ಚಾಮರಾಜನಗರ: ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಿಲ್ಲ, ಮುಂದಿನ 5 ತಿಂಗಳವ ರೆಗೂ ಸಾಕಾಗುವಷ್ಟು ಮೇವು ಲಭ್ಯತೆವಿದೆ.
ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಸುಮಾರು 2.53ಲಕ್ಷ ಟನ್ ಮೇವು ರೈತರ ಜಮೀನು ಹಾಗೂ ಮನೆಗಳಲ್ಲಿ ಸಂಗ್ರಹ ವಿದೆ. ಈ ಮೇವು ಮುಂದಿನ ಮೇ ತಿಂಗ ಳಿನವರೆಗೂ ಸಾಕಾಗಲಿದೆ. ಹೀಗಾಗಿ, ಈ ಬಾರಿ ಮೇವಿನ ಕೊರತೆ ಎದುರಾಗುವು ದಿಲ್ಲ. ಇದರಿಂದ ಜಿಲ್ಲೆಯಲ್ಲಿ ಗೋ ಶಾಲೆ ಯನ್ನು ತೆರೆಯುವ ಅಗತ್ಯತೆ ಇಲ್ಲ ಎಂದು ಇಲಾಖೆ ಉಪನಿರ್ದೇಶಕ ಡಾ.ಆನಂದ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಕಳೆದ ವರ್ಷ ಸುರಿದÀ ಮಳೆ ಪ್ರಮಾಣ ಮತ್ತು ಬೆಳೆ ನಷ್ಟದ ಅಂದಾಜಿನ ಪ್ರಕಾರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತವೆಂದು ರಾಜ್ಯ ಸರ್ಕಾರ ಘೋಷಿ ಸಿದೆ. ಹಾಗಾಗಿ, ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗಬಹುದು ಎಂದು ರೈತರು ಆತಂಕಗೊಂಡಿದ್ದರು. ಆದರೆ, ಪಶುಪಾ ಲನಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆ ಯಲ್ಲಿ ಮುಂಗಾರು ಆರಂಭವಾಗು ವವರೆಗೂ ಮೇವಿನ ಕೊರತೆ ಎದುರಾ ಗುವುದಿಲ್ಲ ಎಂದು ತಿಳಿಸಿದೆ.
ಜಿಲ್ಲೆಯಲ್ಲಿ ರೈತರು ಭತ್ತ, ರಾಗಿ, ಕಬ್ಬು, ಜೋಳ, ಮುಸುಕಿನ ಜೋಳ, ಹುರುಳಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿ ದ್ದಾರೆ. 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿತ್ತು. ಹಾಗಾಗಿ, ಮೇವಿನ ಕೊರತೆ ಎದುರಾಗಿ ಜಾನುವಾರುಗಳ ಆಹಾರಕ್ಕೆ ತೊಂದರೆಯಾಗುತ್ತದೆ ಎಂದು ರೈತರು ಭಾವಿಸಿದ್ದರು. ಜಿಲ್ಲೆಯಲ್ಲಿ ಬೆಳೆ ನಷ್ಟವಾಗಿದೆಯೇ ಹೊರತು ಮೇವಿನ ತೊಂದ ರೆಯಾಗಿಲ್ಲ. ರೈತರು ಆತಂಕಗೊಳ್ಳುವ ಅವಶ್ಯಕತೆಯಿಲ್ಲ ಎಂದು ಇಲಾಖೆ ಉಪ ನಿರ್ದೇಶಕ ಆನಂದ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡು ಬಂದರೆ ಮೇವನ್ನು ಸಂಗ್ರಹ ಮಾಡಲು ಚಾಮರಾಜನಗರ ತಾಲೂಕಿನ ಹರದನಹಳ್ಳಿ (ಕೆವಿಕೆ), ಹರವೆ (ರೇಷ್ಮೆ ಇಲಾಖೆ ಆವ ರಣ), ಮಂಗಲ(ನಿರ್ಮಿತಿ ಕೇಂದ್ರ), ಗುಂಡ್ಲು ಪೇಟೆ ತಾಲೂಕಿನ ತೆರಕಣಾಂಬಿ (ಎಪಿ ಎಂಸಿ), ಬರ್ಗಿಫಾರಂ, ಕೊಳ್ಳೇಗಾಲ ತಾಲೂ ಕಿನ ಹನೂರು(ಎಪಿಎಂಸಿ), ರಾಮಾಪುರ, ಬಂಡಳ್ಳಿ, ಲೊಕ್ಕನಹಳ್ಳಿ(ಸ್ಥಳೀಯ ರೈತರ ಜಮೀನು), ಯಳಂದೂರು ತಾಲೂಕಿನ ತೋಟ ಗಾರಿಕೆ ಇಲಾಖೆ ಆವರಣವನ್ನು ಗುರುತಿಸ ಲಾಗಿದೆ. ಜಿಲ್ಲೆಯಲ್ಲಿ ಒಟ್ಟು 10 ಮೇವು ನಿಧಿಗಳನ್ನು ಸ್ಥಾಪನೆ ಮಾಡಿ, ಜಿಲ್ಲೆಯ ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಕ್ರಮಕೈ ಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.