ಪೌರತ್ವ ಕಾಯ್ದೆಯನ್ನು ‘ಒನಕೆ ಓಬವ್ವ’ ಹೆಸರಿನಲ್ಲಿ ಕರೆಯುವುದು ಸೂಕ್ತ
ಚಾಮರಾಜನಗರ

ಪೌರತ್ವ ಕಾಯ್ದೆಯನ್ನು ‘ಒನಕೆ ಓಬವ್ವ’ ಹೆಸರಿನಲ್ಲಿ ಕರೆಯುವುದು ಸೂಕ್ತ

January 10, 2020

ಗುಂಡ್ಲುಪೇಟೆಯಲ್ಲಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಆರ್.ರಘು (ಕೌಟಿಲ್ಯ) ಅಭಿಮತ
ಗುಂಡ್ಲುಪೇಟೆ, ಜ.9(ಸೋಮ್‍ಜಿ)- ದೇಶದ ಸುಭದ್ರತೆಗಾಗಿ ಅಸ್ಥಿತ್ವಕ್ಕೆ ಬಂದಿ ರುವ ಪೌರತ್ವ ತಿದ್ದುಪಡಿ ಕಾಯ್ದೆ ಈಗ ದೇಶಾದ್ಯಂತ ಅಪಪ್ರಚಾರಕ್ಕೆ ಗ್ರಾಸವಾಗಿದ್ದು, ಚಿತ್ರದುರ್ಗದ ಕೋಟೆಯ ಒಳಗೆ ಕಿಂಡಿ ಮೂಲಕ ನುಸುಳಿ ಬರುತ್ತಿದ್ದ ಶತ್ರುಗಳನ್ನು ಒನಕೆ ಓಬವ್ವ ಸೆದೆ ಬಡಿದ ರೀತಿ, ಭಾರತ್ವಕ್ಕೆ ಬರುವ ನುಸುಳುಕೋರರನ್ನು ತಡೆಯುವುದು ಈ ಕಾಯ್ದೆಯ ಉದ್ದೇಶವಾಗಿದೆ. ಹೀಗಾಗಿ ಈ ಕಾಯ್ದೆಯನ್ನು ‘ ಒನಕೆ ಓಬವ್ವ’ನ ಹೆಸರಿನಲ್ಲಿ ಕರೆಯುವುದು ಸೂಕ್ತ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಆರ್. ರಘು (ಕೌಟಿಲ್ಯ) ಅಭಿಪ್ರಾಯ ಪಟ್ಟಿದ್ದಾರೆ.

ವಾಸ್ತವವಾಗಿ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ದೌರ್ಜನ್ಯ, ಶೋಷಣೆಗೊಳಗಾಗಿ ಆಶ್ರಯ ಬಯಸಿ ಬಂದ ಅಲ್ಲಿನ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುವುದೇ ವಿನಃ, ಪೌರತ್ವವನ್ನು ಭಾರತದಲ್ಲಿರುವ ಯಾರಿಂ ದಲೂ ಕಸಿದುಕೊಳ್ಳುವುದು ಈ ಕಾಯ್ದೆಯ ಉದ್ದೇಶವಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ನುಸುಳುಕೋರರಲ್ಲಿ ಆತಂಕ ತರಬೇಕೇ ವಿನಃ ದೇಶವಾಸಿಗಳಿಗಲ್ಲ. ವಿಪರ್ಯಾಸ ವೆಂದರೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಈ ಕಾಯ್ದೆ ಬಗ್ಗೆ ಜನರದಲ್ಲಿ ತಪ್ಪು ಭಾವನೆ ಸೃಷ್ಠಿಸುತ್ತಿವೆ ಎಂದು ದೂರಿದರು.

ಗುಂಡ್ಲುಪೇಟೆ ಪಟ್ಟಣದಲ್ಲಿ ಗುರುವಾರ ತಾಲೂಕು ಬಿಜೆಪಿ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸುಭದ್ರತೆಗೆ ಧಕ್ಕೆ ತಂದು ಭಯೋತ್ಪಾದಕತೆ ಸೃಷ್ಠಿಸಲು ಹಾಗೂ ಇಲ್ಲಿನ ಜನರ ಔದ್ಯೋಗಿಕ ಅವಕಾಶಗಳನ್ನು ಕಸಿಯುತ್ತಿರುವವರಿಗೆ ಪೌರತ್ವ ನೀಡಬೇಕೇ ? ಎಂದು ಪ್ರಶ್ನಿಸಿದ ಅವರು, ಇಂತಹವರ ಪರವಾಗಿ ವಾದಿಸುತ್ತಿರುವ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯ ದಲ್ಲಿ ತಪ್ಪುಗ್ರಹಿಕೆ ಮೂಡಿಸಿ ಅವರಲ್ಲಿ ಆತಂಕದ ವಾತಾವರಣ ನಿರ್ಮಿಸಿ ಅವರನ್ನು ದಿಕ್ಕು ತಪ್ಪಿಸುತ್ತಿರುವುದು ರಾಷ್ಟ್ರ ಹಿತಾ ಸಕ್ತಿಯ ವಿರುದ್ಧದ ನಡೆ ಎಂದು ಕಾಯ್ದೆ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಯ್ದೆಯಿಂದ ಯಾರಿಗೆ ತೊಂದರೆ ಆಗುತ್ತಿದೆ ಎಂಬ ಬಗ್ಗೆ ಯಾರೂ ಹೇಳುತ್ತಿಲ್ಲ. ತಾಕತ್ತಿದ್ದರೆ ಯಾರಿಗೆ ತೊಂದರೆ ಆಗುತ್ತಿದೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಸೇರಿದಂತೆ ಕಾಯ್ದೆ ವಿರೋಧಿಸು ತ್ತಿರುವವರಿಗೆ ರಘು ಸವಾಲು ಹಾಕಿದರು.

ಜನಜಾಗೃತಿ ಅಭಿಯಾನವು ಶಾಸಕ ಸಿಎಸ್ ನಿರಂಜನ್ ಕುಮಾರ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಶಾಸಕ ಸಿಎಸ್ ನಿರಂಜನ್ ಕುಮಾರ್ ಮಾತನಾಡಿ, ಸುಖಾ ಸುಮ್ಮನೆ ವಿರೋಧ ಪಕ್ಷದವರು ಹಾಗೂ ಕೆಲವು ಬುದ್ಧಿಜೀವಿಗಳು ನಗರ ನಕ್ಸಲರು ಈ ಕಾಯ್ದೆಯ ಮಾಹಿತಿಯನ್ನು ದಿಕ್ಕು ತಪ್ಪಿಸಿ ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಈ ಕಾಯಿದೆಯಿಂದ ಯಾರೂ ಹೆದರಬೇಕಾಗಿಲ್ಲ. ಈ ಕಾಯ್ದೆಯು ದೇಶದ ಭದ್ರತೆಗಾಗಿ ಮಾಡಿದ ಕಾಯ್ದೆಯಾಗಿದೆ, ಭಾರತ ದೇಶದ ಪವಿತ್ರ ಭೂಮಿಯಲ್ಲಿ ಸನಾತನ ಕಾಲದಿಂದಲೂ ವಾಸ ಮಾಡುತ್ತಿ ರುವ ಮುಸಲ್ಮಾನರಿಗೆ ಯಾವುದೇ ಕಾರಣಕ್ಕೂ ಈ ಕಾಯಿದೆಯಿಂದ ತೊಂದರೆಯಾಗು ವುದಿಲ್ಲ. ಎನ್‍ಆರ್‍ಸಿ ಜಾರಿಗೆ ತಂದು ಮುಸ್ಲಿಮ ರನ್ನು ಈ ದೇಶದಿಂದ ಹೊರ ಹಾಕಲಾಗು ತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಪ್ರಚೋ ದಿಸುತ್ತಿರುವ ವಿರೋಧ ಪಕ್ಷಗಳ ವೋಟ್ ಬ್ಯಾಂಕ್ ರಾಜಕಾರಣವನ್ನು ನಾವೆಲ್ಲ ವಿರೋಧಿಸಬೇಕಿದೆ.

ಅಭಿಯಾನದಲ್ಲಿ ಬಿಜೆಪಿ ಕಾರ್ಯ ಕರ್ತರು ತ್ರಿವರ್ಣ ಧ್ವಜವನ್ನು ಹಿಡಿದು ಭಾಗ ವಹಿಸಿದ್ದರು. ಪಟ್ಟಣದ ಪ್ರವಾಸಿ ಮಂದಿರ ದಿಂದ ಆರಂಭವಾಗಿ ಚಾಮರಾಜನಗರ ರಸ್ತೆಯ ಮುಖಾಂತರ ಕೋಡಳ್ಳಿ ವೃತ್ತವನ್ನು ದಾಟಿ, ಪಟ್ಟಣದ ಅಂಗಡಿ ಬೀದಿಯಲ್ಲಿ ಸಂಚರಿಸಿ ನೆಹರು ಉದ್ಯಾನವನದ ಬಳಿ ಮಾನವ ಸರಪಳಿಯನ್ನು ಮಾಡುವುದರ ಮುಖಾಂತರ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದರು.

ಚಾಮರಾಜನಗರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದು ಶೆಟ್ಟರು ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರ ವನ್ನು ತಿಳಿಸಿದರು. ಇಂದಿನ ಜನಜಾಗೃತಿ ಅಭಿಯಾನದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾದ ಡಿಪಿ ಜಗದೀಶ್, ಮಾಜಿ ಮಂಡಲ ಅಧ್ಯಕ್ಷರಾದ ಮಲ್ಲೇಶ್, ಪುರಸಭಾ ಸದಸ್ಯರಾದ ಗಿರೀಶ್, ರಮೇಶ್, ನಾಗೇಶ್, ಬಿಜೆಪಿ ಮುಖಂಡರುಗಳಾದ ಎಸ್.ಪಿ. ಸುರೇಶ್, ನಿಟ್ರೆ ನಾಗರಾಜಪ್ಪ, ಅಗತಗೌಡನಹಳ್ಳಿ ಬಸವ ರಾಜು, ಹಿರೀಕಾಟಿ ಸೋಮಶೇಖರ್, ಕಬ್ಬಳ್ಳಿ ಬಸವರಾಜ ಸ್ವಾಮಿಗಳು, ಹೊರೆ ಯಾಲ ಮಹೇಶ್, ಶ್ಯಾನಾಡ್ರಹಳ್ಳಿ ಮಲ್ಲಿ ಕಾರ್ಜುನ್, ಕುರುಬರಹುಂಡಿ ಲೋಕೇಶ್, ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಶಾಂತ ಮಲ್ಲಪ್ಪ, ಮಲೆಯೂರು ನಾಗೇಂದ್ರ, ಮಂಗಳ ಹೂವಯ್ಯ, ಕೊಡಸೋಗೆ ಶಿವಬಸಪ್ಪ, ವಿವಿಧ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಶಕ್ತಿಕೇಂದ್ರಗಳ ಅಧ್ಯಕ್ಷರು, ವಿವಿಧ ಮೋರ್ಚಾ ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳು, ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಉಪಸ್ಥಿತರಿದ್ದರು.

Translate »