ಉತ್ತಮ ಸಮಾಜಕ್ಕೆ ಧರ್ಮಸ್ಥಳ ಸಂಘ ನಾಂದಿ
ಚಾಮರಾಜನಗರ

ಉತ್ತಮ ಸಮಾಜಕ್ಕೆ ಧರ್ಮಸ್ಥಳ ಸಂಘ ನಾಂದಿ

January 3, 2019

ಗುಂಡ್ಲುಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ತಾಲೂಕಿನಾದ್ಯಂತ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡ ಗಿಸಿಕೊಂಡು ಉತ್ತಮವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದು ಎಸ್‍ಕೆಡಿಆರ್‍ಡಿಪಿಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಶಿವಶಕ್ತಿ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಯೋಜನಾ ಕಚೇರಿಯಲ್ಲಿ ನೂತನ ವರ್ಷದ ಡೈರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನ ವ್ಯಾಪ್ತಿಯಲ್ಲಿ 2,874 ಪ್ರಗತಿ ಬಂಧು ಸಂಘಗಳನ್ನು ರಚಿಸಿಕೊಂಡು ಸುಮಾರು 27,801 ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ 150 ಕೃಷಿ ತರಬೇತಿಗಳು, 39 ನಾಗರಿಕ ಪ್ರಜ್ಞಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಸದಸ್ಯರ ಹಿತದೃಷ್ಟಿಯಿಂದ 2 ಕೋಟಿಗೂ ಹೆಚ್ಚು ಪ್ರಗತಿ ನಿಧಿಯನ್ನು ವಿತರಿಸಲಾಗಿದೆ. 46 ನಿರ್ಗತಿಕ ಮಾಸಾಶನವನ್ನು ಸಂಸ್ಥೆಯು ಮಾನವೀಯತೆಯ ದೃಷ್ಟಿಯಲ್ಲಿ ನೀಡ ಲಾಗುತ್ತಿದೆ. ತಾಲೂಕಿನ ಹಾಲಿನ ಡೇರಿ ಕಟ್ಟಡ ಗಳ ನಿರ್ಮಾಣಕ್ಕಾಗಿ ಸಹಾಯ ಧನವಾಗಿ ಸುಮಾರು 5ಲಕ್ಷ ರೂ. ಈಗಾಗಲೇ ವಿತರಿ ಸಲಾಗಿದೆ. ಇದಲ್ಲದೇ ಹೈನುಗಾರಿಕೆ, ಕುರಿ ಸಾಕಾಣಿಕೆ ಇತರೆ ಉಪ ಕಸುಬಿಗಾಗಿ 1.20 ಲಕ್ಷ ರೂ. ಮತ್ತು ಕೃಷಿ ಸಲಕರಣೆಗಾಗಿ 90 ಸಾವಿರ ರೂ. ವಿತರಿಸಲಾಗಿದೆ ಎಂದರು.

ತಾಲೂಕು ಯೋಜನಾಧಿಕಾರಿ ಶಿವ ಪ್ರಸಾದ್ ಮಾತನಾಡಿ, ಡಾ.ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಧರ್ಮ ಸ್ಥಳ ಸಂಘವು ಅತ್ಯುತ್ತಮವಾಗಿ ಬಡವರ, ಕೃಷಿಕರ ಮತ್ತು ಎಲ್ಲಾ ವರ್ಗದವರ ಹಿತ ಕಾಪಾಡಲು ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಮಹೇ ಶ್ವರ, ಸುಜಾತಾ, ನವೀನ್, ಹರಿಣಿ, ರಾಘವ್, ಪವನ್, ನಾಗವೇಣಿ, ಸೋಮೇಶ್, ಎಲ್. ನವೀನ್, ಮಾದಪ್ಪ, ನಾಗಮಣಿ, ಜಯಶ್ರೀ, ಉಷಾ, ಶ್ರೀನಿವಾಸ್, ನಾಗೇಶ್, ಪ್ರದೀಪ್, ಸುಕನ್ಯಾ, ಸೌಭಾಗ್ಯ, ಚೈತ್ರಾ, ಪರಶಿವ ಮೂರ್ತಿ, ಕೇಶವ್, ವೇಣುಗೋ ಪಾಲ್, ಅಮೃತೇಶ್, ಸ್ವಾಮಿ, ಪೂರ್ಣಿಮಾ, ಮಲ್ಲಿಕಾ, ಮುತ್ತಮ್ಮ ಇತರರು ಇದ್ದರು.

Translate »