ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

October 29, 2018

ಹನೂರು:  ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹನೂರು ಬಫರ್ ವಲಯದಲ್ಲಿ ಜರುಗಿದೆ.ಹನೂರಿನಿಂದ ಅಜ್ಜೀಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ರಾತ್ರಿ ಗಸ್ತಿಗೆ ತೆರಳಿದ್ದ ಸಿಬ್ಬಂದಿಗಳು ಜಿಂಕೆ ಮೃತಪಟ್ಟಿದ್ದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಅರಣ್ಯಾ ಧಿಕಾರಿಗಳು ಮೃತಪಟ್ಟಿದ್ದ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು.

Translate »