ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭ
ಚಾಮರಾಜನಗರ

ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭ

January 4, 2019

ಚಾಮರಾಜನಗರ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018- 19ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜ. 15ರವರೆಗೆ ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ 2,897 ರೂ.ಗಳಂತೆ ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತ ರಿಂದ ಮಾತ್ರ ರಾಗಿ ಖರೀದಿಸಲಾಗು ತ್ತಿದ್ದು, ಗರಿಷ್ಠ 75 ಕ್ವಿಂಟಾಲ್‍ಗೆ ಮೀರದಂತೆ ರೈತರಿಂದ ಖರೀದಿ ಮಾಡಲಾಗುತ್ತದೆ. ರೈತರು ಬೆಳೆದಿರುವ ರಾಗಿಯನ್ನು ನೋಂದಣಿ ಕೇಂದ್ರ ದಲ್ಲಿ ಆನ್‍ಲೈನ್ ಮೂಲಕ ಅಧಿಕೃತವಾಗಿ ನೋಂದಣಿ ಮಾಡಿದಂತಹ ರೈತರಿಂದ ನೇರವಾಗಿ ಖರೀದಿ ಏಜೆನ್ಸಿಗಳ ಮೂಲಕ ರಾಗಿ ಖರೀದಿಸುವ ವ್ಯವಸ್ಥೆ ಜಾರಿಗೊಳಿ ಸಲು ತೀರ್ಮಾನಿಸಲಾಗಿದೆ. ಖರೀದಿಸುವ ರಾಗಿಗೆ ಸಂಗ್ರಹಣಾ ಏಜೆನ್ಸಿಯಾಗಿ ಕರ್ನಾ ಟಕ ರಾಜ್ಯ ಉಗ್ರಾಣ ನಿಗಮವನ್ನು ನೇಮಕ ಮಾಡಲಾಗಿದೆ.

ಜ.16ರರಿಂದ ಖರೀದಿ ಆರಂಭ: ಜ. 16ರಿಂದ ಮಾ. 31ರವರೆಗೆ ನೋಂದಾ ಯಿಸಿದ ರೈತರಿಂದ ರಾಗಿಯನ್ನು ಖರೀ ದಿಸಿ ಖರೀದಿ ಏಜೆನ್ಸಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ರಾಗಿಯನ್ನು ತಂದು ನೋಂದಾವಣಿ ಮಾಡುವ ಕೇಂದ್ರದಲ್ಲೇ ಸ್ಯಾಂಪಲ್ ಹಾಜರುಪಡಿಸಬೇಕು. ರೈತರು ಅವರ ಸ್ವಂತ ಖರ್ಚಿನಲ್ಲಿ ಖರೀದಿ ಮತ್ತು ಸಂಗ್ರಹ ಮಾಡುವ ಸಂಗ್ರಹಣಾ ಸ್ಥಳಕ್ಕೆ ತರಬೇಕು. ರಾಗಿಯನ್ನು ಒಂದು ಬಾರಿ ಉಪ ಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ ಸಾಮಥ್ರ್ಯದ) ಗೋಣಿ ಚೀಲಗಳಲ್ಲಿ ತರಬೇಕು.

ರಾಗಿಯ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟ ಗುಣಮಟ್ಟದ ಪರೀಕ್ಷಕರು, ಗುಣಮಟ್ಟ ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು (ಎಫ್.ಎ.ಕ್ಯೂ) ದೃಢ ಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟದ ಸರಿಯಿಲ್ಲವೆಂದು ದೃಢಿಪಡಿ ಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ.
ಬೆಳೆ ದೃಢೀಕರಣ ಪತ್ರಗಳು: ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ರೈತರು 2018-19ನೇ ಸಾಲಿನ ಕಂಪ್ಯೂಟರ್ ಪಹಣಿ ಮತ್ತು 2018ನೇ ಸಾಲಿನಲ್ಲಿ ಖಾರೀಫ್ ಮುಂಗಾರಿನಲ್ಲಿ ಎಷ್ಟು ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ ಎಂಬ ಬಗ್ಗೆ ಹಾಗೂ ರೈತರ ಮಾದರಿ ಸಹಿಯನ್ನು ಗ್ರಾಮ ಲೆಕ್ಕಾಧಿ ಕಾರಿಗಳು ದೃಢೀಕರಿಸಿರುವ ಪತ್ರಗಳನ್ನು ಕಂದಾಯ ನಿರೀಕ್ಷಕ (ಆರ್.ಐ) ಅವರಿಂದ ಅನುಮೋದನೆಗೆ ಒಳಗೊಂಡ ದಾಖಲೆ ಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಬೇಕು. ರೈತರು ನೀಡುವ ಒಂದು ಬಾರಿ ಉಪಯೋಗಿಸಿದ ಉತ್ತಮ ಮಟ್ಟದ ಚೀಲಕ್ಕೆ (ಒಂದು ಕ್ವಿಂಟಾಲ್) 12 ರೂ. ಪಾವತಿಸಲಾಗುವುದು.

ರೈತರ ಆಧಾರ್ ದೃಢೀಕೃತ ಸಂಖ್ಯೆಯ ನೋಂದಾವಣೆ ಕಡ್ಡಾಯವಾಗಿದ್ದು, ಹಾಗೂ ಅಂತಹ ರೈತರಿಂದ ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ದಲ್ಲಿ ಖರೀದಿಸಲು ಪ್ರತಿ ಖರೀದಿ ಕೇಂದ್ರದಲ್ಲಿ ಅಂತರ್‍ಜಾಲ ವ್ಯವಸ್ಥೆಯನ್ನು ಅಳವಡಿಸ ಲಾಗುವುದು. ರಾಗಿ ಖರೀದಿಸಿದ ಹಣ ವನ್ನು ರೈತರ ಬ್ಯಾಂಕ್ ಖಾತೆಗೆ ನೆಫ್ಟ್ (ಎನ್‍ಇ ಎಫ್‍ಟಿ) ಮೂಲಕ ನೇರವಾಗಿ ಜಮೆ ಮಾಡಲಾಗುತ್ತದೆ. ರೈತರು ಬ್ಯಾಂಕ್ ಖಾತೆಯ ವಿವರ ಐಎಫ್‍ಎಸ್‍ಸಿ ಕೋಡ್ ಸೇರಿದಂತೆ ಇತರೆ ವಿವರಗಳನ್ನು ದೃಢೀ ಕರಿಸಿ ನೀಡಬೇಕು.

ರೈತರೇ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಮಧ್ಯವರ್ತಿಗಳನ್ನು ಬಳಸುವುದು ಕಾನೂನು ಬಾಹಿರವಾಗಿದೆ. ಕಂದಾಯ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿ, ಗುಣಮಟ್ಟ ಅಧಿಕಾರಿ ಗಳು ನೀಡುವ ದೃಢೀಕರಣದೊಂದಿಗೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು. ಖರೀದಿಗೆ ಸಂಬಂಧಿಸಿದ ಯಾವುದೇ ದೂರು ಗಳಿದ್ದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರು, ತಹಸೀಲ್ದಾರರು, ಉಗ್ರಾಣ ವ್ಯವಸ್ಥಾಪಕರ ಗಮನಕ್ಕೆ ತರಬಹುದು. ದೂರುಗಳನ್ನು ದೂರವಾಣಿ ಸಂಖ್ಯೆ 08226-224660, ಮೊಬೈಲ್ 97378 75870, 7760967049ಗೆ ಕರೆಮಾಡಿ ನೀಡಬಹುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »