ಇಬ್ಬರು ಹಲ್ಲೆ ಆರೋಪಿಗಳಿಗೆ  5 ವರ್ಷ ಜೈಲು ಶಿಕ್ಷೆ
ಮೈಸೂರು

ಇಬ್ಬರು ಹಲ್ಲೆ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ

January 10, 2019

ಮೈಸೂರು: ಚಾಕುವಿನಿಂದ ಹಲ್ಲೆ ಮಾಡಿ ವ್ಯಕ್ತಿಯ ಗಾಯಗೊಳಿಸಿದ್ದ ಇಬ್ಬರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.

ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಾಗೇಂದ್ರ ಅಲಿಯಾಸ್ ಬಿ.ಸಿ.ನಾಗೇಂದ್ರಮೂರ್ತಿ ಹಾಗೂ ತಂದೆ ಸೊಂಟ್ರಹಳ್ಳಿ ಚಂದ್ರಶೇಖರ್ ಅಲಿಯಾಸ್ ಶೇಖರ್ ಶಿಕ್ಷೆಗೊಳಗಾದ ಹಲ್ಲೆ ಆರೋಪಿಗಳು. 2013ರ ಮೇ 30ರಂದು ಸಂಜೆ 5.30 ಗಂಟೆ ವೇಳೆಗೆ ಗ್ರಾಮದ ಭಿಕ್ಷಾ ಮಠದ ಸಮೀಪ ಮಹದೇವಪ್ಪನವರ ಹೋಟೆಲ್ ಬಳಿ ಟೀ ಕುಡಿಯುತ್ತಿದ್ದಾಗ ಹಣಕಾಸು ವಿಷಯದ ಸಂಬಂಧ ನಾಗೇಂದ್ರ ಮತ್ತು ಚಂದ್ರಶೇಖರ್ ಅವರು ಚಾಕು ಹಿಡಿದು ಬಿ.ರಾಜು ಎಂಬುವರ ಮೇಲೆ ಹಲ್ಲೆ ಮಾಡಿ, ಗಾಯಗೊಳಿಸಿದ್ದರು.

ತಿ.ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಯ್ಯ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಗಳಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಕಲಂ 326 ರೆಡ್‍ವಿತ್ 34 ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ, ತಲಾ 5 ಸಾವಿರ ರೂ ದಂಡ, ಕಲಂ 504 ರೆಡ್‍ವಿತ್ 34ಗೆ 6 ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ 1 ಸಾವಿರ ರೂ ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಭಾರ ಸರ್ಕಾರಿ ಅಭಿಯೋಜಕ ಪಿ.ಬಿ.ಧರೆಣ್ಣವರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Translate »