ಚಾಮರಾಜನಗರ

ವನವಾಸಿ ಮಂದಿಗೆ ಬಿಲ್ಲುಗಾರಿಕೆ, ಅಥ್ಲೆಟಿಕ್ ಸ್ಪರ್ಧೆ
ಚಾಮರಾಜನಗರ

ವನವಾಸಿ ಮಂದಿಗೆ ಬಿಲ್ಲುಗಾರಿಕೆ, ಅಥ್ಲೆಟಿಕ್ ಸ್ಪರ್ಧೆ

October 30, 2018

ಗುಂಡ್ಲುಪೇಟೆ:  ವನವಾಸಿ ಕಲ್ಯಾಣಾಶ್ರಮವು ವನವಾಸಿ ಜನರ ಸಮಗ್ರ ಅಭಿವೃದ್ಧಿ ಮೂಲಕ ರಾಷ್ಟ್ರೀಯ ಭಾವೈಕ್ಯತೆಗೆ ಶ್ರಮಿಸುತ್ತಿದ್ದು, ವನವಾಸಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂ ಗಣದಲ್ಲಿ ವನವಾಸಿ ಕಲ್ಯಾಣಾಶ್ರಮದ ವತಿಯಿಂದ ಆಯೋಜಿಸಿದ್ದ ವನವಾಸಿ ಜನರ ಬಿಲ್ಲುಗಾರಿಕೆ ಹಾಗೂ ಅಥ್ಲೆಟಿಕ್ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಅರಣ್ಯ ಪ್ರದೇಶ ಗಳಲ್ಲಿ ನೆಲೆಸಿರುವ ವನವಾಸಿಗಳನ್ನು ನಗರ ಹಾಗೂ ಗ್ರಾಮವಾಸಿಗಳು ಪ್ರೀತಿ…

ಗಾಂಜಾ ಗಿಡ ವಶ: ಆರೋಪಿ ಸೆರೆ
ಚಾಮರಾಜನಗರ

ಗಾಂಜಾ ಗಿಡ ವಶ: ಆರೋಪಿ ಸೆರೆ

October 30, 2018

ಹನೂರು: ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12 ಗಾಂಜಾ ಗಿಡಗಳನ್ನು ವಶಪಡಿಸಿ ಕೊಂಡು ವ್ಯಕ್ತಿಯೋರ್ವ ನನ್ನು ಹನೂರು ಠಾಣಾ ಪೊಲೀ ಸರು ಬಂಧಿಸಿದ್ದಾರೆ. ಕಾಮ ಗೆರೆ ನಿವಾಸಿ ಮಾದೇವ ಬಂಧಿತ ಆರೋಪಿ. ಘಟನೆ ವಿವರ: ಮಾದೇವ ಗುಂಡಾಲ್ ಜಲಾಶಯದ ಬಳಿಯ ತನ್ನ ಜಮೀನಿನಲ್ಲಿ ಕಬ್ಬಿನ ಫಸಲಿನ ಮಧ್ಯ ಗಾಂಜಾ ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭಾನುವಾರ ಮಧ್ಯಾಹ್ನ ಹನೂರು ಠಾಣೆ ಇನ್ಸ್‍ಪೆಕ್ಟರ್ ಮೋಹಿತ್ ಸಹದೇವ್, ಮುಖ್ಯಪೇದೆಗಳಾದ ಸಿದ್ದೇಶ್, ಜಮೀಲ್, ಮಲ್ಲಿಕಾರ್ಜುನ, ರಾಮದಾಸ್, ಪೇದೆಗಳಾದ ರಾಜು, ಪ್ರದೀಪ್, ರಾಮಶೆಟ್ಟಿ,…

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ
ಚಾಮರಾಜನಗರ

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ

October 29, 2018

ಪಾಂಡವಪುರ: ತಾಲೂಕಿನ ಅರಳಕುಪ್ಪೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್.ಮಹ ದೇವು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 19 ಮಂದಿ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯ ಹಿಂದಿನ ಅಧ್ಯಕ್ಷ ಸಣ್ಣ ನಿಂಗೇಗೌಡರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಧಿಕಾರಿಗಳು ಚುನಾವಣೆಯನ್ನು ನಿಗದಿ ಪಡಿಸಿದ್ದರು. ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಎಸ್.ಮಹದೇವು ಹೊರತು ಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಓ ಮಹೇಶ್ ಅವರು, ಮಹದೇವು…

ಚಾಮರಾಜನಗರ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತ
ಚಾಮರಾಜನಗರ

ಚಾಮರಾಜನಗರ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತ

October 29, 2018

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವುವರು ಇನ್ನೂ ಧೂಳಿನಿಂದ ಮುಕ್ತರಾಗಿಲ್ಲ. ನಗರದ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ನೀರು ಶುದ್ಧೀಕರಣ ಘಟಕ ದವರೆಗಿನ 3.1 ಕಿ.ಮೀ ಉದ್ದದ ಏಕೈಕ ಜೋಡಿರಸ್ತೆಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿ ವೃದ್ಧಿಗೊಳಿಸಲಾಗುತ್ತಿದೆ. ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಭುವನೇಶ್ವರಿ ವೃತ್ತದಿಂದ ರಾಮಸಮು ದ್ರದವರೆಗೆ ಎಡ ಬದಿಯನ್ನು (ನ್ಯಾಯಾಲಯದಲ್ಲಿ ಪ್ರಕರಣ ಇರು ವುದನ್ನು ಹೊರತುಪಡಿಸಿ) ಅಭಿವೃದ್ಧಿ…

ತೆರಕಣಾಂಬಿ ತಾಪಂ ಉಪ ಚುನಾವಣೆ: ಶೇ.73ರಷ್ಟು ಮತದಾನ
ಚಾಮರಾಜನಗರ

ತೆರಕಣಾಂಬಿ ತಾಪಂ ಉಪ ಚುನಾವಣೆ: ಶೇ.73ರಷ್ಟು ಮತದಾನ

October 29, 2018

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಉಪ ಚುನಾವಣೆಯಲ್ಲಿ ಶೇ.73ರಷ್ಟು ಮತದಾನವಾಗಿದೆ. ತಾಲೂಕು ಪಂಚಾಯಿತಿ ಸದಸ್ಯ ಮಹೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿ ಮಹೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣನಾಯ್ಕರ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಒಟ್ಟು 7,980 ಮತದಾರರ ಪೈಕಿ 5,856 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ತೆರಕಣಾಂಬಿ ತಾಪಂ ಕ್ಷೇತ್ರ ವ್ಯಾಪ್ತಿಯ ಲಕ್ಕೂರು, ಗುರುವಿನಪುರ, ತೆರಕಣಾಂಬಿ ಹಾಗೂ ತೆರಕಣಾಂಬಿ ಹುಂಡಿ ಗ್ರಾಮಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಯುವಕ, ಯುವತಿಯರು,…

ಕಾಡಾನೆ ದಾಳಿ; ಮಹಿಳೆ ಬಲಿ
ಚಾಮರಾಜನಗರ

ಕಾಡಾನೆ ದಾಳಿ; ಮಹಿಳೆ ಬಲಿ

October 29, 2018

ಗುಂಡ್ಲುಪೇಟೆ:  ಕಾಡಾನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.ಚಿಕ್ಕತಾಯಮ್ಮ(56) ಕಾಡಾನೆ ದಾಳಿಗೆ ಬಲಿಯಾದವರು. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಕರಿಯಶೆಟ್ಟಿ ಎಂಬುವರ ಜಮೀನಿನಲ್ಲಿ ಹತ್ತಿಯನ್ನು ಬಿಡಿಸುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಮೂವರು ಮಹಿಳಾ ಕಾರ್ಮಿಕರು ಕಾಡಾನೆಯಿಂದ ಪಾರಾಗಿ ದ್ದಾರೆ. ಆದರೆ ಚಿಕ್ಕತಾಯಮ್ಮ ಅವರ…

ಕೊಳ್ಳೇಗಾಲ: 9ನೇ ವಾರ್ಡ್‍ನಲ್ಲಿ ಶೇ.80.96ರಷ್ಟು ಮತದಾನ
ಚಾಮರಾಜನಗರ

ಕೊಳ್ಳೇಗಾಲ: 9ನೇ ವಾರ್ಡ್‍ನಲ್ಲಿ ಶೇ.80.96ರಷ್ಟು ಮತದಾನ

October 29, 2018

ಯುವಕನಿಂದ ಮತದಾನದ ಫೋಟೋ ವೈರಲ್ ಕೊಳ್ಳೇಗಾಲ: ಪಟ್ಟಣದ ನಗರಸಭೆ 9ನೇ ವಾರ್ಡ್‍ನಲ್ಲಿ ನಡೆದ ಚುನಾವಣೆಯಲ್ಲಿ ಶೇ.80.96ರಷ್ಟು ಮತದಾನವಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಟೌನ್ ಶಾಲೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಎಸ್ಪಿ ಅಭ್ಯರ್ಥಿ ನಿಧನದಿಂದ ಈ ಚುನಾವಣೆ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿದ್ದು, ಒಟ್ಟು 1,350 ಮತದಾರರ ಪೈಕಿ 544ಮಂದಿ ಪುರುಷರು, 549 ಮಹಿಳೆಯರು ಸರದಿ…

ಅಕ್ರಮ ಸಂಬಂಧ ಶಂಕೆ: ಪತ್ನಿ ಕೊಂದ ಪತಿ
ಚಾಮರಾಜನಗರ

ಅಕ್ರಮ ಸಂಬಂಧ ಶಂಕೆ: ಪತ್ನಿ ಕೊಂದ ಪತಿ

October 29, 2018

ಯಳಂದೂರು:  ಅಕ್ರಮ ಸಂಬಂಧ ಶಂಕೆ ಯಿಂದ ತನ್ನ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಅವಲ್ ಕಂದಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಭಾಗ್ಯ (25) ಗಂಡನಿಂದ ಕೊಲೆಯಾ ದವರು. ಗ್ರಾಮದ ಉಪ್ಪಾರ ಬಡವಾಣೆ ನಿವಾಸಿ ಕುಂಡಬಲ್ಲಶೆಟ್ಟಿ ಮಗ ಶೇಖರ್ ತನ್ನ ಪತ್ನಿ ಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯ ವಿವರ: ಶೇಖರ್ ಹಾಗೂ ಭಾಗ್ಯ ಒಂದೇ ಗ್ರಾಮದವರಾಗಿದ್ದು, 7 ವರ್ಷಗಳ ಹಿಂದೆ ಪ್ರೀತಿಸಿ ಮದು ವೆಯಾಗಿದ್ದರು. ಆರಂಭದಲ್ಲಿ ಅನೋನ್ಯ ವಾಗಿ ಸಂಸಾರ ನಡೆಸುತ್ತಿದ್ದರು. ಆದರೆ,…

ಬಾಲಕಿ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಬಂಧನ
ಚಾಮರಾಜನಗರ

ಬಾಲಕಿ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಬಂಧನ

October 29, 2018

ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿಯೋರ್ವ ನನ್ನು ನಗರದ ಪಟ್ಟಣ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ವಡ್ಗಲಪುರ ಗ್ರಾಮದ ರಘು(22) ಬಂಧಿತ ವಿದ್ಯಾರ್ಥಿ. ಚಾಮರಾಜನಗರ ತಾಲೂಕಿನ ಹೊಸಹಳ್ಳಿ ಗ್ರಾಮದ ಬಾಲಕಿಯೊಬ್ಬಳು ರಘು ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿದ ಹಿನ್ನೆ ಲೆಯಲ್ಲಿ ಪೊಲೀಸರು ರಘುನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕಾಲೇಜಿ ನಲ್ಲಿ ವ್ಯಾಸಂಗ ಮಾಡುತ್ತಿರುವ ರಘು ನನ್ನನ್ನು ಪ್ರೀತಿಸುತ್ತಿದ್ದನು. ನಗರದಲ್ಲಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ ಹಿನ್ನೆಲೆಯಲ್ಲಿ ನಾನು 2…

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

October 29, 2018

ಹನೂರು:  ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹನೂರು ಬಫರ್ ವಲಯದಲ್ಲಿ ಜರುಗಿದೆ.ಹನೂರಿನಿಂದ ಅಜ್ಜೀಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ರಾತ್ರಿ ಗಸ್ತಿಗೆ ತೆರಳಿದ್ದ ಸಿಬ್ಬಂದಿಗಳು ಜಿಂಕೆ ಮೃತಪಟ್ಟಿದ್ದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಅರಣ್ಯಾ ಧಿಕಾರಿಗಳು ಮೃತಪಟ್ಟಿದ್ದ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು.

1 61 62 63 64 65 141
Translate »