ಶಬರಿಮಲೈಗೆ ಮಹಿಳೆಯ ಪ್ರವೇಶ ವಿರೋಧಿಸಿ ರಸ್ತೆ ತಡೆ
ಕೊಡಗು

ಶಬರಿಮಲೈಗೆ ಮಹಿಳೆಯ ಪ್ರವೇಶ ವಿರೋಧಿಸಿ ರಸ್ತೆ ತಡೆ

January 4, 2019

ಮಡಿಕೇರಿ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿರುವು ದನ್ನು ವಿರೋಧಿಸಿ ಮಡಿಕೇರಿಯಲ್ಲಿ ಅಯ್ಯಪ್ಪ ವ್ರತಾಧಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇಲ್ಲಿನ ಶಬರಿಮಲೆ ಕ್ಷೇತ್ರ ಸಂರ ಕ್ಷಣಾ ಸಮಿತಿಯ ಪ್ರತಿಭಟನೆ ಕರೆಗೆ ಓಗೊಟ್ಟ ನೂರಾರು ಅಯ್ಯಪ್ಪ ಭಕ್ತರು ಮತ್ತು ವ್ರತಾ ಧಾರಿಗಳು ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿದರು. ರಸ್ತೆಯ ನಡುವೆ ಕುಳಿತು ಶಬರಿಮಲೆ ಅಯ್ಯಪ್ಪನ ನಾಮ ಸ್ಮರಣೆ ಮತ್ತು ಭಜನೆಯ ಮೂಲಕ ಪಂದಳ ಕಂದನನ್ನು ಸ್ತುತಿ ಸಿದ ಅಯ್ಯಪ್ಪ ಭಕ್ತರು, ವಿನೂತನ ರೀತಿಯ ಪ್ರತಿಭಟನೆಗೆ ಸಾಕ್ಷಿಯಾದರು.

ಈ ವೇಳೆ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಕುಕ್ಕೇರ ಅಜಿತ್ ಮಾತನಾಡಿ, ಕೇರಳದ ಕಮ್ಯುನಿಸ್ಟ್ ಸರಕಾರ ಕಮ್ಯು ನಿಸಂ ತತ್ವಗಳನ್ನು ಪಸರಿಸಲು ಇಬ್ಬರು ಮಹಿ ಳೆಯರಿಗೆ ಭದ್ರತೆ ನೀಡಿ ಅಯ್ಯಪ್ಪ ಸನ್ನಿಧಿಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ಗಳಿಗೆ ಧಕ್ಕೆ ತಂದಿದೆ. ಕೇರಳದ ಕಮ್ಯುನಿಸ್ಟ್ ಸರ ಕಾರ ತನ್ನ ನೀತಿ ಮತ್ತು ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ ಅಯ್ಯಪ್ಪ ಭಕ್ತರು ಮತ್ತು ಹಿಂದೂ ಸಮಾಜ ತಕ್ಕ ಪ್ರತ್ಯುತ್ತರ ನೀಡಲಿದೆ. ಕೇರಳದಲ್ಲಿ ಮುಂದಿನ ದಿನಗ ಳಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ ಕೇರಳ ಸರಕಾರವೇ ಹೊಣೆ ಹೊರಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಅಯ್ಯಪ್ಪ ಸನ್ನಿದಾನ ಪ್ರತಿಷ್ಠಾಪನೆಯಾಗಿ 800 ವರ್ಷಗಳೇ ಕಳೆದಿದ್ದು, ಅನಾದಿ ಕಾಲ ದಿಂದಲೂ 10 ರಿಂದ 50 ವರ್ಷದವರೆಗಿನ ಸ್ತ್ರೀಯರ ಪ್ರವೇಶಕ್ಕೆ ನಿಷೇಧವಿದೆ. ಹೀಗಿದ್ದರೂ ಸಂಪ್ರದಾಯ, ಕಟ್ಟು ಪಾಡುಗಳನ್ನು ಮುರಿದು ಸನ್ನಿಧಾನಕ್ಕೆ ತೆರಳಿರುವ ಇಬ್ಬರು ಮಹಿಳೆ ಯರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಅಕ್ಷಮ್ಯ ಎಂದಿದ್ದಾರೆ.
ಕೇರಳದಲ್ಲಿರುವ ಕಮ್ಯುನಿಸ್ಟ್ ಸರಕಾರ ವನ್ನು ಕಿತ್ತೊಗೆದು ರಾಷ್ಟ್ರಪತಿ ಆಳ್ವಿಕ ಜಾರಿ ಗೊಳಿಸಬೇಕೆಂದು ಇದೇ ಸಂದರ್ಭ ಕುಕ್ಕೇರ ಅಜಿತ್ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕ ಚೇತನ್, ಪ್ರಮುಖರಾದ ಗಣೇಶ್, ಬಿಜೆಪಿ ನಗರಾ ಧ್ಯಕ್ಷ ಮಹೇಶ್ ಜೈನಿ, ಮುಖಂಡರಾದÀ ರಾಬಿನ್ ದೇವಯ್ಯ ಬಿ.ಕೆ.ಜಗದೀಶ್, ಅರುಣ್ ಕುಮಾರ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯ ಕರ್ತರು ಪಾಲ್ಗೊಂಡಿದ್ದರು.

Translate »