ಗುಂಡ್ಲುಪೇಟೆ: ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ 2ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಗುರುವಾರ ನಡೆಯಿತು.
ಹಾಲಹಳ್ಳಿಯಲ್ಲಿರುವ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸ್ವಗೃಹದಲ್ಲಿ ಬೆಳಿಗ್ಗೆ ಮಾದಾಪಟ್ಟಣ ಮಠಾಧ್ಯಕ್ಷ ಸದಾ ಶಿವ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಆರಾಧನೆ ಕಾರ್ಯಕ್ರಮ ನಡೆಸಲಾಯಿತು.
ನಂತರ ಗ್ರಾಮದ ಹೊರವಲಯದಲ್ಲಿ ರುವ ಬೊಗ್ಗನಪುರ ನರ್ಸರಿ ಫಾರಂ ನಲ್ಲಿರುವ ಮಹದೇವಪ್ರಸಾದ್ ಅವರ ಸಮಾ ಧಿಗೆ ಮಾಜಿ ಸಚಿವೆ ಡಾ.ಗೀತಾಮಹದೇವ ಪ್ರಸಾದ್, ಪುತ್ರ ಹೆಚ್.ಎಂ.ಗಣೇಶಪ್ರಸಾದ್ ಮತ್ತು ಕುಟುಂಬಸ್ಥರು ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಗೀತಾಮಹದೇವ ಪ್ರಸಾದ್ ಹಾಗೂ ಕುಟುಂಬದವರು ಕೆಲಕಾಲ ಭಾವುಕರಾದರು.
ಆರಾಧನೆ ಕಾರ್ಯಕ್ರಮದಲ್ಲಿ ಮಹ ದೇವಪ್ರಸಾದ್ ಅವರ ಸಹೋದರ ಹೆಚ್.ಎಸ್.ನಂಜುಂಡಪ್ರಸಾದ್, ಸಹೋ ದರಿ ಹೆಚ್.ಎಸ್.ಪ್ರೇಮಾ, ಕುಟುಂಬ ವರ್ಗದವರಾದ ವಿದ್ಯಾಶ್ರೀ, ರೂಪ, ಇಷ್ಟಾರ್ಥ್ ಸೇರಿದಂತೆ ನೂರಾರು ಸಂಖ್ಯೆ ಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಮಹದೇವಪ್ರಸಾದ್ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಎರಡನೇ ವರ್ಷದ ಆರಾಧನೆ ಪ್ರಯುಕ್ತ ಹಾಲಹಳ್ಳಿ ಗ್ರಾಮ ದಲ್ಲಿರುವ ಶ್ರೀಕಂಠಶೆಟ್ಟರ ಸಮುದಾಯ ಭವನದಲ್ಲಿ ಅನ್ನಸಂತರ್ಪಣೆ ನಡೆಯಿತು.