ಚಾಮರಾಜನಗರ

ಸಿಎಎಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಶಾಸಕ ಕೆ.ಜಿ.ಬೋಪಯ್ಯ ಮನವರಿಕೆ
ಚಾಮರಾಜನಗರ

ಸಿಎಎಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಶಾಸಕ ಕೆ.ಜಿ.ಬೋಪಯ್ಯ ಮನವರಿಕೆ

January 10, 2020

ವಿರಾಜಪೇಟೆ, ಜ.9- ಪೌರತ್ವ ತಿದ್ದು ಪಡಿ ಕಾಯ್ದೆಯಲ್ಲಿ ಭಾರತದ ಮುಸ್ಲಿಮ ರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ. ಬಹುತೇಕ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆಯ ಬಗ್ಗೆ ಮಾಹಿತಿಯ ಕೊರತೆ ಕಂಡುಬಂದಿರುವುದಾಗಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ಸು ನಿಲ್ದಾಣ ದವರೆಗೆ ಅಲ್ಪಸಂಖ್ಯಾತರ ಅಂಗಡಿ ಮಳಿಗೆ ಗಳಿಗೆ ಭೇಟಿ ನೀಡಿ ಪೌರತ್ವ ಕಾಯ್ದೆಯ ಬಗ್ಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ಬೋಪಯ್ಯ ಅವರ ತಂಡ ಜನ ಜಾಗೃತಿ ಅಭಿಯಾನ ನಡೆಸಿತು. ಬಳಿಕ ಮಾತನಾಡಿದ…

ಪೌರತ್ವ ಕಾಯ್ದೆಯನ್ನು ‘ಒನಕೆ ಓಬವ್ವ’ ಹೆಸರಿನಲ್ಲಿ ಕರೆಯುವುದು ಸೂಕ್ತ
ಚಾಮರಾಜನಗರ

ಪೌರತ್ವ ಕಾಯ್ದೆಯನ್ನು ‘ಒನಕೆ ಓಬವ್ವ’ ಹೆಸರಿನಲ್ಲಿ ಕರೆಯುವುದು ಸೂಕ್ತ

January 10, 2020

ಗುಂಡ್ಲುಪೇಟೆಯಲ್ಲಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಆರ್.ರಘು (ಕೌಟಿಲ್ಯ) ಅಭಿಮತ ಗುಂಡ್ಲುಪೇಟೆ, ಜ.9(ಸೋಮ್‍ಜಿ)- ದೇಶದ ಸುಭದ್ರತೆಗಾಗಿ ಅಸ್ಥಿತ್ವಕ್ಕೆ ಬಂದಿ ರುವ ಪೌರತ್ವ ತಿದ್ದುಪಡಿ ಕಾಯ್ದೆ ಈಗ ದೇಶಾದ್ಯಂತ ಅಪಪ್ರಚಾರಕ್ಕೆ ಗ್ರಾಸವಾಗಿದ್ದು, ಚಿತ್ರದುರ್ಗದ ಕೋಟೆಯ ಒಳಗೆ ಕಿಂಡಿ ಮೂಲಕ ನುಸುಳಿ ಬರುತ್ತಿದ್ದ ಶತ್ರುಗಳನ್ನು ಒನಕೆ ಓಬವ್ವ ಸೆದೆ ಬಡಿದ ರೀತಿ, ಭಾರತ್ವಕ್ಕೆ ಬರುವ ನುಸುಳುಕೋರರನ್ನು ತಡೆಯುವುದು ಈ ಕಾಯ್ದೆಯ ಉದ್ದೇಶವಾಗಿದೆ. ಹೀಗಾಗಿ ಈ ಕಾಯ್ದೆಯನ್ನು ‘ ಒನಕೆ ಓಬವ್ವ’ನ ಹೆಸರಿನಲ್ಲಿ ಕರೆಯುವುದು ಸೂಕ್ತ ಎಂದು ಬಿಜೆಪಿ ರಾಜ್ಯ ಸಹ…

ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
ಚಾಮರಾಜನಗರ

ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

January 10, 2020

ಚಾಮರಾಜನಗರ, ಜ.9- ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸ ಬೇಕು. ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಸ್ಪತಃ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸ ಲಿದ್ದು, ಜಿಲ್ಲೆಯ ಇಬ್ಬರು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಜನವರಿ 20 ರಂದು ನವದೆಹಲಿ ಯಲ್ಲಿ ನಡೆಯುಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿ ಸಲು ಚಾಮರಾಜನಗರ ಜಿಲ್ಲೆ ಗುಂಡ್ಲು ಪೇಟೆಯಲ್ಲಿರುವ ಆದರ್ಶ ವಿದ್ಯಾಲಯದ ಹತ್ತನೆ ತರಗತಿ…

ಇಂದಿನಿಂದ 3 ದಿನ ವೀರ್‍ಭಾರತ್ ಪಾದಯಾತ್ರೆ
ಚಾಮರಾಜನಗರ

ಇಂದಿನಿಂದ 3 ದಿನ ವೀರ್‍ಭಾರತ್ ಪಾದಯಾತ್ರೆ

January 10, 2020

ಚಾಮರಾಜನಗರ, ಜ.9(ಎಸ್‍ಎಸ್)- ಯುವ ಬ್ರಿಗೇಡ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ವೀರ್ ಭಾರತ್ ಗುರಿಯತ್ತ ನಡೆ ಎಂಬ ಪಾದ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಅದರಂತೆ ಜಿಲ್ಲೆಯಲ್ಲಿ ಜನವರಿ 10 ರಿಂದ 12 ರವರೆಗೆ ಪಾದಯಾತ್ರೆ ನಡೆಯಲಿದೆ. ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುತ್ತಾ ವಿವೇಕಾನಂದರ ವಿಚಾರಧಾರೆಗಳನ್ನು ಹಂಚುತ್ತಾ ಹಳ್ಳಿಗಳೊಂ ದಿಗೆ ಬಾಂಧವ್ಯ ಬೆಸೆಯುವ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಜಿಲ್ಲೆಯ ಮರೆತುಹೋದ ಮಹಾಪುರುಷರನ್ನು ಎಲ್ಲರಿಗೂ ಮತ್ತೊಮ್ಮೆ ನೆನಪಿಸಿಕೊಡುವ ವಿಶೇಷ ಪ್ರಯತ್ನ ಇದಾಗಿದೆ ಎಂದು ಯುವ ಬ್ರಿಗೇಡ್ ತಿಳಿಸಿದೆ. ಜಿಲ್ಲೆಯಲ್ಲಿ…

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳ ಮುಷ್ಕರ
ಚಾಮರಾಜನಗರ

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳ ಮುಷ್ಕರ

January 9, 2020

ಚಾಮರಾಜನಗರ, ಜ.8(ಎಸ್‍ಎಸ್)- ಕೇಂದ್ರ ಸರ್ಕಾರ ಆರ್ಥಿಕ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮುಷ್ಕರ ಜಿಲ್ಲೆಯಲ್ಲೂ ನಡೆಯಿತು. ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಅಂಗನವಾಡಿ ನೌಕರರ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಎಅಖಿU), ಸೆಂಟರ್ ಆಫ್ ಟ್ರೇಡ್ ಯೂನಿ ಯನ್ಸ್ (ಅIಖಿU), ಮಧ್ಯಾಹ್ನದ ಬಿಸಿಯೂಟ ಯೋಜನೆಯ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ ಗಳು ಪ್ರತಿಭಟನೆ ನಡೆಸುವ…

ಗುಂಡ್ಲುಪೇಟೆಯಲ್ಲೂ ಕಾರ್ಮಿಕರ ಮುಷ್ಕರ
ಚಾಮರಾಜನಗರ

ಗುಂಡ್ಲುಪೇಟೆಯಲ್ಲೂ ಕಾರ್ಮಿಕರ ಮುಷ್ಕರ

January 9, 2020

ಗುಂಡ್ಲುಪೇಟೆ, ಜ.8(ಸೋಮ್.ಜಿ)- ಪಟ್ಟಣದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ಬಿಸಿಯೂಟ ನೌಕರರು ಭಾಗವಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿ.ಐ.ಟಿ.ಯು. ಬಾವುಟವನ್ನು ಹಿಡಿದು ಸಾಗಿದ ಪ್ರತಿಭಟನಾಕಾರರು, ನೌಕರರಿಗೆ ಕನಿಷ್ಟ ವೇತನ ನೀಡಲು ಅನುದಾನ ಮೀಸಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಮಾಸಿಕ ಪಿಂಚಣಿ, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡು ಬೇಡಿಕೆಗಳ…

ಬರುವ ಶೈಕ್ಷಣಿಕ ವರ್ಷದಿಂದ ಬೇಸಿಗೆ ಸಂಭ್ರಮ ಜಾರಿ
ಚಾಮರಾಜನಗರ

ಬರುವ ಶೈಕ್ಷಣಿಕ ವರ್ಷದಿಂದ ಬೇಸಿಗೆ ಸಂಭ್ರಮ ಜಾರಿ

January 9, 2020

ವಾರಕ್ಕೊಮ್ಮೆ ಬ್ಯಾಗ್ ರಹಿತ ದಿನ ಜಾರಿಗೆ ಚಿಂತನೆ ಚಾಮರಾಜನಗರ, ಜ.8- ಬರಲಿರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಎಂಬ ಕಾರ್ಯ ಕ್ರಮವನ್ನು ಜಾರಿಗೊಳಿಸಲಿದ್ದು, ಇದರಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು. ನಗರದ ರಾಮಸಮುದ್ರದ ಸಿ.ಆರ್. ಬಾಲರಪಟ್ಟಣ ಶಾಲಾ ಆವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ…

ಹನೂರು ಬಳಿ ಗಾಂಜಾ ವಶ: ಪತ್ನಿ ಬಂಧನ, ಪತಿ ಪರಾರಿ
ಚಾಮರಾಜನಗರ

ಹನೂರು ಬಳಿ ಗಾಂಜಾ ವಶ: ಪತ್ನಿ ಬಂಧನ, ಪತಿ ಪರಾರಿ

January 9, 2020

ಹನೂರು, ಜ.8- ಬದನೆ ಬೆಳೆ ನಡುವೆ ದಂಪತಿ ಗಾಂಜಾ ಬೆಳೆದಿದ್ದು, ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಹನೂರು ತಾಲೂಕಿನ ದೊಮ್ಮನಗದ್ದೆಯಲ್ಲಿ  ನಡೆದಿದ್ದು, ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಹನೂರು ತಾಲೂಕಿನ ಸಮೀಪದ ದೊಮ್ಮನಗದ್ದೆ ಗ್ರಾಮದ ರಂಗುನಾಯ್ಕ ಹಾಗೂ ಸರಸಿಬಾಯಿ ದಂಪತಿಯು  ಜಮೀನಿನ ಬದನೆ ಬೆಳೆಯೊಂದಿಗೆ ಮಿಶ್ರಬೆಳೆಯಂತೆ  ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪಿಐ ಮನೋಜ್ ಕುಮಾರ್ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ 89 ಕೆಜಿ ಹಸಿ ಗಾಂಜಾ, 12 ಕೆಜಿ ಮಾರಾಟಕ್ಕೆ ಸಿದ್ದಪಡಿಸಿದ್ದ…

ಕಸ್ತೂರಿನಲ್ಲಿ ವಿಜೃಂಭಣೆಯ ಬಂಡಿಜಾತ್ರೆ
ಚಾಮರಾಜನಗರ

ಕಸ್ತೂರಿನಲ್ಲಿ ವಿಜೃಂಭಣೆಯ ಬಂಡಿಜಾತ್ರೆ

January 6, 2020

ಚಾಮರಾಜನಗರ, ಜ.5- ತಾಲೂಕಿನ ಕಸ್ತೂರು ಗ್ರಾಮದಲ್ಲಿ ಭಾನುವಾರ ಪ್ರಸಿದ್ಧ 16 ಹಳ್ಳಿಗಳ ದೊಡ್ಡಮ್ಮತಾಯಿ ಬಂಡಿ ಜಾತ್ರೆ ಹಾಗೂ ಚಾಮರಾಜನಗರ, ನಂಜನ ಗೂಡು ತಾಲೂಕಿನ 23 ಗ್ರಾಮಗಳಲ್ಲಿ ಹಬ್ಬ ಸಂಭ್ರಮದಿಂದ ಜರುಗಿತು. ಜಾತ್ರೆ ಆಚರಿಸುವ ತಾಲೂಕಿನ ಮರಿ ಯಾಲ, ಕೆಲ್ಲಂಬಳ್ಳಿ, ಭೋಗಾಪುರ, ಬಸ ವನಪುರ, ಹೊನ್ನೇಗೌಡನಹುಂಡಿ, ಆನಹಳ್ಳಿ, ಮೂಕನಹಳ್ಳಿ, ಸಪ್ಪಯ್ಯನಪುರ, ಚಿಕ್ಕಹೊಮ್ಮ, ದೊಡ್ಡ ಹೊಮ್ಮ, ತೊರವಳ್ಳಿ, ಕಲ್ಲಹಳ್ಳಿ, ಮರಿಯಾಲದ ಹುಂಡಿ, ಹೆಗ್ಗವಾಡಿ, ಕರಡಿಮೋಳೆ, ಕಿರಗಸೂರು, ಹೆಗ್ಗವಾಡಿ ಪುರ, ಐತಾಳಪುರ, ಅಂಕಶಾಯನಪುರ, ದಾಸನೂರು ಸೇರಿದಂತೆ ಇತರೆ ಗ್ರಾಮಗಳ ಜನರು ಕಸ್ತೂರಿನ…

ಹಂಡ್ರಕಳ್ಳಿಮೋಳೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕಳಪೆ: ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಹಂಡ್ರಕಳ್ಳಿಮೋಳೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕಳಪೆ: ಗ್ರಾಮಸ್ಥರ ಪ್ರತಿಭಟನೆ

January 6, 2020

ಚಾಮರಾಜನಗರ, ಜ.5- ತಾಲೂಕಿನ ಹಂಡ್ರಕಳ್ಳಿಮೋಳೆಯಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗರಾಜು ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿಂಗರಾಜು ಮಾತನಾಡಿ, ಶಾಸಕ ಸಿ.ಪುಟ್ಟ ರಂಗಶೆಟ್ಟಿ ಅವರು ತಮ್ಮ ಅನುದಾನದಲ್ಲಿ ಹಂಡ್ರಕಳ್ಳಿಮೋಳೆ ಗ್ರಾಮದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ 70 ಲಕ್ಷ ರೂ. ನೀಡಿದ್ದರು. ಆದರೆ ಗುತ್ತಿಗೆದಾರ, ಪಿಡಬ್ಲೂಡಿ…

1 25 26 27 28 29 141
Translate »