ಚಾಮರಾಜನಗರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾ ಗಿದ್ದ ಪತಿ ಹಾಗೂ ಅತ್ತೆಗೆ 3ವರ್ಷ ಸಾದಾ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನಗರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಎಸ್.ಆರ್.ರಂಗಯ್ಯ ಅವರ ಮಗ ಗೋಪಾಲಸ್ವಾಮಿ ಹಾಗೂ ಇವರ ತಾಯಿ ಚಿನ್ನಮ್ಮ ಶಿಕ್ಷೆಗೆ ಒಳಗಾದವರು. ಘಟನೆಯ ವಿವರ: ಸೋಮಹಳ್ಳಿ ಗ್ರಾಮದ ಗೋಪಾಲಸ್ವಾಮಿ ತನ್ನ ಪತ್ನಿ ತ್ರಿವೇಣಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ ಜಗಳ ಮಾಡುತ್ತಿದ್ದನು. ಪತ್ನಿಯ ಶೀಲ…
ಭಾರತ್ ಬಂದ್: 2ನೇ ದಿನ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ
January 10, 2019ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ, ಎಂದಿನಂತೆ ಜನ ಜೀವನ ಚಾಮರಾಜನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ರಜೆ ಘೋಷಣೆಯಾಗಿದ್ದ ಶಾಲಾ-ಕಾಲೇ ಜುಗಳು ಇಂದು ತೆರೆದಿತ್ತು. ಬಸ್-ಆಟೋ ಸಂಚಾರ ಸಹಜವಾಗಿತ್ತು. ಬ್ಯಾಂಕ್, ಸರ್ಕಾರಿ ಕಚೇರಿ, ಪೆಟ್ರೋಲ್‍ಬಂಕ್, ಚಿತ್ರ ಮಂದಿರ, ಹೊಟೇಲ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಉಳಿದಂತೆ ಯಳಂ ದೂರು,…
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ
January 8, 2019ಕೊಳ್ಳೇಗಾಲ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಇಲ್ಲಿನ ನಗರಸಭೆಗೆ ಮುತ್ತಿಗೆ ಹಾಕಿದ 1ನೇ ವಾರ್ಡ್ ನಿವಾಸಿಗಳು, ಸಿಬ್ಬಂದಿಯನ್ನು ಹೊರ ಕಳುಹಿಸಿ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು. ನಗರಸಭೆ ಎದುರು ಜಮಾಯಿಸಿದ 1ನೇ ವಾರ್ಡ್ ನಿವಾಸಿಗಳು ವಿವಿಧ ಸಂಘಟನೆ ಗಳ ಮುಖಂಡರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರಲ್ಲದೆ, ಕರ್ತವ್ಯದಲ್ಲಿದ್ದ ನೌಕರ ರನ್ನು ಹೊರ ಕಳಿಹಿಸಿ ಕಚೇರಿ ಬಾಗಿಲು ಹಾಕಿದರು. ಇದೇ ವೇಳೆ ಖಾಲಿ ಕೊಡ ಪ್ರದರ್ಶಿಸಿ, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಆರು…
ಕೆಲ ದೃಶ್ಯ ಮಾಧ್ಯಮಗಳ ವಿರುದ್ಧ ಉಪ್ಪಾರರ ಪ್ರತಿಭಟನೆ
January 8, 2019ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವ ಕೆಲವು ಸುದ್ದಿ ಚಾನಲ್‍ಗಳ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ವಾರ್ತಾ ವಾಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ್ಪಾರ ಸಮಾಜದಿಂದ ನಗರದಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲಾ ಉಪ್ಪಾರ ಯುವಕರ ಸಂಘದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದರ ಉಪ್ಪಾರ ಸಮಾಜದವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸಚಿವ…
ದೇಶವ್ಯಾಪಿ ಬಂದ್: ವಿವಿಧ ಸಂಘಟನೆಗಳ ಬೆಂಬಲ
January 8, 2019ಚಾಮರಾಜನಗರ: ಕಾರ್ಮಿಕ ಸಂಘಟನೆಗಳ ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜ.8 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಜ.8, 9ರಂದು ದೇಶವ್ಯಾಪಿ ಬಂದ್‍ಗೆ ಕರೆ ನೀಡಿದ್ದು, ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ಜ.8 ರಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ರಜೆ ಘೋಷಿಸಿದ್ದಾರೆ. ದೇಶವ್ಯಾಪಿ ಬಂದ್ ಹಿನ್ನೆಲೆ ಜಿಲ್ಲೆಯಲ್ಲೂ ಸಹ ಕಾರ್ಮಿಕ ಸಂಘ ಟನೆಗಳು ಬಂದ್ಗೆ ಕರೆ ನೀಡಿದ್ದು, ಸಾರಿಗೆ ನೌಕರರು ಬೆಂಬಲ ಸೂಚಿಸಿದ್ದಾರೆ….
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭ
January 4, 2019ಚಾಮರಾಜನಗರ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018- 19ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜ. 15ರವರೆಗೆ ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ. ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ 2,897 ರೂ.ಗಳಂತೆ ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತ ರಿಂದ ಮಾತ್ರ ರಾಗಿ ಖರೀದಿಸಲಾಗು ತ್ತಿದ್ದು, ಗರಿಷ್ಠ 75 ಕ್ವಿಂಟಾಲ್‍ಗೆ ಮೀರದಂತೆ ರೈತರಿಂದ ಖರೀದಿ ಮಾಡಲಾಗುತ್ತದೆ. ರೈತರು ಬೆಳೆದಿರುವ ರಾಗಿಯನ್ನು ನೋಂದಣಿ…
ಹಾಲಹಳ್ಳಿಯಲ್ಲಿ ಹೆಚ್‍ಎಸ್‍ಎಂ 2ನೇ ವರ್ಷದ ಪುಣ್ಯಾರಾಧನೆ
January 4, 2019ಗುಂಡ್ಲುಪೇಟೆ: ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ 2ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಗುರುವಾರ ನಡೆಯಿತು. ಹಾಲಹಳ್ಳಿಯಲ್ಲಿರುವ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸ್ವಗೃಹದಲ್ಲಿ ಬೆಳಿಗ್ಗೆ ಮಾದಾಪಟ್ಟಣ ಮಠಾಧ್ಯಕ್ಷ ಸದಾ ಶಿವ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಆರಾಧನೆ ಕಾರ್ಯಕ್ರಮ ನಡೆಸಲಾಯಿತು. ನಂತರ ಗ್ರಾಮದ ಹೊರವಲಯದಲ್ಲಿ ರುವ ಬೊಗ್ಗನಪುರ ನರ್ಸರಿ ಫಾರಂ ನಲ್ಲಿರುವ ಮಹದೇವಪ್ರಸಾದ್ ಅವರ ಸಮಾ ಧಿಗೆ ಮಾಜಿ ಸಚಿವೆ ಡಾ.ಗೀತಾಮಹದೇವ ಪ್ರಸಾದ್, ಪುತ್ರ ಹೆಚ್.ಎಂ.ಗಣೇಶಪ್ರಸಾದ್ ಮತ್ತು ಕುಟುಂಬಸ್ಥರು ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ…
ವೇತನ ಪಾವತಿಗೆ ಆಗ್ರಹಿಸಿ ವಾಟರ್‍ಮ್ಯಾನ್ ನೌಕರರ ಪ್ರತಿಭಟನೆ
January 4, 2019ಹನೂರು: ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರ ದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್ ಮ್ಯಾನ್‍ಗಳಿಗೆ 15 ತಿಂಗಳಿಂದ ವೇತನವನ್ನು ಪಾವತಿ ಸದಿರುವುದು ಖಂಡಿಸಿ ಪಟ್ಟಣದಲ್ಲಿ ಗುರುವಾರ ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ಹನೂರು ಪಟ್ಟಣ ಪಂಚಾಯಿತಿ ಕಚೆÉೀರಿ ಮುಂಭಾಗ ಸಮಾವೇಶಗೊಂಡ ನೌಕರರು ಹಾಗೂ ಸಂಘಟನೆಯ ಸದಸ್ಯರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಅನಿರ್ಧಿಷ್ಟಾವಧಿ ಧರಣಿ ನಡೆಸಿದರು. ಹೊರಗುತ್ತಿಗೆ ನೌಕರರಿಗೆ 15 ತಿಂಗಳಿಂದ ವೇತನವನ್ನು ಪಾವತಿಸದೆ…
ಸಂತ್ರಸ್ತ ಕುಟುಂಬಗಳಿಗೆ ಪುಷ್ಪ ಅಮರ್‍ನಾಥ್ ಸಾಂತ್ವನ
January 4, 2019ಹನೂರು: ಸಮೀಪದ ಬಿದರಹಳ್ಳಿ ಮತ್ತು ಸುಳವಾಡಿ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್‍ನಾಥ್ ಭೇಟಿ ನೀಡಿ ಸುಳವಾಡಿ ವಿಷ ಪ್ರಸಾದ ದುರಂತದಲ್ಲಿ ಸಾವನ್ನಪ್ಪಿದ್ದವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ, 40ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಗ್ರಾಮಕ್ಕೆ ಹಿಂದಿರುಗಿದ್ದು, ಅವರ ಮನೆಗಳಿಗೂ ತೆರಳಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸಂತ್ರಸ್ತ ಕುಟುಂಗಳಿಗೆ ಆಹಾರ ಸಾಮಗ್ರಿ ಹಾಗೂ ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ…
ಚಾಮರಾಜನಗರ ಜಿಲ್ಲೆಯಲ್ಲಿ ಜಾನುವಾರು ಮೇವಿನ ಕೊರತೆಯಿಲ್ಲ!
January 3, 2019ಚಾಮರಾಜನಗರ: ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಿಲ್ಲ, ಮುಂದಿನ 5 ತಿಂಗಳವ ರೆಗೂ ಸಾಕಾಗುವಷ್ಟು ಮೇವು ಲಭ್ಯತೆವಿದೆ. ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಸುಮಾರು 2.53ಲಕ್ಷ ಟನ್ ಮೇವು ರೈತರ ಜಮೀನು ಹಾಗೂ ಮನೆಗಳಲ್ಲಿ ಸಂಗ್ರಹ ವಿದೆ. ಈ ಮೇವು ಮುಂದಿನ ಮೇ ತಿಂಗ ಳಿನವರೆಗೂ ಸಾಕಾಗಲಿದೆ. ಹೀಗಾಗಿ, ಈ ಬಾರಿ ಮೇವಿನ ಕೊರತೆ ಎದುರಾಗುವು ದಿಲ್ಲ. ಇದರಿಂದ ಜಿಲ್ಲೆಯಲ್ಲಿ ಗೋ ಶಾಲೆ ಯನ್ನು ತೆರೆಯುವ ಅಗತ್ಯತೆ ಇಲ್ಲ…