ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ
ಕೊಡಗು

ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ

October 29, 2018

ಮಡಿಕೇರಿ: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿ ಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ ಎಂಬಾತನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿದೆ.
ಸೋಮವಾರ (ಇಂದು) ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರೂಪೇಶ್‍ನ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಭಾನುವಾರ ಸಂಜೆ 5.15ರ ಸಮಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರೂಪೇಶನನ್ನು ಬಂಧಿಸಿಡಲಾಯಿತು.

ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾ ಗೃಹದಲ್ಲಿದ್ದ ಶಂಕಿತ ನಕ್ಸಲ್ ರೂಪೇಶ್‍ನನ್ನು ಕೇರಳ ಪೊಲೀಸರು ವಿರಾಜಪೇಟೆಯ ಮಾಕುಟ್ಟದವರೆಗೆ ಕರೆ ತಂದು ಬಳಿಕ, ಕೊಡಗು ಜಿಲ್ಲಾ ಕಮಾಂಡೊ ಸಿಬ್ಬಂದಿಗಳಿಗೆ ಹಸ್ತಾಂತರಿಸಿದರು. ಆ ಬಳಿಕ ಕೇರಳ ಹಾಗೂ ಕೊಡಗು ಕಮಾಂಡೊ ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಮಡಿಕೇರಿ ಕೇಂದ್ರ ಕಾರಾಗೃಹಕ್ಕೆ ಕರೆತಂದರು.

ಕೇರಳದ ವೈವೂರು ಸೆಂಟ್ರಲ್ ಜೈಲಿನಿಂದ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ತ್ರಿಶೂಲ್ ವೃತ್ತ ನಿರೀಕ್ಷಕ ಬಾಬು, ಅಧಿಕಾರಿಗ ಳಾದ ಶಿವಶಂಕರನ್, ರಾಶಿ ಹಾಗೂ ತ್ರಿಶೂಲ್ ನಗರ ವೃತ್ತ ನಿರೀಕ್ಷಕ ಟಿ.ಪಿ. ರಂಜನ್ ಅವರು ಗಳು ಬಿಗಿ ಭದ್ರತೆಯಲ್ಲಿ ಕರೆ ತಂದಿದ್ದರು. ಮಡಿ ಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಭರತ್, ಕೊಡಗು ಪೊಲೀಸ್ ಸ್ಪೆಷಲ್ ಬ್ರಾಂಚ್‍ನ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ಹಾಜರಿದ್ದರು. ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಶಂಕಿತ ನಕ್ಸಲ್ ರೂಪೇಶ್‍ನನ್ನು ಕರೆತಂದ ಸಂದರ್ಭ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಪ್ರಕರಣ ಹಿನ್ನೆಲೆ: ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪ ಗಳಿವೆ. ನಕ್ಸಲ್ ಮುಖಂಡ ವಿಕ್ರಂಗೌಡ ಮತ್ತು ತಂಡದೊಂದಿಗೆ ಶಂಕಿತ ನಕ್ಸಲ್ ರೂಪೇಶ್ ನಿಕಟ ಸಂಪರ್ಕ ಹೊಂದಿದ್ದು, 2010ರಲ್ಲಿ ಭಾಗ ಮಂಡಲ ಸಮೀಪದ ಚೇರಂಗಾಲ ಮತ್ತು 2013ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷವಾ ಗಿದ್ದ. ಮಾತ್ರವಲ್ಲದೆ ಕಾಲೂರಿನ ನಿವಾಸಿ ಗಣೇಶ್ ಎಂಬುವರ ಮನೆಗೆ ನುಗ್ಗಿ ಪಡಿತರ ಸಾಮಾಗ್ರಿ ಹೊತ್ತೊಯ್ದಿರುವುದು ಮತ್ತು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಮಡಿಕೇರಿ ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕ ರಣಗಳೂ ದಾಖಲಾಗಿತ್ತು.

ರೂಪೇಶ್ ಬಂಧನ: ಶಂಕಿತ ನಕ್ಸಲ್ ಮುಖಂಡ ರೂಪೇಶ್ ಈ ಹಿಂದೆ 2015ರಲ್ಲಿ ತಮಿಳುನಾ ಡಿನಲ್ಲಿ ನೆಲೆಕಂಡುಕೊಂಡಿದ್ದ ಸಂದರ್ಭ ಆಂಧ್ರ ಪ್ರದೇಶದ ನಕ್ಸಲ್ ನಿಗ್ರಹದಳ, ಗುಪ್ತ ಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ತಮಿಳುನಾಡು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ರೂಪೇಶ್‍ನನ್ನು ಸೆರೆ ಹಿಡಿದಿದ್ದರು. ಮೊದಲಿಗೆ ತಮಿಳುನಾಡಿನ ಸೆಂಟ್ರಲ್ ಜೈಲಿನಲ್ಲಿದ್ದ ರೂಪೇಶ್‍ನನ್ನು ಕೇರಳ ರಾಜ್ಯ ಪೊಲೀಸರು ವಶಕ್ಕೆ ಪಡೆದು ವೈವೂ ರಿನ ಕೇಂದ್ರ ಕಾರಾಗೃಹದಲ್ಲಿರಿಸಿದ್ದರು.
ಬಂಧಿತ ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ಧ ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳಿವೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕೊಡಗು ಜಿಲ್ಲೆಯಲ್ಲಿ ದಾಖಲಾದ 2 ಪ್ರಕರಣದ ವಿಚಾರಣೆಗಾಗಿ 2016ರಲ್ಲಿ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭ ಮಡಿಕೇರಿ ಗ್ರಾಮಾಂತರ ಪೊಲೀಸರು ಶಂಕಿತ ಆರೋಪಿ ರೂಪೇಶ್‍ನನ್ನು ವಶಕ್ಕೆ ಪಡೆದು ಕೊಂಡು ಒಂದು ದಿನ ವಿಚಾರಣೆಯನ್ನು ಕೂಡ ನಡೆಸಿದ್ದರು.

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖ ಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 3ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾನೆ. ಸೋಮವಾರ ಬೆಳಿಗೆ 10 ಗಂಟೆಗೆ ಆರೋಪಿ ರೂಪೇಶ್‍ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಕೇರಳಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.

Translate »