ಭಾರತ್ ಬಂದ್: 2ನೇ ದಿನ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ
ಚಾಮರಾಜನಗರ

ಭಾರತ್ ಬಂದ್: 2ನೇ ದಿನ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ

January 10, 2019

ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ, ಎಂದಿನಂತೆ ಜನ ಜೀವನ
ಚಾಮರಾಜನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ರಜೆ ಘೋಷಣೆಯಾಗಿದ್ದ ಶಾಲಾ-ಕಾಲೇ ಜುಗಳು ಇಂದು ತೆರೆದಿತ್ತು. ಬಸ್-ಆಟೋ ಸಂಚಾರ ಸಹಜವಾಗಿತ್ತು. ಬ್ಯಾಂಕ್, ಸರ್ಕಾರಿ ಕಚೇರಿ, ಪೆಟ್ರೋಲ್‍ಬಂಕ್, ಚಿತ್ರ ಮಂದಿರ, ಹೊಟೇಲ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಉಳಿದಂತೆ ಯಳಂ ದೂರು, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಬಂದ್‍ನ ಪರಿಣಾಮವಿ ಲ್ಲದೆ ಜನಜೀವನ ಸಹಜವಾಗಿತ್ತು.

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಅಂಗನವಾಡಿ, ಆಶಾ, ಬಿಸಿಯೂಟ ನೌಕ ರರು, ಬಿಎಸ್‍ಎನ್‍ಎಲ್ ನೌಕರರು, ವಿದ್ಯುತ್ ಕಾರ್ಮಿಕ ಸಂಘಟನೆ ಸೇರಿದಂತೆ ಇತರೆ ನಾನಾ ಸಂಘಟನೆಯ ನೂರಾರು ನೌಕ ರರು ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಮನವಿ ಸಲ್ಲಿಸಿದರು.

ದೇಶದ ಎಲ್ಲಾ ನೌಕರರಿಗೂ ಸಾಮಾ ಜಿಕ ಭದ್ರತೆ ನೀಡಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ರದ್ದುಪಡಿ ಸಬೇಕು. ಕಾರ್ಮಿಕರನ್ನು ಗುಲಾಮರನ್ನಾಗಿ ಸುವ ವಿಧೇಯಕಕ್ಕೆ ಕಾನೂನು ತಿದ್ದುಪಡಿ ತರಬಾರದು. 18 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು. ಹೊಸ ಉದ್ಯೋಗ ಗಳನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಡೆಗ ಟ್ಟಬೇಕು ಎಂದು ಆಗ್ರಹಿಸಿದರು.

ಇಬ್ಬರು ಅಸ್ವಸ್ಥ: ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಸಿಯೂಟ ನೌಕರರೊಬ್ಬರು ಹಾಗೂ ಆಶಾ ಕಾರ್ಯಕರ್ತರೊಬ್ಬರು ಕುಸಿದು ಬಿದ್ದು ಅಸ್ವಸ್ಥಗೊಂಡರು. ತಾಲೂಕಿನ ಚಂದ ಕವಾಡಿ ಗ್ರಾಮದ ಆಶಾ ಕಾರ್ಯಕರ್ತೆ ಲಕ್ಷ್ಮೀ, ಮಲ್ಲಯ್ಯನಪುರ ಗ್ರಾಮದ ಬಿಸಿ ಯೂಟ ನೌಕರರಾದ ಗೌರಮ್ಮ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಜಿಲ್ಲಾ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜೆ.ಸುರೇಶ್, ಅಧ್ಯಕ್ಷೆ ಕೆ.ಸುಜಾತಾ, ಖಜಾಂಚಿ ಆರ್.ಜಿ. ರೇವಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಪುಟ್ಟ ಬಸಮ್ಮ, ಉಪಾಧ್ಯಕ್ಷರಾದ ಎಸ್.ಪಾರ್ವತಮ್ಮ, ರಾಜಮ್ಮ, ನಾಗಮಣಿ, ನಾಗವೇಣಿ, ಕಾಂಚನಾ, ಮೀನಾ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶಿವಮ್ಮ, ಆಶಾ ಕಾರ್ಯ ಕರ್ತೆಯರ ಸಂಘದ ಅಧ್ಯಕ್ಷೆ ಸವಿತಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಅಂಚೆ ನೌಕರರ ಪ್ರತಿಭಟನೆ: ಚಾಮರಾಜ ನಗರದಲ್ಲಿ ಅಂಚೆ ನೌಕರರ ಪ್ರತಿಭಟನೆ 2ದಿನವೂ ಮುಂದುವರೆಯಿತು. ನಗರದ ಮುಖ್ಯ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜೆಸಿಐ ಸಂಘಟನೆಯ ಅಧ್ಯಕ್ಷ ಆರ್.ಶ್ರೀನಿವಾಸನಾಯ್ಕ್, ನೌಕರರಾದ ಬಿ.ಮಹದೇವಸ್ವಾಮಿ, ಆರ್.ಮಂಜುನಾಥ, ಮಹೇಂದ್ರ, ಕೆ.ಎಂ. ಶಿವಮಲ್ಲೇಗೌಡ, ಬಿ.ಎಸ್.ಬಸವರಾಜಪ್ಪ, ವೆಂಕಟೇಶ್, ಜಯರಾಜ್, ಮರಿಸ್ವಾಮಿ ಇತರರು ಪಾಲ್ಗೊಂಡಿದ್ದರು.

ಕೊಳ್ಳೇಗಾಲ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನ ವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಮರಡಿಗುಡ್ಡದ ಬಳಿ ಜಮಾ ಯಿಸಿದ್ದ ನೂರಾರು ಕಾರ್ಯಕರ್ತೆ ಯರು ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ತಾಲೂಕು ಕಚೇರಿ ಯಲ್ಲಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತರ ಸೇವಾ ಹಿರಿತನ ಪರಿ ಗಣಿಸಿ ಗೋವಾ ಸರ್ಕಾರದ ಮಾದರಿ ಯಲ್ಲಿಯೇ ಗೌರವ ಧನ ನಿಗದಿಗೊಳಿ ಸಬೇಕು. ಕೇಂದ್ರ ಸರ್ಕಾರ ಘೋಷಿಸಿ ರುವ 18ಸಾವಿರ ಕನಿಷ್ಠ ವೇತನ ಜಾರಿ ಗೊಳಿಸಿ ಇಎಸ್‍ಐ, ಗ್ರಾಚ್ಯುಯಿಟಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯ ಕರ್ತೆಯರ ಸಂಘದ ಉಪಾಧ್ಯಕ್ಷೆ ಚಿಕ್ಕತಾ ಯಮ್ಮ, ಕಾರ್ಯದರ್ಶಿ ವಿಜಯಲಕ್ಷ್ಮಿ, ಕಾರ್ಯಕರ್ತೆಯರಾದ ಸರಳ, ಪ್ರೇಮ ಕುಮಾರಿ, ಪುಟ್ಟಸಿದ್ದಮ್ಮ, ಚಂದ್ರಮ್ಮ, ಸೆಲ್ವಿ, ಗಿರಿಜಮ್ಮ, ಮಹದೇವಮ್ಮ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಲೋಚನ, ಜಿಲ್ಲಾ ಕಾರ್ಯದರ್ಶಿ ಉಮಾಮಹೇಶ್ವರಿ, ಎಐಸಿಯುಟಿ ಸಂಚಾ ಲಕ ಪುಟ್ಟರಾಜು, ಮಹದೇವಮ್ಮ, ಸುಂದ್ರಮ್ಮ, ಲೀಲಾವತಿ, ಶಾಂತಮ್ಮ, ರತ್ನಮ್ಮ, ರೋಜಾ, ಸೌಭಾಗ್ಯ, ಉಮಾ ಮಹೇಶ್ವರಿ, ಚಂದ್ರಮ್ಮ, ಸುಮತಿ, ಕವಿತಾ ಮತ್ತಿತರರು ಇದ್ದರು.

Translate »