ಇಂದಿನಿಂದ 3 ದಿನ ವೀರ್‍ಭಾರತ್ ಪಾದಯಾತ್ರೆ
ಚಾಮರಾಜನಗರ

ಇಂದಿನಿಂದ 3 ದಿನ ವೀರ್‍ಭಾರತ್ ಪಾದಯಾತ್ರೆ

January 10, 2020

ಚಾಮರಾಜನಗರ, ಜ.9(ಎಸ್‍ಎಸ್)- ಯುವ ಬ್ರಿಗೇಡ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ವೀರ್ ಭಾರತ್ ಗುರಿಯತ್ತ ನಡೆ ಎಂಬ ಪಾದ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಅದರಂತೆ ಜಿಲ್ಲೆಯಲ್ಲಿ ಜನವರಿ 10 ರಿಂದ 12 ರವರೆಗೆ ಪಾದಯಾತ್ರೆ ನಡೆಯಲಿದೆ.

ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುತ್ತಾ ವಿವೇಕಾನಂದರ ವಿಚಾರಧಾರೆಗಳನ್ನು ಹಂಚುತ್ತಾ ಹಳ್ಳಿಗಳೊಂ ದಿಗೆ ಬಾಂಧವ್ಯ ಬೆಸೆಯುವ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಜಿಲ್ಲೆಯ ಮರೆತುಹೋದ ಮಹಾಪುರುಷರನ್ನು ಎಲ್ಲರಿಗೂ ಮತ್ತೊಮ್ಮೆ ನೆನಪಿಸಿಕೊಡುವ ವಿಶೇಷ ಪ್ರಯತ್ನ ಇದಾಗಿದೆ ಎಂದು ಯುವ ಬ್ರಿಗೇಡ್ ತಿಳಿಸಿದೆ. ಜಿಲ್ಲೆಯಲ್ಲಿ 3 ದಿನಗಳ ಕಾಲ ನಡೆಯುವ ಪಾದಯಾತ್ರೆಯಲ್ಲಿ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಲಿದ್ದು, ನಾಗರಿಕರು ಆಗಮಿಸುವಂತೆ ಕೋರಲಾಗಿದೆ.

ಪಾದಯಾತ್ರೆ ಮಾರ್ಗ: ಜ.10- ಅಮಚವಾಡಿಯಿಂದ ಪ್ರಾರಂಭ ಚನ್ನಪ್ಪನಪುರ, ಹೊಸೂರು, ಕೋಡಿಉಗನೆ, ಬೇವಿನತಾಳಪುರ, ಬಸವಾಪುರ, ಅಂಕನಶೆಟ್ಟಿಪುರ, ವೆಂಕಟಯ್ಯನಛತ್ರ, ಬಂಡಿಗೆರೆ, ಚಿಕ್ಕಮೋಳೆ, ದೊಡ್ಡ ಮೋಳೆ, ಹರದನಹಳ್ಳಿ.

ಜ.11- ಬ್ಯಾಡಮೂಡ್ಲು, ಬಸವಪುರ, ಕೋಡಿಮೋಳೆ, ಹರದನಹಳ್ಳಿ, ಸರಗೂರು ಮೋಳೆ, ಮಲ್ಲುಪುರ, ಆಲೂರು, ಹೊಮ್ಮ, ಅಂಬಳೆ, ಕಂದಹಳ್ಳಿ

ಜ.12- ಯಳಂದೂರು, ಉಪ್ಪಿನಮೋಳೆ, ಕೃಷ್ಣಾಪುರ, ಗುಂಬಳ್ಳಿ, ಗಣಿಗನೂರು, ಚಾಮಲಾಪುರ, ಗೌಡಹಳ್ಳಿ, ಮಲಾರಪಾಳ್ಯ, ಬೂದಿತಿಟ್ಟು, ಹಾಲ್ಕೆರೆ ಅಗ್ರಹಾರ, ಟಿ. ಹೊಸೂರು, ಶಿವಕಳ್ಳಿ, ಬನ್ನಿಸಾರಿಗೆ, ಅಗರ.

Translate »