಾಡಿ ಪಟ್ಟಣ ಪಂಚಾಯಿತಿ ಸಂಪತ್ತನ್ನು ಇನ್ನಷ್ಟು ಕ್ರೋಢಿಕರಿಸುವಂತೆ ಸಲಹೆ ನೀಡಿದರು.
ಸದಸ್ಯ ಸಿ.ಕೆ.ಪೃಥ್ವಿನಾಥ್ ಮಾತನಾಡಿ, ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಗೌರಿಕೆರೆ ಮಲಿನವಾಗಿದ್ದು ಇದನ್ನು ತಕ್ಷಣ ಶುಚಿಗೊಳಿಸಬೇಕು. ಪವಿತ್ರವಾದ ಗೌರಿ ಕೆರೆಯನ್ನು ಎಲ್ಲ ರೀತಿಯಿಂದಲೂ ಅಭಿ ವೃದ್ಧಿ ಪಡಿಸಲು ಬಜೆಟ್‍ನಲಿ ್ಲಪ್ರತ್ಯೇಕ ಹಣವಿರಿಸುವಂತೆ ತಿಳಿಸಿದರು.
ಸದಸ್ಯೆ ಆಶಾ ಸುಬ್ಬಯ್ಯ ಮಾತನಾಡಿ, ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳನ್ನು ನಿಯಂತ್ರಿಸಲು ಪಟ್ಟಣ ಪಂಚಾ ಯಿತಿ ಯೋಜನೆಯನ್ನು ರೂಪಿಸಲು ಬಜೆಟ್‍ನಲ್ಲಿ ಸೇರಿಸಬೇಕು ಎಂದರು.
ಬಜೆಟ್‍ನ ಪೂರ್ವಭಾವಿ ಸಭೆಯಲ್ಲಿ 2020-21ನೇ ಸಾಲಿಗೆ ಒಟ್ಟು ರೂ, ಹದಿನೇಳು ಕೋಟಿಯ ಎಪ್ಪತ್ತೊಂದು ಲಕ್ಷ ಮೊತ್ತದ ಬಜೆಟ್ ಸಿದ್ಧಪಡಿಸಲಾಗಿದ್ದು ಇದರಲ್ಲಿ ರೂ, ನಲ್ವತ್ತೆಂಟು ಲಕ್ಷ ಉಳಿ ತಾಯ ಬಜೆಟ್ ಎಂದು ತೋರಿಸಲಾಗಿದೆ. ಈಗ ಸದಸ್ಯರುಗಳ ಸಲಹೆ ಸೂಚನೆ ಮೇರೆಗೆ ಬಜೆಟ್‍ನಲ್ಲಿ ಅಗತ್ಯವಾದ ಕೆಲವನ್ನು ಕಾನೂ ನಾತ್ಮಕವಾಗಿ ಬದಲಾವಣೆ ಮಾಡಲಾಗು ವುದು. ಬಜೆಟ್ ಸಭೆ ಮುಂದಿನ ತಿಂಗಳು ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಬಜೆಟ್ ಮಂಡನೆ ಮಾಡಲಾಗು ವುದು ಎಂದು ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಸಭೆಗೆ ತಿಳಿಸಿದರು.
ಪೂರ್ವಭಾವಿ ಬಜೆಟ್ ಸಭೆಯಲಿ ಜಲೀಲ್, ಕೆ.ಬಿ.ಹರ್ಷವರ್ಧನ್, ಆಗಸ್ಟಿನ್ ಬೆನ್ನಿ, ವಿ.ಆರ್.ರಜನಿಕಾಂತ್, ಮಹದೇವ್ ಬಜೆಟ್ ಚರ್ಚೆಯಲ್ಲಿ ಭಾಗ ವಹಿಸಿದ್ದರು. ಹದಿನೆಂಟು ಸದಸ್ಯರು ಗಳ ಪೈಕಿ 16ಮಂದಿ ಹಾಜರಾಗಿದ್ದರು. ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ, ಹೇಮ್ ಕುಮಾರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.