ಮೈಸೂರು: 2ನೇ ಸುತ್ತಿನ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಜನವರಿ 12ರವರೆಗೆ ಮೈಸೂರು ಜಿಲ್ಲಾ ದ್ಯಂತ ಹಮ್ಮಿಕೊಂಡಿದ್ದು, ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿದ್ದೇವೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ತಿಳಿಸಿದ್ದಾರೆ.
ಮೈಸೂರು ಜಿಲ್ಲಾದ್ಯಂತ ಜ.2ರಿಂದ ಆರಂಭವಾಗಿದೆ. “ಕ್ಷಯರೋಗವನ್ನು ಶತ್ರು ವನ್ನಾಗಿಸಿ, ರೋಗಿಯನ್ನು ಮಿತ್ರರಂತೆ ಕಾಣಿರಿ” ಎಂಬ ಘೋಷಣೆಯೊಂದಿಗೆ ಕ್ರಿಯಾ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಫ ಪರೀಕ್ಷೆ, ಎಕ್ಸ್‍ರೇ ಪರೀಕ್ಷೆಗಳನ್ನು ಉಚಿತ ವಾಗಿ ನಡೆಸಲಾಗುತ್ತದೆ. ಪತ್ತೆಯಾದ ರೋಗಿಗಳಿಗೆ ಉಚಿತವಾಗಿ ಔಷಧಿ ಒದಗಿಸ ಲಾಗುತ್ತದೆ. ಸುಮಾರು 50ರಿಂದ 60 ಸಾವಿರ ಜನಸಂಖ್ಯೆಗೆ ತಂಡಗಳನ್ನು ಮಾಡಿ ಈ ಆಂದೋಲನ ಹಮ್ಮಿಕೊಳ್ಳ ಲಾಗಿದೆ ಎಂದು ಡಾ.ರವಿ ತಿಳಿಸಿದ್ದಾರೆ.
2 ವಾರ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸು ವುದು, ವಿಶೇಷವಾಗಿ ರಾತ್ರಿ ವೇಳೆ ಜ್ವರ, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿವೆ. ನಿರಂತರ ಚಿಕಿತ್ಸೆ ಯಿಂದ ಕ್ಷಯರೋಗವನ್ನು ಗುಣ ಪಡಿಸ ಬಹುದು ಎಂದು ಅವರು ತಿಳಿಸಿದ್ದಾರೆ.
ಕೊಳಚೆ ಪ್ರದೇಶ, ಪರಿಶಿಷ್ಟ ಜಾತಿ, ಪಂಗಡ, ಬೀಡಿ ಕಾರ್ಮಿಕರು, ನೇಕಾರ ಸಮುದಾಯ, ಹೆಚ್.ಐ.ವಿ. ಸೋಂಕಿತರು, ಮಧುಮೇಹ, ತಂಬಾಕು ಸೇವನೆ ಮಾಡು ವವರಿಗೆ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಅವರು ತಿಳಿಸಿದ್ದಾರೆ.