ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು
ಮೈಸೂರು

ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು

January 4, 2019

ಮೈಸೂರು: ಖಾಸಗಿ ಬಸ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು-ಟಿ. ನರಸೀಪುರ ರಸ್ತೆಯ ದುದ್ದಗೆರೆ ಕ್ರಾಸ್‍ನಲ್ಲಿ ಗುರುವಾರ ಸಂಜೆ ನಡೆದಿದೆ. ಮೈಸೂರು ತಾಲೂಕು ವರುಣಾ ಹೋಬಳಿ ಪುಟ್ಟೇಗೌಡನಹುಂಡಿ ನಿವಾಸಿ ಶಿವರಾಜಪ್ಪ ಎಂಬುವರ ಪುತ್ರ ಮಹದೇವಪ್ಪ(55) ಮೃತಪಟ್ಟವರಾಗಿದ್ದಾರೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೈಸೂರಿನಿಂದ ಟಿ.ನರಸೀಪುರ ಕಡೆಗೆ ವೇಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುವು ದಾಗಿ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Translate »