ಚಾಮರಾಜನಗರ: ಜನತಾ ದರ್ಶನದಲ್ಲಿ ಅರ್ಜಿ ನೀಡಿರುವ ಅಭ್ಯರ್ಥಿಗಳು ಹಾಗೂ ಜಿಲ್ಲೆಯ ಇತರೆ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ನ.23ರಂದು ಬೆಳಿಗ್ಗೆ 9.30ಕ್ಕೆ ನಗರದ ಜಿಲ್ಲಾಡಳಿತ ಭವನದಲ್ಲಿರÀುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ಮೈಸೂರಿನ ಖಾಸಗಿ ಕಂಪನಿಗಳಾದ ಐಟಿಸಿ ಪ್ರೈ. ಲಿ., ಹಿಂದೂಜಾ ಗ್ಲೋಬಲ್ ಸಲ್ಯೂಷನ್, ಲೇಬರ್ ನೆಟ್ ಪ್ರೈ. ಲಿ., ನಡ್ಜ್ ಫೌಂಡೇಷನ್, ಯುರೇಕಾ ಫೋಬ್ರ್ಸ್, ವಿಜಿಬಿ ಎಂಟರ್‍ಪ್ರೈಸಸ್ ಹಾಗೂ ಇತರೆ ಕಂಪನಿಗಳು ಭಾಗವಹಿಸಲಿವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ,…
ಲೋಕಸಭಾ ಚುನಾವಣೆ ಚಾಮರಾಜನಗರ: ಕಾಂಗ್ರೆಸ್‍ನಿಂದ ಧ್ರುವನಾರಾಯಣ್, ಬಿಜೆಪಿಯಿಂದ …?
November 16, 2018ಚಾಮರಾಜನಗರ, ನ.15- ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಆರ್. ಧ್ರುವನಾರಾಯಣ್ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್‍ಗೆ ಪ್ರಬಲ ಎದುರಾಳಿ ಆಗಿರುವ ಬಿಜೆಪಿಯಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ಕ್ಷೇತ್ರಾದ್ಯಂದ ಈಗಾಗಲೇ ಆರಂಭವಾಗಿದೆ. ಲೋಕಸಭೆಗೆ 2019ರ ಏಪ್ರಿಲ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರಿ ನಡೆಸುತ್ತಿವೆ. ಎಲ್ಲಾ ರೀತಿಯಲ್ಲೂ ಅಳೆದು-ಸುರಿದು ಅಭ್ಯರ್ಥಿಗಳ ಆಯ್ಕೆ ಗಾಗಿ ಪಕ್ಷಗಳು ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ….
ಜವರಾಯನ ಮನೆಗೆ ಕರೆದೊಯ್ದ ನೂತನ ಬೈಕ್! ರಸ್ತೆ ಅಪಘಾತದಲ್ಲಿ ಸವಾರ ಸಾವು, ಬೇಗೂರು ಬಳಿ ಘಟನೆ
November 16, 2018ಬೇಗೂರು: ಆತ ಜೀವನದಲ್ಲಿ ಹಲವು ಕನಸು ಕಟ್ಟಿಕೊಂಡಿದ್ದನು… ಹೊಸ ಬೈಕ್ ಖರೀದಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದನು… ಆದರೆ, ಆತನ ಸಂಭ್ರಮ ಒಂದೇ ವಾರದಲ್ಲಿ ಅಂತ್ಯಕೊಂಡಿದೆ… ನೂತನ ಬೈಕ್‍ನಲ್ಲಿ ದೇವಸ್ಥಾನ, ಬಂಧು ಬಳಗದವರ ಮನೆಗೆ ಓಡಾಡಬೇಕಿದ್ದ ಆತ ಜವರಾಯನ ಮನೆ ಸೇರಿರುವ ಹೃದಯ ವಿದ್ರಾಹಕ ಘಟನೆ ಬುಧವಾರ ರಾತ್ರಿ ಇಲ್ಲಿನ ಸಮೀಪದ ಹಿರಿಕಾಟಿ ಗೇಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಉಪ್ಪನಹಳ್ಳಿ ಗ್ರಾಮದ ನಿವಾಸಿ ರಾಜೇಶ್(25) ಬೈಕ್ ಖರೀದಿಸಿದ ಒಂದೇ ವಾರದಲ್ಲಿ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಘಟನೆಯ…
ಬುದ್ಧಿಮಾಂದ್ಯ ಶಾಲೆಗೆ ನೆರವು ನೀಡಲು ಮನವಿ
November 16, 2018ಗುಂಡ್ಲುಪೇಟೆ: ಬುದ್ಧಿಮಾಂದ್ಯ ಮಕ್ಕಳ ಆರೋಗ್ಯ, ಹಿತರಕ್ಷಣೆ ಮತ್ತು ವಿದ್ಯಾಭ್ಯಾಸ ಹೊಣೆ ಹೊತ್ತಿರುವ ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ದಾನಿಗಳು ಉದಾರವಾಗಿ ನೆರವು ನೀಡ ಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು ಮನವಿ ಮಾಡಿದರು. ಪಟ್ಟಣದ ನಾಯಕರ ಬೀದಿಯಲ್ಲಿರುವ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ದಿನಾಚರಣೆಯಲ್ಲಿ ಜವಾಹರ್‍ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಆಗುಹೋಗುಗಳ ಪರಿಜ್ಞಾನವೇ ಇಲ್ಲದೇ ಬೆಳೆಯುತ್ತಿರುವ ಬುದ್ಧಿಮಾಂದ್ಯ ಮಕ್ಕಳ ಹಿತರಕ್ಷಣೆ ಮತ್ತು ವಿದ್ಯಾಭ್ಯಾಸದ ಹೊಣೆಯನ್ನು…
ಗೃಹಿಣಿ ಆತ್ಮಹತ್ಯೆ
November 16, 2018ಚಾಮರಾಜನಗರ: ನಾದಿನಿಯ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಾಲೂಕಿನ ಹಂಡ್ರಕಳ್ಳಿಮೋಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವಶೆಟ್ಟಿ ಎಂಬುವವರ ಪತ್ನಿ ಭಾನುಮತಿ (35) ಆತ್ಮಹತ್ಯೆ ಮಾಡಿಕೊಂಡವರು. ವಿವರ: ಮಹದೇವಶೆಟ್ಟಿ ಹಾಗೂ ಭಾನುಮತಿ ದಂಪತಿ ವಾಸವಿದ್ದ ಮನೆಯಲ್ಲಿಯೇ ಮಹದೇವ ಶೆಟ್ಟಿ ಅವರ ಸಹೋದರಿ (ಭಾನುಮತಿ ಅತ್ತಿಗೆ) ಸಾಕಮ್ಮ ವಾಸವಿದ್ದರು. ಮನೆಯಲ್ಲಿ ಭಾನುಮತಿ ಹಾಗೂ ಸಾಕಮ್ಮ ಅವರಿಗೆ ಹೊಂದಣಿಕೆ ಇರಲಿಲ್ಲ. ಇದರಿಂದ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಭಾನುಮತಿ ಅವರು ಬುಧವಾರ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
November 14, 2018ಚಾಮರಾಜನಗರ: ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಾ.ನಗರದಲ್ಲಿ ಮಂಗಳವಾರ ರೈತಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆಯ, ಮುಖಂಡರು, ಪದಾಧಿ ಕಾರಿಗಳು ಹಾಗೂ ರೈತರು ಸಮಾ ವೇಶಗೊಂಡು, ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಅಲ್ಲಿಂದ…
ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣ: 5 ಲಕ್ಷ ರೂ. ನೀಡಲು ರೈತ ಆತ್ಮಹತ್ಯಾ ಸಮಿತಿ ಸಭೆಯಲ್ಲಿ ನಿರ್ಣಯ
November 14, 2018ಕೊಳ್ಳೇಗಾಲ: ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರ ಕುಟುಂಬಗಳಿಗೂ ತಲಾ 5 ಲಕ್ಷ ರೂ. ಪರಿಹಾರ ನೀಡಲು ರೈತ ಆತ್ಮಹತ್ಯಾ ಪರಿ ಹಾರ ಸಮಿತಿಯು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಸೆಪ್ಟಂಬರ್ 19ರಲ್ಲಿ ತೇರಂಬಳ್ಳಿ ಗ್ರಾಮದ ತಮ್ಮ ಮನೆಯಲ್ಲೆ ರೈತ ಲೋಕೇಶ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿಯಲ್ಲಿ ಕೆಂಪನಪಾಳ್ಯ ಗ್ರಾಮ ದಲ್ಲಿ ಸೆಪ್ಟಂಬರ್ 25ರಂದು ರೈತ ಗುರು ಸ್ವಾಮಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಎರಡು ರೈತ ಕುಟುಂಬ ಗಳಿಗೂ…
ಆಟೋ ಸಂಘಟನೆಯಿಂದ ರಾಜ್ಯೋತ್ಸವ
November 14, 2018ಚಾಮರಾಜನಗರ: ಆಟೋಚಾಲಕರು ಹಾಗೂ ಆಟೋ ಮಾಲೀಕರಿಂದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ನಾಡಧ್ವಜಾರೋಹಣವನ್ನು ನಿವೃತ್ತ ಯೋಧ ಮಂಜುನಾಥ್ ನೆರವೇರಿಸಿ ಮಾತನಾಡಿ, ಆಟೋ ಚಾಲಕರು, ಮಾಲೀಕರು ಒಂದಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ಇದೇ ರೀತಿ ಆಟೋ ಚಾಲಕರು ಸಂಘಟಿತರಾಗಬೇಕೆಂದು ಹೇಳಿದರು. ಆಟೋ ಚಾಲಕರು ತಾವು ಧರಿಸುವ ಸಮವಸ್ತ್ರಕ್ಕೆ ತನ್ನದೇ ಆದ ಮಹತ್ವವಿದ್ದು, ಚಾಲನೆ ಮಾಡುವಾಗ ತಪ್ಪದೇ ಸಮವಸ್ತ್ರ ಧರಿಸಬೇಕು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ಅನಾರೋಗ್ಯ ಪೀಡಿತರನ್ನು, ಗರ್ಭಿಣಿಯರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿ ಜೀವ…
ಕಳ್ಳಿದೊಡ್ಡಿಯಲ್ಲಿ ಗಾಂಜಾ ವಶ
November 14, 2018ಹನೂರು: ಸಮೀಪದ ಕಳ್ಳಿದೊಡ್ಡಿ ಗ್ರಾಮದಲ್ಲಿ ಜೋಳದ ಫಸಲಿನೊಂದಿಗೆ ಅಕ್ರ ಮವಾಗಿ ಬೆಳೆದಿದ್ದ ಗಾಂಜಾವನ್ನು ಹನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸ್‍ಐ ನಾಗೇಶ್ ನೇತೃ ತ್ವದ ತಂಡ 4 ಕೆಜಿ ಗಾಂಜಾ ವಶಪಡಿಸಿಕೊಂಡು ಶಿವರಾಮು ಎಂಬುವರನ್ನು ಬಂಧಿಸಿ ಪ್ರಕ ರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಹೆಡ್‍ಕಾನ್ ಸ್ಟೇಬಲ್ ಗಳಾದ ರಾಮದಾಸ್, ಸಿದ್ದೇಶ್, ಕಾನ್ ಸ್ಟೇಬಲ್‍ಗಳಾದ ವಿಶ್ವ, ಬಿಳಿಗೌಡ, ನಂಜುಂಡ, ಪ್ರದೀಪ್‍ಕುಮಾರ್, ರಾಜು…
ಬೈಕ್ ಡಿಕ್ಕಿ; ಪ್ರವಾಸಿಗ ಸಾವು
November 14, 2018ಗುಂಡ್ಲುಪೇಟೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿಯೊಬ್ಬರು ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ ತಾಲೂಕಿನ ಹಂಗಳ ಸಮೀಪದ ಕಲ್ಲಿಗೌಡನಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ. ಮಹಾರಾಷ್ಟ್ರ ಮೂಲದ ನಿಖಿಲ್ ಭೀಮರಾವ್ (30) ಎಂಬುವರೇ ಮೃತ ಪಟ್ಟವರು. ಇವರು ಊಟಿ ಪ್ರವಾಸಕ್ಕಾಗಿ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಕಲ್ಲಿಗೌಡನಹಳ್ಳಿ ಗೇಟ್ ಸಮೀಪ ಮೂತ್ರ ವಿಸರ್ಜನೆಗೆಂದು ತಮ್ಮ ಟೆಂಪೆÇೀ ಟ್ರಾವಲರ್ ವಾಹನದಿಂದ ಕೆಳಗಿಳಿದು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ನಿಖಿಲ್ ಅವರ ಮುಖಕ್ಕೆ ಮತ್ತು ತಲೆಗೆ ಬಲವಾದ ಪೆಟ್ಟು…