ಸ್ಥಳೀಯ ಸಂಸ್ಥೆ ಚುನಾವಣೆ: ಶಾಂತಿಯುತ ಮತದಾನ
ಕೊಡಗು

ಸ್ಥಳೀಯ ಸಂಸ್ಥೆ ಚುನಾವಣೆ: ಶಾಂತಿಯುತ ಮತದಾನ

October 29, 2018

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳ ಬಹು ತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಯಿತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಮತದಾನ ಚುರುಕು ಪಡೆಯಿತು. ವಿರಾಜಪೇಟೆಯಲ್ಲಿ ಶೇ.68.15, ಕುಶಾಲನಗರ ಶೇ.77, ಸೋಮವಾರಪೇಟೆ 77.94ರಷ್ಟು ಮತ ದಾನವಾದ ಬಗ್ಗೆ ವರದಿಯಾಗಿದೆ.

ವಿರಾಜಪೇಟೆ ವರದಿ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 18 ವಾರ್ಡ್‍ಗಳಿಗೆ ಇಂದು ಶಾಂತಿ ಯುತ ಮತದಾನ ನಡೆಯಿತು.
ಬೆಳಿಗ್ಗೆ 8 ರಿಂದು 9.30ರವರೆಗೆ ಕೆಲವು ಮತ ಗಟ್ಟೆಯಲ್ಲಿ ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದರು. ಮಧ್ಯಾಹ್ನದ ವೇಳೆ ಮಂದಗತಿಯಲ್ಲಿ ಮತದಾನ ವಾದರು ರಾಜಕಿಯ ಪಕ್ಷಗಳ ಮುಖಂಡರುಗಳು ಮತದಾರರ ಮನ ಒಲಿಸುತ್ತಿದ್ದುದು ಕಂಡುಬಂತು. ಚುನಾವಣಾ ಸಂದರ್ಭ ವಿರಾಜಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ವಾರ್ಡ್ 1 ಚರ್ಚ್ ರಸ್ತೆ, ವಾರ್ಡ್ 12 ಮತ್ತು 13 ಮೀನು ಪೇಟೆ ಮತಗಟ್ಟೆ, ನೆಹರುನಗರ 7 ಮತ್ತು 8ನೇ ವಾರ್ಡ್‍ನ ಮತಗಟ್ಟೆ, ವಾರ್ಡ್ 2 ದೇವಾಂಗ ಬೀದಿ, ಹಾಗೂ 3ನೇ ವಾರ್ಡ್ ಅರಸು ನಗರ ಮತಗಟ್ಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕೊಡಗಿನ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಪಂಚಾಯಿತಿ ಚುನಾ ವಣೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದು. ಚಿಕ್ಕ ಪುಟ್ಟ ಘಟನೆಗಳು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮೂರು ಪಟ್ಟಣ ಪಂಚಾಯಿತಿಯಲ್ಲಿಯು ಶಾಂತಿಯುತವಾದ ಮತ ದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭ ಉಪವಿಭಾಗಾಧಿಕಾರಿ ಟಿ.ಜವರೆ ಗೌಡ, ಚುನಾವಣಾಧಿಕಾರಿ ತಹಶೀಲ್ದಾರ್ ಆರ್. ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾ ಧಿಕಾರಿ ಎ.ಎಂ.ಶ್ರೀಧರ್, ಡಿವೈಎಸ್‍ಪಿ ನಾಗಪ್ಪ, ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾಧ್ಯ ಮತ್ತು ದಿವಾಕರ್, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಕುಶಾಲನಗರ ವರದಿ: ಇಲ್ಲಿನ ಪಟ್ಟಣ ಪಂಚಾ ಯಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿ ಯುತವಾಗಿ ಮುಕ್ತಾಯಗೊಂಡಿತು.ಪಪಂನ 16 ವಾರ್ಡ್‍ಗಳಿಗೆ ಚುನಾವಣೆ ನಡೆ ದಿದ್ದು, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆ ಗಳ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಎಲ್ಲ ಮತಗಟ್ಟೆಗಳ ಸುತ್ತ ನೂರು ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲೂ ಶಾಂತಿಯುತವಾಗಿ ಮತದಾನ ನಡೆಯಿತು.

ಮತಗಟ್ಟೆ ಸಂಖ್ಯೆ 7,8, 10, 2,15 ಮತಗಟ್ಟೆ ಸಂಖ್ಯೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತ ದಾನ ನಡೆಯಿತು. ಮತಗಟ್ಟೆ ಸಂಖ್ಯೆ 10, 13, 6, ಮತಗಟ್ಟೆ ಕೇಂದ್ರಗಳಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯಿತು. ಪಟ್ಟಣದಲ್ಲಿ ಬಿಸಿಲಿನ ತಾಪಮಾನ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಮತಗಟ್ಟೆ ಕೇಂದ್ರ ಗಳಲ್ಲಿ ಮತದಾರರ ಆಗಮನ ತುಂಬ ಕಡಿಮೆ ಯಿತ್ತು. ಸಂಜೆ 3 ಗಂಟೆ ನಂತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಚುನಾವಣೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಮತಯಂತ್ರದಲ್ಲಿ ಯಾವುದೇ ದೋಷ ಕಂಡು ಬರಲಿಲ್ಲ.

ಮತದಾನ ಕೇಂದ್ರಗಳಲ್ಲಿ ಅಂಗವಿಕಲರಿಗೆ ಹಾಗೂ ಆರೋಗ್ಯಪೀಡಿತರನ್ನು ಕರೆದು ಕೊಂಡು ಹೋಗಲು ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ವಯೋವೃದ್ಧ ಮತದಾರನ್ನು ವಾಹನಗಳಲ್ಲಿ ಕರೆ ತಂದು ಮತದಾನಕ್ಕೆ ಅವಕಾಶ ಮಾಡಿಕೊಡುವ ದೃಶ್ಯ ಕಂಡುಬಂದಿತು. ಕೆಲವು ವಯೋವೃದ್ಧರು ತಮ್ಮ ಮೊಮ್ಮಕ್ಕಳ ಸಹಾಯದಿಂದ ಹಾಗೂ ಸಂಬಂ ಧಿಕರ ಸಹಾಯದಿಂದ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಮತ ದಾನ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದ ಅಭ್ಯ ರ್ಥಿಗಳು ಯಾವುದೇ ರಾಜಕೀಯ ವೈಷಮ್ಯ ವಿಲ್ಲದೆ ಪರಸ್ಪರ ವಿಶ್ವಾಸದ ಮಾತುಗಳಾಡುತ್ತ ಮತದಾನ ಕೇಂದ್ರದ ಬಳಿ ಮತದಾನಕ್ಕೆ ಬರುವ ಮತದಾರರಲ್ಲಿ ಮತಯಾಚನೆ ಮಾಡುತ್ತ ಅಂತಿಮ ವಾಗಿ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಚುನಾವಣಾಧಿಕಾರಿಗಳು ಪ್ರತಿ ಒಂದು ತಾಸಿಗೊಮ್ಮೆ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದ್ದರು.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾ ಚುನಾವಾಣಾಧಿ ಕಾರಿಯೂ ಆದ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಇತರೆ ಚುನಾವಣಾಧಿಕಾರಿಗಳು ಎಲ್ಲ ಮತದಾನ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.

ಸೋಮವಾರಪೇಟೆ ವರದಿ: ಪಟ್ಟಣ ಪಂಚಾ ಯಿತಿಯ 11 ವಾರ್ಡ್‍ಗಳಿಗೆ ನಡೆದ ಚುನಾವಣೆ ಯಲ್ಲಿ 5023 ಮತಗಳ ಪೈಕಿ 4149 ಮತಗಳು ಚಲಾ ವಣೆಗೊಂಡು ಶೇ.77.94 ಮತದಾನವಾಗಿದೆ.ಒಟ್ಟು ಮತದಾನದಲ್ಲಿ ಪುರುಷರು 2040 ಮತ್ತು ಮಹಿಳೆಯರು 2109 ಮತಗಳನ್ನು ಚಲಾಯಿಸುವ ಮೂಲಕ ಮಹಿಳೆಯರು ಅತೀ ಹೆಚ್ಚು ಮತ ಚಲಾಯಿಸಿದ್ದಾರೆ.

ವಾರ್ಡ್-1ರಲ್ಲಿ ಅತೀ ಕಡಿಮೆ (ಶೇ.66.42) ಮತ ದಾನವಾಗಿದ್ದು, ವಾರ್ಡ್-8ರಲ್ಲಿ (ಶೇ.86.99) ಅತೀ ಹೆಚ್ಚು ಮತದಾನವಾಗಿದೆ.
ವಾರ್ಡ್-1ರ 542 ಮತಗಳ ಪೈಕಿ 360 ಚಲಾ ವಣೆಗೊಂಡಿದ್ದು ಶೇ.66.04 ಮತದಾನವಾಗಿದೆ. ವಾರ್ಡ್-2ರ 245ರಲ್ಲಿ 203 ಮತಗಳು (ಶೇ.82.86), ವಾರ್ಡ್-3ರ 463 ಮತಗಳಲ್ಲಿ 398(ಶೇ.85.96), ವಾರ್ಡ್-4ರ 481 ಮತಗಳ ಪೈಕಿ 354(ಶೇ.73.60), ವಾರ್ಡ್-5ರ 489 ರಲ್ಲಿ 369(ಶೇ.75.46), ವಾರ್ಡ್-6ರ 460ರಲ್ಲಿ 370(ಶೇ.80.43), ವಾರ್ಡ್-7ರ 432ರಲ್ಲಿ 356(ಶೇ.82.41), ವಾರ್ಡ್-8ರ 438ರಲ್ಲಿ 381(ಶೇ.86.99), ವಾರ್ಡ್-9ರ 430ರಲ್ಲಿ 315(ಶೇ.73.26), ವಾರ್ಡ್-10ರ 857ರಲ್ಲಿ 666(ಶೇ.77.71) ಹಾಗೂ ವಾರ್ಡ್-11ರ 486 ಮತಗಳ ಪೈಕಿ 377 ಮತಗಳು ಚಲಾವಣೆ ಗೊಂಡಿದ್ದು ಶೇ.77.57 ಮತದಾನವಾಗಿದೆ.

ಸಹಾಯಕ ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಗಣೇಶ್, ನೋಡಲ್ ಅಧಿಕಾರಿಗಳಾಗಿ ಮಲ್ಲೇಸ್ವಾಮಿ, ಶಿವಕುಮಾರ್ ಮತ್ತು ಸೆಕ್ಟರ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿ ಕಾರಿ ನಾಗರಾಜಯ್ಯ ಕಾರ್ಯನಿರ್ವಹಿಸಿದರು.
ಪ್ರತಿ ಬೂತ್‍ನಲ್ಲಿ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಚುನಾವಣಾ ಧಿಕಾರಿ ಹಾಗೂ ತಹಶೀಲ್ದಾರ್ ಪಿ.ಎಸ್.ಮಹೇಶ್ ತಿಳಿಸಿದ್ದಾರೆ. ಅಲ್ಲದೇ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದ್ದು, ಸೋಮವಾರ ಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾ ಯಿತಿಗಳ 37 ವಾರ್ಡ್‍ಗಳಲ್ಲಿರುವ ಮತಯಂತ್ರ ಗಳನ್ನು ಸೋಮ ವಾರಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಬಿಗಿ ಭಧ್ರತೆಯಲ್ಲಿ ಇರಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿ ದ್ದಾರೆ. ಅಕ್ಟೋಬರ್ 31 ರಂದು ಬುಧವಾರ ಮತ ಎಣಿಕೆ ನಡೆಯಲಿದೆ. ಡಿವೈಎಸ್‍ಪಿ ಮುರಳೀಧರ್ ಮತ್ತು ವೃತ್ತ ಆರಕ್ಷಕ ನಿರೀಕ್ಷಕ ನಂಜುಂಡೇಗೌಡ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Translate »