ಹನೂರು: ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರ ದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್ ಮ್ಯಾನ್‍ಗಳಿಗೆ 15 ತಿಂಗಳಿಂದ ವೇತನವನ್ನು ಪಾವತಿ ಸದಿರುವುದು ಖಂಡಿಸಿ ಪಟ್ಟಣದಲ್ಲಿ ಗುರುವಾರ ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಹನೂರು ಪಟ್ಟಣ ಪಂಚಾಯಿತಿ ಕಚೆÉೀರಿ ಮುಂಭಾಗ ಸಮಾವೇಶಗೊಂಡ ನೌಕರರು ಹಾಗೂ ಸಂಘಟನೆಯ ಸದಸ್ಯರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಅನಿರ್ಧಿಷ್ಟಾವಧಿ ಧರಣಿ ನಡೆಸಿದರು. ಹೊರಗುತ್ತಿಗೆ ನೌಕರರಿಗೆ 15 ತಿಂಗಳಿಂದ ವೇತನವನ್ನು ಪಾವತಿಸದೆ ಇರುವುದ ರಿಂದ ಮಕ್ಕಳ ವಿದ್ಯಾಭ್ಯಾಸ ಸೇರಿ ದಂತೆ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ವೇತನವನ್ನು ಪಾವತಿಸುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆ ಮೂಲಕ ನಮ್ಮ ಬದುಕುವ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಾಟರ್‍ಮ್ಯಾನ್ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣ, ಉಪಾಧ್ಯಕ್ಷ ಸಿ.ಸತೀಶ್, ಸದಸ್ಯರಾದ ರಾಜೇಂದ್ರ ಪ್ರಸಾದ್, ಸುರೇಶ್‍ಬಾಬು, ಎನ್.ರವಿಕುಮಾರ್, ಸಿದ್ದರಾಜು, ದೇವರಾಜು, ಆರ್.ರವಿಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.