ಕೃಷ್ಣಯ್ಯನ ಕಟ್ಟೆ ಬಳಿ ಕಡವೆ ಮಾಂಸ ವಶ
ಚಾಮರಾಜನಗರ

ಕೃಷ್ಣಯ್ಯನ ಕಟ್ಟೆ ಬಳಿ ಕಡವೆ ಮಾಂಸ ವಶ

February 29, 2020

ಯಳಂದೂರು, ಫೆ.28- ತಾಲೂಕಿನ ಕೃಷ್ಣಯ್ಯನ ಕಟ್ಟೆ ಬಳಿ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಕಡವೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ನೋಡಿದ ಬೇಟೆಗಾರರು ಸ್ಥಳದಲ್ಲೇ ಬಂದೂಕು, 3 ಚೀಲ ಕಡವೆ ಮಾಂಸ ಬಿಟ್ಟು ಪರಾರಿಯಾಗಿ ದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಆರ್‍ಎಫ್‍ಓ ಮಹದೇವಯ್ಯ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ರಘುರಾಮ್, ಅರಣ್ಯ ರಕ್ಷಕ ವಿಠಲ, ಮಂಜುನಾಥ್, ರಮೇಶ್, ಚಾಲಕ ಮರಿಸ್ವಾಮಿ ಇತರರಿದ್ದರು.

 

Translate »