ಬಾಲಕಿ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಬಂಧನ
ಚಾಮರಾಜನಗರ

ಬಾಲಕಿ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಬಂಧನ

October 29, 2018

ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿಯೋರ್ವ ನನ್ನು ನಗರದ ಪಟ್ಟಣ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ವಡ್ಗಲಪುರ ಗ್ರಾಮದ ರಘು(22) ಬಂಧಿತ ವಿದ್ಯಾರ್ಥಿ.

ಚಾಮರಾಜನಗರ ತಾಲೂಕಿನ ಹೊಸಹಳ್ಳಿ ಗ್ರಾಮದ ಬಾಲಕಿಯೊಬ್ಬಳು ರಘು ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿದ ಹಿನ್ನೆ ಲೆಯಲ್ಲಿ ಪೊಲೀಸರು ರಘುನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕಾಲೇಜಿ ನಲ್ಲಿ ವ್ಯಾಸಂಗ ಮಾಡುತ್ತಿರುವ ರಘು ನನ್ನನ್ನು ಪ್ರೀತಿಸುತ್ತಿದ್ದನು. ನಗರದಲ್ಲಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ ಹಿನ್ನೆಲೆಯಲ್ಲಿ ನಾನು 2 ತಿಂಗಳ ಗರ್ಭಿಣಿಯಾ ಗಿದ್ದೇನೆ. ಈಗ ಮದುವೆ ಆಗಲು ನಿರಾಕರಿ ಸುತ್ತಿದ್ದಾನೆ. ಹೀಗಾಗಿ ನನಗೆÀ ನ್ಯಾಯ ದೊರ ಕಿಸಿಕೊಡುವಂತೆ ಬಾಲಕಿ ದೂರು ನೀಡಿ ದ್ದಾಳೆ. ಹೀಗಾಗಿ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪಟ್ಟಣ ಪೊಲೀ ಸರು ತಿಳಿಸಿದ್ದಾರೆ.

Translate »