ಕೆಲ ದೃಶ್ಯ ಮಾಧ್ಯಮಗಳ ವಿರುದ್ಧ ಉಪ್ಪಾರರ ಪ್ರತಿಭಟನೆ
ಚಾಮರಾಜನಗರ

ಕೆಲ ದೃಶ್ಯ ಮಾಧ್ಯಮಗಳ ವಿರುದ್ಧ ಉಪ್ಪಾರರ ಪ್ರತಿಭಟನೆ

January 8, 2019

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವ ಕೆಲವು ಸುದ್ದಿ ಚಾನಲ್‍ಗಳ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ವಾರ್ತಾ ವಾಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ್ಪಾರ ಸಮಾಜದಿಂದ ನಗರದಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಯಿತು.

ಜಿಲ್ಲಾ ಉಪ್ಪಾರ ಯುವಕರ ಸಂಘದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದರ ಉಪ್ಪಾರ ಸಮಾಜದವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸಚಿವ ಸಿ.ಪುಟ್ಟರಂಗಶೆಟ್ಟಿ ಬೆಂಬಲಿಗರು, ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಕೆಟ್ಟ ಪದ ಗಳಿಂದ ನಿಂದಿಸಿದ ಸುದ್ದಿ ವಾಹಿನಿಗಳು ಮತ್ತು ವಾರ್ತಾ ವಾಚಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿಬೀದಿ, ಸಂತೇಮರ ಹಳ್ಳಿ ವೃತ್ತ, ಡಿವಿಯೇಷನ್ ರಸ್ತೆಯ ಮೂಲಕ ಭುವನೇಶ್ವರಿ ವೃತ್ತದಲ್ಲಿ ಸಮಾವೇಶ ಗೊಂಡು, ವಾರ್ತಾವಾಚಕರ ಭಾವಚಿತ್ರ ಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜೋಡಿರಸ್ತೆ ಮೂಲಕ ಜಿಲ್ಲಾಡ ಳಿತ ಭವನಕ್ಕೆ ತೆರಳಿ ಕೆಲಕಾಲ ಧರಣಿ ನಡೆಸಿದರು. ತದನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವಿಧಾನಸೌಧದಲ್ಲಿ ಜ.4ರಂದು 25.76 ಲಕ್ಷ ರೂ. ವ್ಯಕ್ತಿಯೊಬ್ಬನಲ್ಲಿ ಪತ್ತೆಯಾಗಿತ್ತು. ಆ ವ್ಯಕ್ತಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮೋಹನ್ ಎಂಬುದು ತಿಳಿದ ನಂತರ ಸುದ್ದಿಯನ್ನು ಬಿತ್ತರಿಸಿದ ಎರಡು ಖಾಸಗಿ ಸುದ್ದಿ ವಾಹಿನಿಗಳು ಸಚಿವ ಪುಟ್ಟ ರಂಗಶೆಟ್ಟಿ ಅವರನ್ನು ಅಸಂವಿಧಾನಿಕ ಪದಗಳಿಂದ ನಿಂದಿಸಿದ್ದು, ಆ ಮೂಲಕ ಸಚಿವರ ಗೌರವಕ್ಕೆ ಕುಂದುಂಟು ಮಾಡಿ ದ್ದಾರೆ ಎಂದು ಪ್ರತಿಭಟನಾಕಾರರು ದೂರಿ ದರು. ಸಚಿವರನ್ನು ಕೆಟ್ಟಪದಗಳಿಂದ ನಿಂದಿಸಿದ ಆ ಎರಡು ಚಾನಲ್‍ಗಳ ಮಾನ್ಯತೆ ರದ್ದುಪಡಿಸಿ ಸುದ್ದಿ ವಾಚಿಸಿದ ವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಎಂ.ಜಯಕುಮಾರ, ಕಾರ್ಯ ದರ್ಶಿ ಸಿ.ಎಸ್.ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಸದಸ್ಯರಾದ ಆರ್.ಎಂ.ರಾಜಪ್ಪ, ಆರ್.ಪಿ. ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷರಾದ ಸೈಯದರ ಸುಹೇಲ್ ಆಲಿಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿ ಕುಮಾರ, ತಾಪಂ ಮಾಜಿ ಸದಸ್ಯರಾದ ಚಿಕ್ಕಮಹ ದೇವು, ಆರ್.ಮಹದೇವು, ಮುಖಂಡ ರಾದ ಕೊತ್ತಲವಾಡಿ ಸೋಮಲಿಂಗಪ್ಪ, ಶ್ರೀನಿವಾಸನಾಯ್ಕ, ಸ್ವಾಮಿ, ಬಾಗಳಿ ರೇವಣ್ಣ, ಲತಾಜಯಣ್ಣ, ಉಮೇಶ್, ಭಾಗ್ಯಮ್ಮ, ಲಿಂಗರಾಜು, ಮುನ್ನ, ಗುರುಸ್ವಾಮಿ, ಮಹದೇವಸ್ವಾಮಿ, ಸಂತೋಷ, ಶಂಭಪ್ಪ, ನಟರಾಜಮೂರ್ತಿ ಸೇರಿದಂತೆ ಸಾಕಷ್ಟು ಮಂದಿ ಪ್ರತಿಭಟನೆಯಲ್ಲಿದ್ದರು.

Translate »