ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಉಜ್ವಲ್ ಘೋರ್ಮಡೆ ಅಧಿಕಾರ ಸ್ವೀಕಾರ
ಕೊಡಗು

ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಉಜ್ವಲ್ ಘೋರ್ಮಡೆ ಅಧಿಕಾರ ಸ್ವೀಕಾರ

January 10, 2020

ಕುಶಾಲನಗರ, ಜ.9- ಸಮೀಪದ ಕೂಡಿಗೆ ಕೊಡಗು ಸೈನಿಕ ಶಾಲೆಯ ನೂತನ ಪ್ರಾಂಶು ಪಾಲರಾಗಿ ಗ್ರೂಪ್ ಕ್ಯಾಪ್ಟನ್ ಉಜ್ವಲ್ ಘೋರ್ಮಡೆಯವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ನೂತನ ಪ್ರಾಂಶುಪಾಲರನ್ನು ಬರಮಾಡಿಕೊಂಡರು. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವು ದರ ಮೂಲಕ ಉಜ್ವಲ್ ಘೋರ್ಮಡೆ ಗೌರವ ಸಲ್ಲಿಸಿದರು. ನಂತರ ಶಾಲೆಯ ಜೆಡಿ ಎನ್‍ಸಿಸಿ ಘಟಕದ ವತಿಯಿಂದ ಪೆರೇಡ್ ನಾಯಕ ಕೆಡೆಟ್ ನರೇಂದ್ರ ರೋಡಗಿ ಹಾಗೂ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಹಾಗೆಯೇ ಸಭಾಂಗಣಕ್ಕೆ ಆಗಮಿಸಿದ ಅವರಿಗೆ ಸ್ವಾಗತ ಕೋರಲು ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ಗಳು ಹಲವು ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಪ್ರಾಂಶುಪಾಲರು ವಿದ್ಯಾರ್ಥಿಗಳು ಸಮಗ್ರತೆ ಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಶಾಲೆಯಲ್ಲಿ ಮತ್ತು ಸಮಾಜದಲ್ಲಿ ಜವಾ ಬ್ದಾರಿಯುತ ಪ್ರಜೆಗಳಾಗಿ ಬದುಕಬೇಕೆಂದು ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಯುಪಿ ಎಸ್‍ಸಿ ಮತ್ತು ಎನ್‍ಡಿಎ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆಂದು ಭರವಸೆ ನೀಡಿದರು. ಸೈನಿಕ ಶಾಲಾ ಕೊಡ ಗಿನ ಸಿಬ್ಬಂದಿ ವರ್ಗದವರು ಇದುವರೆಗೆ ಕೈಗೊಂಡಿರುವ ಸಾಧನೆಯನ್ನು ಪ್ರಶಂಸಿ ಸಿದರು. ಪ್ರಸ್ತುತ ಸೈನಿಕ ಶಾಲೆಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇತರೆ ಸೇನಾ ತರಬೇತಿ ಸಂಸ್ಥೆಗಳಿಗೆ ಪ್ರವೇಶಿಸಲು ವಿದ್ಯಾರ್ಥಿ ಗಳಿಗೆ ನೀಡಿರುವ ತರಬೇತಿಯನ್ನು ಶ್ಲಾಘಿಸಿದರು.

ಶಾಲೆಯ ಉಪಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್‍ಕೆ ಡೇ, ಹಿರಿಯ ಶಿಕ್ಷಕ ಎಸ್.ಸೂರ್ಯನಾರಾಯಣ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.

Translate »